ಬದಲಾಗ್ತಾರಾ ಕರ್ನಾಟಕದ ಮುಖ್ಯಮಂತ್ರಿ ? ಸಂಚಲನ ಮೂಡಿಸಿದೆ ಹೈಕಮಾಂಡ್ ಆ ರಹಸ್ಯ ಸಂದೇಶ !

0

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಬಿ,ಎಸ್.ಯಡಿಯೂರಪ್ಪ ಹುದ್ದೆಗೆ ಕುತ್ತು ಬರುತ್ತಾ ? ರಾಜ್ಯದಲ್ಲಿ ಅಗಸ್ಟ್ ತಿಂಗಳಿನಲ್ಲಿ ಭಾರೀ ರಾಜಕೀಯ ಬದಲಾವಣೆಯಾಗುತ್ತಾ ? ಈ ಕುರಿತು ಬಾರೀ ಚರ್ಚೆ ನಡೆಯುತ್ತಿದೆ. ಈ ನಡುವಲ್ಲೇ ಹೈಕಮಾಂಡ್ ಕಳುಹಿಸಿರುವ ರಹಸ್ಯ ಸಂದೇಶ ಇದೀಗ ಬಿಜೆಪಿ ಪಾಳಯದಲ್ಲಿ ನಡುಕ ಹುಟ್ಟಿಸಿದೆ.

ಹೌದು, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ವರ್ಷವೇ ಕಳೆದಿದೆ. ಸಿಎಂ ಕುರ್ಚಿಯಲ್ಲಿ ಕುಳಿತಾಗಿನಿಂದಲೂ ಯಡಿಯೂರಪ್ಪ ಆತಂಕದಿಂದಲೇ ಅಧಿಕಾರ ನಡೆಸುತ್ತಿದ್ದಾರೆ. ಅದ್ಯಾವಾಗ ಸಿಎಂ ಕುರ್ಚಿಗೆ ಕುತ್ತು ಬರುತ್ತೋ ಅನ್ನು ಭಯ ಯಡಿಯೂರಪ್ಪ ಅವರನ್ನು ಕಾಡುತ್ತಿದೆ. ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಲ್ಲಿ ಕುರಿಸೋ ಸಂದರ್ಭದಲ್ಲಿ ಹೈಕಮಾಂಡ್ ಗೆ ಸುತಾರಾಂ ಇಷ್ಟವಿರಲಿಲ್ಲ. ರಾಜ್ಯದಲ್ಲಿ ಪರ್ಯಾಯ ನಾಯಕರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಯಡಿಯೂರಪ್ಪ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ಮಾಡುವುದರ ಜೊತೆಗೆ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಕ್ಯಾಬಿನೇಟ್ ಸಚಿವರನ್ನಾಗಿ ಮಾಡುವ ಕುರಿತು ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದರು ಎನ್ನಲಾಗಿತ್ತು. ಆದರೆ ಪಟ್ಟುಬಿಡದ ಯಡಿಯೂರಪ್ಪ ಕೊನೆಗೂ 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದ್ದರು.

ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿಯೇ ಕೇವಲ 6 ತಿಂಗಳು ಕಳೆಯುತ್ತಿದ್ದಂತೆಯೇ ಸಿಎಂ ಹುದ್ದೆಗೆ ರಾಜೀನಾಮೆಯನ್ನು ನೀಡಬೇಕೆಂಬ ಷರತ್ತನ್ನು ಕೂಡ ಹೈಕಮಾಂಡ್ ವಿಧಿಸಿತ್ತು. ಆದರೆ ಯಡಿಯೂರಪ್ಪ ಸಿಎಂ ಹುದ್ದೆಯನ್ನು ಸವಾಲಾಗಿ ಸ್ವೀಕರಿಸಿದ್ದರು. ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನಡೆಸುವುದಾಗಿ ಹೇಳಿಕೊಂಡು ಅಧಿಕಾರಕ್ಕೇರಿದ ಯಡಿಯೂರಪ್ಪ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನಾಯಕರ ಜೊತೆಗೆ ಸಾಮರಸ್ಯದ ಕೊರತೆ ಎದುರಾದಾಗಲೂ ಯಡಿಯೂರಪ್ಪ ಸಮಸ್ಯೆಯನ್ನು ನೀಟಾಗಿಯೇ ಪರಿಹಾರ ಮಾಡಿಕೊಂಡಿದ್ರು.

ಆರ್ಥಿಕ ಕೊರತೆಯ ನಡುವಲ್ಲೇ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಸಾಲದಕ್ಕೆ ಕೊರೊನಾ ವೈರಸ್ ಸೋಂಕು ಎದುರಾದಾಗ ಆರಂಭದಲ್ಲಿ ಪ್ರಧಾನಿ ಮೋದಿ ಮೆಚ್ಚುಗೆಯನ್ನೂ ಗಳಿಸಿದ್ದರು. ಈ ನಡುವಲ್ಲೇ ಸಚಿವ ಸಂಪುಟ ವಿಸ್ತರಣೆ, ಶಾಸಕರಿಗೆ ಅನುದಾನ ಬಿಡುಗಡೆ ತಾರತಮ್ಯದ ವಿಚಾರವಾಗಿ ಹಲವು ಶಾಸಕರು ಯಡಿಯೂರಪ್ಪ ವಿರುದ್ದ ತೊಡೆತಟ್ಟಿದ್ದರು. ಅಸಮಾಧಾನಿತ ಶಾಸಕರು ಪ್ರತ್ಯೇಕವಾಗಿ ಸಭೆ ನಡೆಸಿದ್ರೂ ಯಡಿಯೂರಪ್ಪ ತಲೆಕೆಡಿಸಿಕೊಂಡಿರಲಿಲ್ಲ. ಈ ನಡುವಲ್ಲೇ ಅಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾಯಿಸುತ್ತಾರೆಂಬ ಮಾತು ಕೇಳಿಬರುತ್ತಿದೆ.

ಬಿಜೆಪಿಯ ಹಿರಿಯ ನಾಯಕರಾದ ಪ್ರಹ್ಲಾದ್ ಜೋಷಿ, ಸಂಸದ ಸುರೇಶ್ ಅಂಗಡಿ, ಬಸವನಗೌಡ ಪಾಟೀಲ ಯತ್ನಾಳ್, ಆರ್.ಅಶೋಕ್, ಅಶ್ವಥ್ ನಾರಾಯಣ್ ಅವರ ಹೆಸರುಗಳು ಮುಖ್ಯಮಂತ್ರಿ ರೇಸ್ ನಲ್ಲಿ ಕೇಳಿಬಂದಿತ್ತು. ಹಲವು ಶಾಸಕರು ಸಚಿವರಾಗುವ ಕನಸನ್ನೂ ಕಂಡಿದ್ದರು. ಆದ್ರೀಗ ಹೈಕಮಾಂಡ್ ಕಳುಹಿಸಿರುವ ರಹಸ್ಯ ಸಂದೇಶ ಅಸಮಾಧಾನಿತ ಶಾಸಕರಿಗೆ ನಡುಕ ಹುಟ್ಟಿಸಿದೆ. ಹೈಕಮಾಂಡ್ ಕಳುಹಿಸಿರುವ ರಹಸ್ಯ ಸಂದೇಶ ಇದೀಗ ರಾಜಾಹುಲಿಗೆ ಆನೆಬಲ ಬಂದಂತಾಗಿದೆ. ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರನ್ನು ಬದಲಾಯಿಸುವುದಕ್ಕೆ ಸಾಧ್ಯವೇ ಇಲ್ಲಾ.

ಒಂದೊಮ್ಮೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಪತನವಾಗೋದು ಗ್ಯಾರಂಟಿ. ಅಲ್ಲದೇ ಸದ್ಯದಲ್ಲಿಯೇ ಪಂಚಾಯತ್ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ಎದುರಾಗಲಿದ್ದು, ಯಡಿಯೂರಪ್ಪ ಅನುಪಸ್ಥಿತಿಯಲ್ಲಿ ಚುನಾವಣೆ ಎದುರಿಸುವ ನಾಯಕರು ಬಿಜೆಪಿಯಲ್ಲಿಲ್ಲ ಅನ್ನೋದು ಬಿಜೆಪಿ ಹೈಕಮಾಂಡ್ ಗೆ ಸ್ಪಷ್ಟವಾಗಿ ಗೊತ್ತಿದೆ. ಇದೇ ಕಾರಣಕ್ಕೆ ಬಿಬಿಎಂಪಿ ಚುನಾವಣೆಯ ವರೆಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಪಕ್ಕಾ.

ಹೈಕಮಾಂಡ್ ರಹಸ್ಯ ಸಂದೇಶ ಯಡಿಯೂರಪ್ಪನವರಿಗೆ ಸಿಗುತ್ತಿದ್ದಂತೆಯೇ ಬಿಎಸ್ ವೈ ಚುರುಕಾಗಿದ್ದಾರೆ. ಅಧಿಕಾರಿಗಳು, ಶಾಸಕರು ಹಾಗೂ ಸಚಿವರಿಗೂ ಬಿಸಿಮುಟ್ಟಿಸುವ ಕಾರ್ಯವನ್ನೂ ಮಾಡಿದ್ದಾರೆ. ಮಾತ್ರವಲ್ಲ ತಾನು ಸೂಚಿಸಿದವರಿಗೆ ಪರಿಷತ್ ಸ್ಥಾನವನ್ನು ಕೊಡಿಸುವಲ್ಲಿಯೂ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಹೀಗಾಗಿಯೇ ಯಡಿಯೂರಪ್ಪ ಮುಂದಿನ ದಿನಗಳಲ್ಲಿ ಇನ್ನಷ್ಟು ಚುರುಕಾಗಿ ಕೆಲಸ ಮಾಡೋದು ಪಕ್ಕಾ. ಅಷ್ಟೇ ಯಾಕೆ. ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಕೆಳಗಿಳಿಸಿದ್ದೇ ಆದ್ರೆ ಬಿಜೆಪಿ ಒಡೆದ ಮನೆಯಾಗೋದು ಗ್ಯಾರಂಟಿ. ರಹಸ್ಯ ಸಂದೇಶದ ಬೆನ್ನಲ್ಲೇ ಯಡಿಯೂರಪ್ಪ ವಿರುದ್ದ ತೊಡೆತಟ್ಟಿದ ನಾಯಕರೂ ಸೈಲೆಂಟ್ ಆಗಿದ್ದಾರೆ.

Leave A Reply

Your email address will not be published.