India Corona Updates : ಭಾರತದಲ್ಲಿ ಭಾರೀ ಇಳಿಕೆ ಕಂಡ ಕೊರೊನಾ

ನವದೆಹಲಿ : ಭಾರತದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ದಿನೇ ದಿನೇ ಇಳಿಕೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ಏರಿಕೆ ಕಂಡಿದ್ದ ಕೊರೊನಾ, ಕಳೆದೊಂದು ವಾರದಿಂದಲೂ ಇಳಿಕೆಯ ಹಾದಿಯಲ್ಲಿಯೇ ಸಾಗುತ್ತಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ನಿನ್ನೆಯ ಪ್ರಕರಣಗಳಿಗೆ ಹೋಲಿಕೆ ಮಾಡಿದ್ರೆ ಇಂದು ಕೊರೋನಾ ಕೇಸ್ ಇಳಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ 20,799 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಈ ಕುರಿತಂತೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ 20,799 ಜನರಿಗೆ ಹೊಸದಾಗಿ ಕೊರೋನಾ ದೃಢಪಟ್ಟಿದೆ. ಸೋಂಕಿತರಾದಂತ 26,718 ಜನರು ಗುಣಮುಖರಾಗಿದ್ದಾರೆ. 180 ಸೋಂಕಿತರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: India Corona Updates : ಭಾರತದಲ್ಲಿ ತಗ್ಗಿದ ಕೊರೊನಾ ಅಬ್ಬರ : 24,354 ಹೊಸ ಕೋವಿಡ್-19 ಪ್ರಕರಣಗಳನ್ನು ದಾಖಲು

ಭಾರತದಲ್ಲಿ ಸದ್ಯ 2,64,458 ಸಕ್ರೀಯ ಪ್ರಕರಣಗಳಿದ್ದು, 3,31,21,247 ಇದುವರೆಗೆ ಕೊರೊನಾ ಸೊಂಕಿನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಹೆಮ್ಮಾರಿಯ ಹೊಡೆತಕ್ಕೆ 4,48,997 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿನ ವಿರುದ್ದದ ಹೋರಾಟ ಜೋರಾಗಿದ್ದು, ಇದುವರೆಗೆ ಒಟ್ಟು 90,79,32,861 ಜನರಿಗೆ ಲಸಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ: Covid -19: ಮಕ್ಕಳಿಗೆ 10,000 ಕೋವಿಡ್ ಕಿಟ್‌ ಉಚಿತ ವಿತರಣೆ : 3 ಅಲೆ ತಡೆಗೆ ಕೇಂದ್ರದ ಸಿದ್ದತೆ

(Corona has seen a huge decline in India)

Comments are closed.