ಬಡ ಕೂಲಿಕಾರ್ಮಿಕರ ಪ್ರಯಾಣಕ್ಕೆ ದುಪ್ಪಟ್ಟು ಬೆಲೆ : NRIಗಳಿಗೆ ಉಚಿತ ಪ್ರಯಾಣ, KSRTC ವಿರುದ್ದ ಬಾರೀ ಆಕ್ರೋಶ

0

ಬೆಂಗಳೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಹಲವು ಜಿಲ್ಲೆಗಳಲ್ಲಿ ಬಂಧಿಯಾಗಿರುವ ಕಾರ್ಮಿಕರಿಗೆ ತಮ್ಮ ಊರಿಗಳಿಗೆ ತೆರಳಲು ಕೇಂದ್ರ ಸರಕಾರ ಅವಕಾಶವನ್ನು ಕಲ್ಪಿಸಿದೆ. ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸುವಂತೆ ರಾಜ್ಯ ಸರಕಾರಿಗಳಿಗೆ ಸೂಚನೆಯನ್ನು ನೀಡಿದೆ. ಆದರೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಿರೋ ಸರಕಾರ ದುಪ್ಪಟ್ಟು ಬೆಲೆಯನ್ನು ವಸೂಲಿ ಮಾಡುತ್ತಿದೆ. ವಿದೇಶದಲ್ಲಿ ನೆಲೆಸಿರುವವರನ್ನು ವಿಶೇಷ ವಿಮಾನದ ಮೂಲಕ ಉಚಿತವಾಗಿ ಕರೆತರಲು ಹೊರಟಿರೋ ಸರಕಾರ ಕಾರ್ಮಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರೋದು ಆಕ್ರೋಶಕ್ಕೆ ಕಾರಣವಾಗಿದೆ.

ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ 3.0 ಜಾರಿ ಮಾಡಲಾಗಿದೆ. ಮೇ 17ರ ವರೆಗೂ ಲಾಕ್ ಡೌನ್ ಆದೇಶ ಮುಂದುವರಿದಿರೋ ಹಿನ್ನೆಲೆಯಲ್ಲಿ ಕಾರ್ಮಿಕರು ಕೆಲಸವಿಲ್ಲದೇ ಹೈರಾಣಾಗಿದ್ದಾರೆ. ಹೀಗಾಗಿಯೇ ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಕೇಂದ್ರ ಸರಕಾರ ತಮ್ಮ ಊರುಗಳಿಗೆ ತೆರಳು ಅವಕಾಶವನ್ನು ಕಲ್ಪಿಸಿದೆ.

ಕೇಂದ್ರ ಸರಕಾರದ ಆದೇಶದಂತೆ ಕಾರ್ಮಿಕರು ಎಲ್ಲಿ ಇದ್ದಾರೋ ಅಲ್ಲಿಂದಲೇ ಅವರನ್ನು ಬಸ್ಸುಗಳ ಮೂಲಕ ತಮ್ಮ ತಮ್ಮ ಊರುಗಳಿಗೆ ಸಾಗಾಟ ಮಾಡಬೇಕು. ಆಂತೆಯೇ ರಾಜ್ಯ ಸರಕಾರ ಕೆಎಸ್ಆರ್ ಟಿಸಿ ಬಸ್ಸುಗಳ ಮೂಲಕ ಕಾರ್ಮಿಕರನ್ನು ಊರುಗಳಿಗೆ ಕಳುಹಿಸಲು ಮುಂದಾಗಿದೆ. ಹೀಗಾಗಿಯೇ ಮೆಜಿಸ್ಟಿಕ್ ಗೆ ನೂರಾರು ಮಂದಿ ಕಾರ್ಮಿಕರು ಆಗಮಿಸಿದ್ದರು. ಆದರೆ ಕೆಎಸ್ಆರ್ ಟಿಸಿ ಅಧಿಕಾರಿಗಳು ಕಾರ್ಮಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ್ದಾರೆ. ದುರಂತರವೆಂದ್ರೆ ಸಣ್ಣ ಸಣ್ಣ ಮಕ್ಕಳಿಗೂ ಕೂಡ ಟಿಕೆಟ್ ಪಡೆಯುವಂತೆ ತಾಕೀತು ಮಾಡುತ್ತಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಮನೆಯಲ್ಲಿಯೇ ಬಂಧಿಯಾಗಿದ್ದ ಕಾರ್ಮಿಕರ ಬಳಿಯಲ್ಲಿ ಹಣ ದುಪ್ಪಟ್ಟು ಹಣ ಪಡೆಯಲಾಗುತ್ತಿರೋದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರನ್ನು ದೇಶಕ್ಕೆ ಉಚಿತವಾಗಿ ಕರೆತರಲು ಮುಂದಾಗಿರುವ ರಾಜ್ಯ ಸರಕಾರ ಕಾರ್ಮಿಕರಿಂದ ಮಾತ್ರ ಹಣ ವಸೂಲಿ ಮಾಡುತ್ತಿರೋದು ಎಷ್ಟು ಸರಿ ಅಂತಾ ಜನ ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ರಾಜ್ಯ ಸರಕಾರದ ಕ್ರಮದ ವಿರುದ್ದ ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಗರಂ ಆಗಿದ್ದಾರೆ.

Leave A Reply

Your email address will not be published.