Bangalore Heavy Rain : ಬೆಂಗಳೂರಲ್ಲಿ ಭಾರೀ ಮಳೆ, ಮನೆಗಳಿಗೆ ನೀರು ನುಗ್ಗಿ ಅವಾಂತರ

ಬೆಂಗಳೂರು : ಕಳೆದ ರಾತ್ರಿ ಎಡೆಬಿಡದೆ ಸುರಿದ ಭಾರೀ ಮಳೆಗೆ ಸಿಲಿಕಾನ್‌ ಸಿಟಿ ಬೆಂಗಳೂರು ಅಕ್ಷರಶಃ ತತ್ತರಿಸಿ ಹೋಗಿದೆ. ನಗರದ ಬಹುತೇಕ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಹಲವು ಬಡಾವಣೆಗಳು ಕೆರೆಯಂತಾಗಿವೆ. ಇನ್ನು ಜಾನುವಾರುಗಳನ್ನು ಕಳೆದುಕೊಂಡು ಜನರು ಕಂಬನಿ ಮಿಡಿಯುತ್ತಿದ್ದಾರೆ.

ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಬೆಂಗಳೂರಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿದಿದೆ. ನಗರದ ರಾಜರಾಜೇಶ್ವರಿ ನಗರ, ಡಾಲರ್ಸ್‌ ಕಾಲೋನಿ, ಮಲ್ಲತ್ತಹಳ್ಳಿ, ನಾಗರಬಾವಿ ಮುಂತಾದ ಕಡೆಗಳಲ್ಲಿ ಸುರಿದ ಮಳೆಯಿಂದಾಗಿ ಮನೆಯೊಳಗೆ ನೀರು ನುಗ್ಗಿದೆ. ರಾಜರಾಜೇಶ್ವರಿ ನಗರದ ಪ್ರಮೋದಾ ಲೇಔಟ್‌ನಲ್ಲಿ ನೀರು ನುಗ್ಗಿದ್ದು ಸುಮಾರು 15ಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ. ಹಲವೆಡೆಗಳಲ್ಲಿ ಬೈಕು, ಕಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.

ಇನ್ನು ಮಲ್ಲತಹಳ್ಳಿಯಲ್ಲಿ ರಾಜಕಾಲುವೆಯ ನೀರು ಮನೆಗಳಿಗೆ ನುಗ್ಗಿದ್ದು, ಮಲ್ಲತಹಳ್ಳಿಯ ಪ್ರಮುಖ ಪ್ರದೇಶಗಳು ಕೆರೆಯಂತಾಗಿದೆ. ಅಲ್ಲದೇ ನೀರು ನುಗ್ಗಿ ಜಾನುವಾರುಗಳು ಸಾವನ್ನಪ್ಪಿವೆ. ನಾಗರಬಾವಿಯಲ್ಲಿ ಮಳೆಯ ನೀರಿನಿಂದಾಗಿ ಕಂಪೌಂಡ್‌ ಗೋಡೆ ಕುಸಿತವಾಗಿದೆ.

ಇದನ್ನೂ ಓದಿ : ವಾಹನ ಚಾಲಕರಿಗೆ ಎಚ್ಚರ ! ಡ್ರೈವಿಂಗ್‌ ವೇಳೆ ಬ್ಲೂಟೂತ್‌, ಇಯರ್‌ ಪೋನ್‌ ಅಷ್ಟೇ ಅಲ್ಲಾ, Google Map ಬಳಸಿದ್ರೂ ಬೀಳುತ್ತೆ ದಂಡ

ಇನ್ನು ನಗರದ ಬಹುತೇಕ ಕಡೆಗಳಲ್ಲಿ ಕಳೆದ ರಾತ್ರಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ರಾಜರಾಜೇಶ್ವರಿ ನಗರದ ವ್ಯಾಪ್ತಿಯಲ್ಲಿ ಸಚಿವ ಮುನಿರತ್ನ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಪರಿಹಾರದ ಭರವಸೆಯನ್ನು ನೀಡಿದ್ದಾರೆ.

ಕೋರಮಂಗಲ, ಜೆಸಿನಗರ, ಸಂಪಂಗಿ ರಾಮನಗರ ಮುಂತಾದ ಕಡೆಗಳಲ್ಲಿಯೂ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಜನರು ಮನೆಗೆ ನುಗ್ಗಿದ್ದ ನೀರನ್ನು ತಾವೇ ತೆರವು ಮಾಡುವ ಕಾರ್ಯವನ್ನು ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ಸ್ಥಳಕ್ಕೆ ಬಂದಿಲ್ಲ. ಹೀಗಾಗಿ ಸಾರ್ವಜನಿಕರು ಬಿಬಿಎಂಪಿ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : 4 ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರಲ್ಲಿ ಕಳೆದ ರಾತ್ರಿ 12 ಮಿ. ಮೀ ಮಳೆ ಸುರಿದೆ ಎಂದು ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ. ಪ್ರಮುಖವಾಗಿ ಜ್ಞಾನಭಾರತಿಯಲ್ಲಿ 98 ಮಿ.ಮೀ, ನಾಗರಬಾವಿ 91 ಮಿ.ಮೀ, ಹಂಪಿನಗರ 90 ಮಿ.ಮೀ., ನಂದಿನಿ ಲೇಔಟ್‌ 78 ಮಿ.ಮೀ, ನಾಗೇನಹಳ್ಳಿ 67.5 ಮಿ.ಮೀ, ಮಾರುತಿ ಮಂದಿರ 64.5 ಮಿ.ಮೀ, ವಿವಿ ಪುರಂ 58.5 ಮಿ.ಮೀ, ರಾಜರಾಜೇಶ್ವರಿ ನಗರ 53.5 ಮಿ.ಮೀ., ದಯಾನಂದ ನಗರ 48.5 ಮಿ.ಮೀ. ಮಳೆ ಸುರಿದಿದೆ.

( Bangalore Heavy rain last night water logged in to several homes )

Comments are closed.