e sahamathi:ರೈತರಿಗೆ ಸಿಹಿಸುದ್ದಿ…! ಕೃಷಿ ಉತ್ಪನ್ನ ಮಾರಾಟಕ್ಕೆ ವೇದಿಕೆ ಕಲ್ಪಿಸಲಿದೆ ಇ –ಸಹಮತಿ…!!

ರಾಜ್ಯದ ರೈತರ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ರಾಜ್ಯ ಸರ್ಕಾರ ರೈತರ ಕೃಷಿ ಉತ್ಪನ್ನಗಳ ಮಾರಾಟಕ್ಕೆ ವಿಶಾಲ ಮಾರುಕಟ್ಟೆ ಒದಗಿಸಲು ನೆರವಾಗುವ ನಿಟ್ಟಿನಲ್ಲಿ ಇ-ಸಹಮತಿ  ಆಪ್ ಸಿದ್ಧಪಡಿಸಿದೆ. ಸದ್ಯದಲ್ಲೇ ಲಾಂಚ್ ಆಗಲಿರುವ ಈ ಆಪ್ ಮಾರುಕಟ್ಟೆ ವ್ಯವಸ್ಥೆಗೆ ಹೊಸ ಸ್ಪರ್ಶ ನೀಡಲಿದೆ.

ಇ-ಆಡಳಿತ ಇಲಾಖೆ ಎನ್ಐಸಿ ಮೂಲಕ ಈ ಆಪ್ ಸಿದ್ಧಪಡಿಸಿದ್ದು, ಇದರಿಂದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ಸಿಗಲಿದೆ. ಅಷ್ಟೇ ಅಲ್ಲ ರೈತರು ತಮ್ಮ ಉತ್ಪನ್ನಗಳ ಖರೀದಿಗೆ ಖಾಸಗಿ ಕಂಪನಿಗಳನ್ನು ಸಂಪರ್ಕಿಸಲು ಇ-ಸಹಮತಿ ನೆರವಾಗಲಿದೆ.

ಎಪಿಎಂಸಿ ಹೊರತು ಪಡಿಸಿ ಉಳಿದ ವೇದಿಕೆಯಲ್ಲೂ ಕೃಷಿ ಉತ್ಪನ್ನ ಮಾರಾಟಕ್ಕೆ ಇ-ಸಹಮತಿ ಅವಕಾಶ ಕಲ್ಪಿಸಲಿದೆ. ಆಪ್ ರೈತರು ಬೆಳೆದ ಉತ್ಪನ್ನಗಳ ಮಾಹಿತಿ ಹೊಂದಿರಲಿದೆ. ಇ-ಸಹಮತಿ ನಿರ್ವಹಣೆಗೆ ಕನ್ವೆಂಟ್ ಮ್ಯಾನೇಜರ್ ಒಬ್ಬರನ್ನು ನೇಮಿಸಲಾಗುತ್ತದೆ. ಅವರನ್ನು ಕಂಪನಿಗಳು ಸಂರ್ಪಕಿಸಿದರೇ ಅವರು ರೈತರ ಒಪ್ಪಿಗೆ ಪಡೆದ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸುತ್ತಾರೆ.

ಇದರಿಂದ ರೈತರು ತಮ್ಮ ಮನೆಯ ಬಾಗಿಲಿನಲ್ಲೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಲಿದೆ.

ಅಲ್ಲದೇ ರೈತರು ಉತ್ಪನ್ನಗಳ ಬೆಲೆ ನಿಗದಿಗೂ ಸ್ವತಂತ್ರರಾಗಿದ್ದು, ಉತ್ಪನ್ನಗಳನ್ನು ಮಾರಾಟ ಮಾಡಿದ ಬಳಿಕ ಹಣಕ್ಕಾಗಿ ಕಾಯುವ ಸ್ಥಿತಿಯೂ ತಪ್ಪಲಿದೆ.

ಪ್ಲಿಫ್ ಕಾರ್ಟ್, ಬಿಗ್ ಬಾಸ್ಕೆಟ್, ರಿಲಯನ್ಸ್ ಫ್ರೆಸ್, ನೇಚರ್ ಬಾಸ್ಕೆಟ್ ನಂತಹ ಆನ್ ಲೈನ್ ಮಾರುಕಟ್ಟೆಗಳಿಗೂ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಅವಕಾಶ ಸಿಗಲಿದೆ.

Comments are closed.