GODD NEWS : ಬಡವರಿಗೆ ಇನ್ಮುಂದೆ ಉಚಿತ ವಿದ್ಯುತ್‌ : ಬೆಳಕನ್ನೇ ಕಾಣದವರಿಗೆ ಸಿಹಿ ಸುದ್ದಿ ಕೊಟ್ಟ ಸರಕಾರ

ಬೆಂಗಳೂರು : ವಿದ್ಯುತ್‌ ಬೆಳಕನ್ನೇ ಕಾಣದ ಜನರಿಗೆ ರಾಜ್ಯ ಸರಕಾರ ಗುಡ್‌ನ್ಯೂಸ್‌ ಕೊಟ್ಟಿದೆ. ರಾಜ್ಯದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಬಡ ಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಡಿಸೆಂಬರ್ 10ರೊಳಗೆ ರಾಜ್ಯದ 25 ಸಾವಿರ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಇಂಧನ ಇಲಾಖೆ ಆದೇಶಿಸಿದೆ.

ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಬಡವರಿಗೆ ವಿದ್ಯುತ್‌ ಪೂರೈಕೆ ಮಾಡುವುದು ರಾಜ್ಯ ಸರ್ಕಾರದ ಮೊದಲ ಆದ್ಯತೆ. ಪ್ರಾಥಮಿಕ ವರದಿಯಲ್ಲಿ ಸದ್ಯ 23-25 ಸಾವಿರ ಬಡ ಕುಟುಂಬಗಳಿಗೆ ವಿದ್ಯುತ್ ಇಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಅಧಿಕಾರಿಗಳು ಮಾಧ್ಯಮಗಳ ಮುಂದೆ ಬಾಯ್ಬಿಡುವಂತಿಲ್ಲ : ಸಚಿವ ಆರ್. ಅಶೋಕ್ ತಾಕೀತು

ಇಂತಹ ಜನರಿಗೆ ಇವರಿಗೆ ವಿದ್ಯುತ್ ಸರಬರಾಜು ಕಾಮಗಾರಿಗೆ ಮೀಸಲಿರುವ ಮೊತ್ತವನ್ನು ಬಳಸಿಕೊಂಡು ಡಿಸೆಂಬರ್ 10ರೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಆದೇಶಿಸಿದ್ದಾರೆ. ಕೇಂದ್ರ ಸರ್ಕಾರದ ದೀನದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆ ಹಾಗೂ ಸೌಭಾಗ್ಯ ಯೋಜನೆಯಡಿಯಲ್ಲಿ ಒಟ್ಟು 4.29 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು.

ಈ ಯೋಜನೆ ಡಿಸೆಂಬರ್ 2020 ಕ್ಕೆ ಅಂತ್ಯಗೊಂಡಿದೆ. ಆದರೆ ಯೋಜನೆ ಮುಕ್ತಾಯಗೊಂಡ ಬಳಿಕ ವಿದ್ಯುತ್ ಸಂಪರ್ಕ ಪಡೆಯದೇ ಬಾಕಿ ಇರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಅಂತಹವರಿಗೆ ಸಂಪರ್ಕ ಕಲ್ಪಿಸಬೇಕು ಎಂದು ಅಧೀನ ಕಾರ್ಯದರ್ಶಿ ಎನ್. ಮಂಗಳಗೌರಿ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ :Free Sand : ಉಚಿತ ಮರಳು ನೀಡೋದಾಗಿ ಆಶ್ವಾಸನೆ ಕೊಟ್ಟು, ಕೈಕೊಟ್ಟ ಸಚಿವರು

( State government that has given Free electricity connection for the poor people)

Comments are closed.