ಕೋಟದಾದ್ಯಂತ ಕೊರೋರ್ನಾಭಟ : ಒಂದೇ ದಿನ 16 ಮಂದಿಗೆ ಸೋಂಕು

0

ಕೋಟ : ಕೊರೊನಾ ವೈರಸ್ ಸೋಂಕಿನ ಆರ್ಭಟ ಉಡುಪಿ ಜಿಲ್ಲೆಯ ಕೋಟ ಹೋಬಳಿಯಲ್ಲಿ ಮುಂದುವರಿದಿದೆ. ಇಂದು ಒಂದೇ ದಿನ ಬರೋಬ್ಬರಿ 16 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಕಳೆದೆರಡು ದಿನಗಳಿಂದಲೂ ಕೋಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದ್ದರೂ ಕೂಡ ಶನಿವಾರ ಏಕಾಏಕಿ ಬಾರೀ ಪ್ರಮಾಣದಲ್ಲಿ ಏಕೆಯನ್ನು ಕಂಡಿದೆ. ಕೋಟತಟ್ಟು ಗ್ರಾಮದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಒಂದೇ ಮನೆಯ ಇಬ್ಬರು ಪಾಸಿಟಿವ್ ವ್ಯಕ್ತಿಗಳಿಗೆ ಮನೆಯಲ್ಲೇ ಐಸೋಲೇಶನ್ ವಾಡ್೯ ಸಿದ್ದಪಡಿಸಲಾಗಿದ್ದು, ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಬಿಲ್ಲಾಡಿ ಗ್ರಾಮದಲ್ಲಿ 2, ಶಿರಿಯಾರ ಗ್ರಾಮದಲ್ಲಿ 2, ಹೇರಾಡಿಯಲ್ಲಿ 1 ಹಾಗೂ ಕೋಡಿ ಗ್ರಾಮದಲ್ಲಿ ಓರ್ವರಿಗೆ ಸೋಂಕು ದೃಢಪಟ್ಟಿದೆ. ಇನ್ನು 33ನೇ ಶಿರೂರು ಗ್ರಾಮಕ್ಕೂ ಕೊರೊನಾ ಸೋಂಕು ಒಕ್ಕರಿಸಿದ್ದು, ಇಂದು ಇಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.

ನಡೂರು ಗ್ರಾಮದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ. ಶಿರಿಯಾರ ಗ್ರಾಮದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದ್ದು, ಇಂದು ಗ್ರಾಮದ 6 ಮಂದಿಗೆ ಸೋಂಕು ಒಕ್ಕರಿಸಿದೆ.

ಕೋಟ ಸುತ್ತಮುತ್ತಲಿನ ಕೊರೊನಾ ಸೋಂಕಿತರ ಮನೆಗಳನ್ನು ಬ್ರಹ್ಮಾವರ ತಹಶಿಲ್ದಾರ್ ಕಿರಣ್ ಗೌರಯ್ಯ ನೇತ್ರತ್ವದಲ್ಲಿ ಸೀಲ್ ಡೌನ್ ಮಾಡಲಾಗಿದೆ.

ಕೋಟ ಕಂದಾಯ ನೀರಿಕ್ಷಕರಾದ ರಾಜು, ಕೋಟ ಗ್ರಾಮ ಲೆಕ್ಕಿಗ ಚಲುವರಾಜು, ಆರೋಗ್ಯ ಕೇಂದ್ರದ ಸಿಬ್ಬಂದಿ ಹರಿಶ್ಚಂದ್ರ, ಕೋಟ ಠಾಣೆಯ ಆರಕ್ಷಕ ರಾಜು, ವಿವಿಧ ಗ್ರಾಮಗಳ ಗ್ರಾಮಲೆಕ್ಕಿಗರು, ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.

Leave A Reply

Your email address will not be published.