ಯುವತಿಯ ಮಾತು ನಂಬಿ ಬೆತ್ತಲಾದ ಯುವಕನಿಗೆ ಬಿಗ್ ಶಾಕ್ ..!

ಬೆಂಗಳೂರು : ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಪರಿಚಯವಾಗಿದ್ದ ಯುವತಿಯ ಮಾತು ನಂಬಿ ತನ್ನ ಫಿಟ್ನೆಸ್ ತೋರಿಸೋ ಬರದಲ್ಲಿ ಬೆತ್ತಲೆ ಚಿತ್ರಗಳನ್ನು ನೀಡಿದ ತಪ್ಪಿಗೆ ಯುವಕ ಇದೀಗ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾನೆ.

ಬೆಂಗಳೂರಿನ ಹುಳಿಮಾವು ನಿವಾಸಿಯಾಗಿರುವ 33 ವರ್ಷದ ಯುವಕನೋರ್ವ ಆನ್ ಲೈನ್ ಮ್ಯಾಟ್ರಿಮೋನಿ ಸೈಟ್ ನಲ್ಲಿ ಹುಡುಗಿಯನ್ನು ಹುಡುಕುತ್ತಿದ್ದ. ಇದೇ ವೇಳೆಯಲ್ಲಿ ಯುವಕನಿಗೆ ಯುವತಿಯೊಂದಿಗೆ ಪರಿಚಯವಾಗಿತ್ತು. ನಂತರ ಪರಸ್ಪರ ಚಾಟಿಂಗ್ ನಡೆಸೋದಕ್ಕೆ ಶುರುಮಾಡಿದ್ದಾರೆ. ಒಮ್ಮೆ ವಿಡಿಯೋ ಕಾಲ್ ಮಾಡಿದ್ದ ಯುವತಿ ನಿನ್ನ ಫಿಟ್ನೆಸ್ ನೋಡಬೇಕು. ನೀನು ಬೆತ್ತಲಾಗು ಎಂದು ಯುವಕನಿಗೆ ತಿಳಿಸಿದ್ದಾಳೆ. ಯುವತಿಯ ಮಾತನ್ನು ನಂಬಿದ ಯುವಕ ವಿಡಿಯೋ ಕಾಲ್ ನಲ್ಲಿ ಬೆತ್ತಲಾಗಿದ್ದಾನೆ. ಈ ವೇಳೆಯಲ್ಲಿ ಯುವಕನ ಬೆತ್ತಲೆ ಪೋಟೋವನ್ನು ಇಟ್ಟುಕೊಂಡು ಯುವತಿ ಬ್ಲಾಕ್ ಮೇಲ್ ಮಾಡೋದಕ್ಕೆ ಶುರುಮಾಡಿದ್ದಾಳೆ.

ಯುವಕನಿಗೆ ಲಕ್ಷಾಂತರ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಯುವತಿ, ಕೊಡದಿದ್ದರೆ ಬೆತ್ತಲೆ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೇಳಿದ್ದಾಳೆ. ಇದರಿಂದ ಕಂಗಾಲಾದ ಯುವಕ 20 ಸಾವಿರ ರೂ. ಕೊಟ್ಟಿದ್ದು, ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments are closed.