ಜನರ ಆಕ್ರೋಶಕ್ಕೆ ಬೆದರಿದ ಸರ್ಕಾರ….! ಮಾಸ್ಕ್ ದಂಡದ ಮೊತ್ತ ಸಾವಿರದಿಂದ 250ಕ್ಕೆ ಇಳಿಕೆ

0

ಬೆಂಗಳೂರು: ಮಾಸ್ಕ್ ಧರಿಸದ ಜನರಿಗೆ ದಂಡ ವಿಧಿಸುವ ನೆಪದಲ್ಲಿ ಬಡ ಜನರ ಲೂಟಿಗೆ ಮುಂದಾಗಿದ್ದ ರಾಜ್ಯ ಸರ್ಕಾರ ಜನರ ಆಕ್ರೋಶಕ್ಕೆ ಬೆಚ್ಚಿಬಿದ್ದಿದ್ದು, ದಂಡದ ಮೊತ್ತದಲ್ಲಿ ಭಾರಿ ಇಳಿಕೆ ಘೋಷಿಸಿದೆ.

ಮಾಸ್ಕ್ ಕಡ್ಡಾಯಗೊಳಿಸಿದ್ದ ರಾಜ್ಯ ಸರ್ಕಾರ, ಮಾಸ್ಕ ಧರಿಸದವರಿಗೆ 250 ದಂಡ ವಿಧಿಸಲು ಮುಂದಾಗಿತ್ತು. ಆದರೆ ಇದಕ್ಕೆ ಜನರು ಕ್ಯಾರೇ ಎನ್ನದ ಕಾರಣಕ್ಕೆ ದಿಢೀರ್ ದಂಡದ ಮೊತ್ತವನ್ನು 1 ಸಾವಿರ ರೂಪಾಯಿಗೆ ಏರಿಸಿ ಆದೇಶ ಹೊರಡಿಸಿತ್ತು. ಕೊರೋನಾ ಲಾಕ್ ಡೌನ್ ನಿಂದ ಜೀವನ ನಡೆಸೋದೆ ಕಷ್ಟ ಅನ್ನೋ ಸ್ಥಿತಿಯಲ್ಲಿದ್ದ ಸಾರ್ವಜನಿಕರು ಸರ್ಕಾರದ  ನಿಯಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಹಲವೆಡೆ ದಂಡ ವಿಧಿಸುವ ವೇಳೆ ಮಾರ್ಷಲ್ ಗಳ ಜೊತೆ ಜನರು ವಾಗ್ವಾದಕ್ಕೆ ಮುಂದಾಗಿದ್ದರು. ಈ ದುಬಾರಿ ದಂಡದ ಕುರಿತು ಮಾಧ್ಯಮಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರ ದಂಡ ಮೊತ್ತವನ್ನು 1 ಸಾವಿರದಿಂದ 250 ರೂಪಾಯಿಗೆ ಇಳಿಸಿದೆ.

ಇನ್ನು ಗ್ರಾಮೀಣ ಭಾಗದಲ್ಲೂ ದಂಡದ ಮೊತ್ತವನ್ನು ಇಳಿಸಿ ಸಿಎಂ ಬಿಎಸ್ವೈ ಆದೇಶ ಹೊರಡಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ  ಇದುವರೆಗೂ ಮಾಸ್ಕ್ ಧರಿಸದವರಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತಿತ್ತು, ಆದರೆ ಈಗ  ದಂಡದ ಮೊತ್ತವನ್ನು 100 ರೂಪಾಯಿಗೆ ಇಳಿಸಲಾಗಿದೆ.

ನಗರದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದಾಗಿನಿಂದ ಬಿಬಿಎಂಪಿ ದಂಡ ಸಂಗ್ರಹಣೆಯಲ್ಲಿ ತೊಡಗಿದ್ದು, ಇದುವರೆಗೂ 2 ಕೋಟಿ 82 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದೆ.

Leave A Reply

Your email address will not be published.