ಟೋಲ್ ವಿನಾಯಿತಿ ರದ್ದು, ಕೋಟ ಜಿ.ಪಂ. ವ್ಯಾಪ್ತಿ ಬಂದ್ ವ್ಯಾಪಕ ಬೆಂಬಲ : 90 ಸಂಘಟನೆಗಳಿಂದ ಪ್ರತಿಭಟನೆ

ಕೋಟ : ಫಾಸ್ಟ್ಯಾಗ್ ಕಡ್ಡಾಯದ ನೆಪದಲ್ಲಿ ಸ್ಥಳೀಯರಿಗೆ ಗುಂಡ್ಮಿ ಟೋಲ್ ನಲ್ಲಿ ಟೋಲ್ ವಿನಾಯಿತಿಯನ್ನು ನಿರಾಕರಿಸುತ್ತಿರುವ ನವಯುಗ ಕಂಪೆನಿ ವಿರುದ್ದ ಜನರು ಸಿಡಿದೆದ್ದಿದ್ದಾರೆ. ಹೆದ್ದಾರಿ ಜಾಗೃತಿ ಸಮಿತಿ ಇಂದು ಕರೆ ನೀಡಿದ್ದ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಹೆದ್ದಾರಿ ಜಾಗೃತಿ ಸಮಿತಿ ಕರೆ ನೀಡಿರುವ ಬಂದ್ ಗೆ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸುಮಾರು 90ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಅನ್ಯೋನ್ಯತಾ ವಾಹನ ಚಾಲಕರ ಮತ್ತು ಮಾಲಕರ ಸಂಘ ಸಾಸ್ತಾನ , ವಕೀಲರ ಸಂಘ ಕುಂದಾಪುರ, ಪಂಚವರ್ಣ ಯುವಕ ಮಂಡಲ ರಿ. ಕೋಟ, ಬಾಳ್ಕುದ್ರು ಹಿತರಕ್ಷಣಾ ಸಮಿತಿ , ಜಿ. ಎಸ್. ಬಿ. ಎಸ್ ಸೇವಾಸಂಘ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಚೆಂಪಿ, ಶ್ರೀ ರಾಮ ಆಟೋ ನಿಲ್ದಾಣ, ಮೀನು ಮಾರುಕಟ್ಟೆ ಬಳಿ ಸಾಲಿಗ್ರಾಮ, ಹೆಚ್ .ಕೆ.ಫ್ರೆಂಡ್ಸ್, ವಾಹನ ಚಾಲಕರು ಮತ್ತು ಮಾಲಕರ ಸಂಘ ಮಾಬುಕಳ, ಕಟ್ಟೆ ಗೆಳ, ತೀರ್ಥಬೈಲು ರಿಕ್ಷಾ ನಿಲ್ದಾಣ, ಪಾಂಡೇಶ್ವರ, ರೋಟರಿ ಕ್ಲಬ್ ಕೋಟ ಸಿಟಿ, . ಎಸ್ಎಸ್ಎಫ್ ಸಾಸ್ತಾನ ಘಟಕ, ವಿ ಆರ್ ಫ್ರೆಂಡ್ಸ್ ಪಾಂಡೇಶ್ವರ, ಸಾಸ್ತಾನ ಮಹಿಳಾ ಮಂಡಲ ರಿ. ಪಾಂಡೇಶ್ವರ – ಸಾಸ್ತಾನ , ಮಾರುತಿ ವಾಹನ ಚಾಲಕರ ಕಾರಂತ ಬೀದಿ ಸಾಲಿಗ್ರಾಮ, ಮಾನಸ ಫ್ರೆಂಡ್ಸ್ ಕಾರ್ಕಡ, ಸ್ನೇಹ ಫ್ರೆಂಡ್ಸ್ ಕಾರ್ಕಡ, ದೇವಾಡಿಗರ ಸಂಘ ಸಾಲಿಗ್ರಾಮ ಕೋಟ, ಬ್ರಹ್ಮಲಿಂಗೆಶ್ವರ ಆಟೋ ಮತ್ತು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘ ಚೆಂಪಿ.ಹದ್ದಿನಬೆಟ್ಟು, ಬಾಂಧವ್ಯ ಬ್ಲಡ್ ಕರ್ನಾಟಕ, ಗಿಳಿಯಾರು ಯುವಕ ಮಂಡಲ (ರಿ) ಗಿಳಿಯಾರು, ವಿಶ್ವಕರ್ಮ ಯುವ ಸಂಘಟನೆ ಸಾಸ್ತಾನ, ಗುಂಡ್ಮಿ ಆಟೋ ಚಾಲಕರು ಮತ್ತು ಮಾಲಕರ ಸಂಘ‌ ಅಂಬಾಗಿಲು, ಹೊನ್ನಾರಿ ಫ್ರೆಂಡ್ಸ್ ಗಿಳಿಯಾರು, ಟ್ಯಾಲೆಂಟ್ಸ್ ಫ್ರೆಂಡ್ಸ್ ಗುಳ್ಳಾಡಿ, ಪಟ್ಟಣ ಪಂಚಾಯತ್ ಆಟೋ ಸ್ಟ್ಯಾಂಡ್ ಸಾಲಿಗ್ರಾಮ, ಪ್ರಗತಿ ಯುವಕ ಸಂಘ (ರಿ) ಕೋಡಿ ಕನ್ಯಾಣ, ಅಯೋಧ್ಯಾ ಫ್ರೆಂಡ್ಸ್ ಕೋಡಿ ಕನ್ಯಾಣ, ವಾಹನ ಚಾಲಕರು ಮತ್ತು ಮಾಲಕರ ಸಂಘ ಸಾಲಿಗ್ರಾಮ, ವಿಶ್ವೇಶ್ವರ ಫ್ರೆಂಡ್ಸ್ (ರಿ.) ಕಾರ್ಕಡ, ರಿಕ್ಷಾ ಚಾಲಕರು ಮತ್ತು ಮಾಲೀಕರು ರಥಬೀದಿ ಸಾಲಿಗ್ರಾಮ, ಸ್ಪೂರ್ತಿ ಕ್ರೀಕೇಟರ್ಸ ಕಾರ್ಕಡ, ವಾಹಿನಿ ಯುವಕ ಮಂಡಲ ಮಣೂರು ಪಡುಕರೆ, ಗೆಳೆಯರ ಬಳಗ (ರಿ.) ಕಾರ್ಕಡ ಸಾಲಿಗ್ರಾಮ, ಸನ್ ಶೈನ್ ಗೆಳೆಯರ ಬಳಗ ರಿ. ಅಚ್ಲಾಡಿ, ಟೈಲರ್ ಅಸೋಸಿಯೇಷನ್ ಸಾಸ್ತಾನ – ಹಂಗಾರಕಟ್ಟೆ, ದೇವಸ್ಥಾನ ಬೆಟ್ಟು ಗೆಳೆಯರು ತೆಂಕುಹೋಳಿ ಕಾರ್ಕಡ. ಸಾಲಿಗ್ರಾಮ, ಗುರುನರಸಿಂಹ ರೋಡ್ ಲೈನ್ಸ್ ಸಾಲಿಗ್ರಾಮ, ವಿಶ್ವಕರ್ಮ ಮಹಿಳಾ ಬಳಗ ಬಾಳ್ಕುದ್ರು ಐರೋಡಿ, ರಥಬೀದಿ ಫ್ರೆಂಡ್ಸ್ ವಡ್ಡರ್ಸೆ, ಮಹಾಲಿಂಗೇಶ್ವರ ಕಲಾ ರಂಗ ವಡ್ಡರ್ಸೆ, ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್ ಕರ್ನಾಟಕ ಉಡುಪಿ ಜಿಲ್ಲಾ ಸಮಿತಿ, ವಿಶ್ವಕರ್ಮ ಯುವ ಸಂಘಟನೆ ಬಾಳ್ಕುದ್ರು ಐರೋಡಿ, ಪವನಸುತ ಸಂ.ಸ್ವ.ಸ.ಸಂಘ. ಕಾರ್ಕಡ, ಬ್ರಹ್ಮ ಶ್ರೀ ನಾರಾಯಣಗುರು ಸೇವಾ ಸಂಘ ಎಂ. ಜಿ. ಸಿ ವಡ್ಡರ್ಸೆ, ಸಾಧನಾ ಕಲಾತಂಡ, ಸಾಸ್ತಾನ, ಫ್ರೆಂಡ್ಸ್ ವಡ್ಡರ್ಸೆ, ಸೌತ್ ಕೆನರಾ ಪೋಟೋ ಗ್ರಾಫರ್ಸ್ ಅಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲೆ ಬ್ರಹ್ಮಾವರ ವಲಯ, ಜೆಸಿಐ ಕೋಟ ಬ್ರಿಗೇಡಿಯರ್,ಅನ್ಯೋನತಾ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಸಾಸ್ತಾನ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ನಮ್ಮೂರ ಅಭಿವೃದ್ಧಿ ಸಮಿತಿ ಮಠತೋಟ, ಮಹಿಳೆ ಹಸಿ ಮೀನು ಮಾರಾಟಗಾರರ ಸಂಘ ಸಾಸ್ತಾನ-ಕೋಡಿ ಕನ್ಯಾನ, ಶ್ರೀ ಸದ್ಗುರು ಮಹಿಳಾ ವೇದಿಕೆ (ರಿ )ಪಾಂಡೇಶ್ವರ ಸಾಸ್ತಾನ, ಎನ್ ಜೆ ಫ್ರೆಂಡ್ಸ್ ನೀರ್ ಜೆಡ್ಡು, ಜಯಕರ್ನಾಟಕ ಸಂಘಟನೆ ಉಡುಪಿ ಜಿಲ್ಲೆ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ, ರಾಮಕ್ಷತ್ರೀಯ ಸಂಘ ಸಾಸ್ತಾನ, ಅಮೃತ್ ಯುವ ಸಂಘ ಕದ್ರಿಕಟ್ಟು ಕೋಟ, ಯೂತ್ ಕ್ಲಬ್ ಮಧುವನ, ಗೋಳಿ ಗರಡಿ ಸಾಂಸ್ಕೃತಿಕ ವೇದಿಕೆ, ಡಾಲರ್ಸ್ ಕಾಲೋನಿ ನಿವಾಸಿಗಳು ಸಾಲಿಗ್ರಾಮ, ಕಥೋಲಿಕ್ ಸಭಾ ಕೋಟ ಘಟಕ, ಜೀವನ್ ಮಿತ್ರ ಬ್ಲಡ್ ಬ್ಯಾಂಕ್ ಗ್ರೂಪ್ ಕೋಟ, ಲಯನ್ಸ್ ಕ್ಲಬ್ ಬ್ರಹ್ಮಾವರ ಬಾರಕೂರು, ಕಟ್ಟಡ ಕಾರ್ಮಿಕರ ಸಂಘದ, ಸಾಸ್ತಾನ ವಲಯ , ಸವಿನಯ ಯುವಕ ಮಂಡಲ ರಿ ಸಾಸ್ತಾನ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಾಸ್ತಾನ , ಟೀಮ್ ಗಿಳಿಯಾರು, ಶ್ರೀ ನರಹರಿ ದಾಸ ಸರಸ್ವತಿ ಕಲಾವೃಂದ ಸಾಲಿಗ್ರಾಮ, ಯುವಕ ಮಂಡಲ ರಿ. ಉಳ್ತೂರು, ಕೇಸರಿ ಯುವಜನ ಸಂಘ ರಿ. ಎಡಬೆಟ್ಟು, ಸೂಲ್ಕುದ್ರು ಗ್ರಾಮ ಹಿತಾ ರಕ್ಷಣಾ ಸಮಿತಿ ಪಾಂಡೇಶ್ವರ, ಯುವವಾಹಿನಿ (ರಿ) ಯಡ್ತಾಡಿ, ಕೋಟ ಹೋಬಳಿ ಬಿಲ್ಲವ ಒಕ್ಕೂಟ. ಕೋಟ, ಟ್ರಾವೆಲ್ ಲಿಂಕ್ಸ್ ಪ್ರೆಂಡ್ಸ್. ಕೋಟ, ಸೈಟ್ ಥೊಮಸ್ ಓರ್ಥೊಡೋಕ್ಸ್ ಸಿರಿಯನ್ ದೇವಾಲಯ, ಸಾಸ್ತಾನ
, ಸೈಂಟ್ ಥೊಮಸ್ ಓರ್ಥೊಡೋಕ್ಸ್ ಸಿರಿಯನ್ ಯೂತ್ ಎಸೊಸಿಯೇಶನ್, ಸಾಸ್ತಾನ, ರುಚಿ ಸೇಲ್ಸ್ ಗ್ರೂಫ್, ಪಾಂಚಜನ್ಯ ಸಂಘ (ರಿ.) ಅಂಬಾಗಿಲುಕೆರೆ ರಸ್ತೆ ಸಾಲಿಗ್ರಾಮ, ವರ್ತಕರ ಸಂಘ, ಸಾಸ್ತಾನ, ರಿಕ್ಷಾ ಚಾಲಕರ ಸಂಘ ಕೋಡಿ ಕನ್ಯಾಣ, ಎಸ್.ಎಸ್.ಡಿ.ಎಸ್ ಸಂಘ, ವಿನಾಯಕ ದೇವಸ್ಥಾನ, ಚಡಗರ ಅಗ್ರಹಾರ, ಸಾಸ್ತಾನ, ಶ್ರೀ ಗುರುನರಸಿಂಹ ಸ್ವ ಸಹಾಯ ಸಂಘ ಕಾರ್ಕಡ
, ಮೂಡಹಡು ಕುದ್ರು ನಾಗರಿಕರ ಸಂಘ, ಸಮ್ಮೀಲನ ಯುವಕ ಮಂಡಲ, ಶಾಂತಿ ನಗರ ಮಧುವನ, ಗಿರಿ ಫ್ರೆಂಡ್ಸ್, ಚಿತ್ರಪಾಡಿ, ಸಾಲಿಗ್ರಾಮ, ಗ್ರೌಂಡ್ ಸ್ಟಾರ್ ಕ್ರಿಕೆಟರ್ಸ್ ಎಡಬೆಟ್ಟು ಮತ್ತು ವರ್ತಕರ ಸಂಘ ಸಾಸ್ತಾನ ಸಂಘಟನೆ ಸೇರಿದಂತೆ ಒಟ್ಟು 90ಕ್ಕೂ ಅಧಿಕ ಸಂಘಟನೆಗಳು ಬಂದ್ ಬೆಂಬಲಿಸಿವೆ.

ಬೆಳಗ್ಗೆ 10 ಗಂಟೆಗೆ ಗುಂಡ್ಮಿ ಟೋಲ್ ಬಳಿಯಲ್ಲಿ ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಯಲಿದೆ. ಟೋಲ್ ಮಾಲೀಕರು ಯಾವುದೇ ಕಾರಣಕ್ಕೂ ಸ್ಥಳೀಯರಿಂದ ಟೋಲ್ ಪಡೆಯಬಾರದು ಅಂತಾ ಪ್ರತಿಭಟನಾಕಾರರು ಆಗ್ರಹಿಸಲಿದ್ದಾರೆ. ಹೆದ್ದಾರಿಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣವಾಗಿಲ್ಲ, ಬೀದಿ ದೀಪ, ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಟೋಲ್ ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಿಲ್ಲ. ಟೋಲ್ ನೀಡಿದ್ರೂ ಹೆದ್ದಾರಿಯಲ್ಲಿ ಅಪಾಯದಿಂದಲೇ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರಿಗೆ ವಿನಾಯಿತಿ ನೀಡಬೇಕಾಗಿದ್ದ ಕಂಪೆನಿ ಇದೀಗ ದಬ್ಬಾಳಿಕೆಯನ್ನು ನಡೆಸುತ್ತಿರೋದು ಸರಿಯಲ್ಲ. ಹೆದ್ದಾರಿಯ ತುಂಬೆಲ್ಲಾ ಬ್ಯಾರಿಕೇಡ್ ಅಳವಡಿಕೆ ಮಾಡಿರುವುದರಿಂದಾಗಿ ಅಪಘಾತಗಳು ಹೆಚ್ಚುತ್ತಿವೆ. ಈ ಕುರಿತು ಜಿಲ್ಲಾಡಳಿತ ಹಾಗೂ ಸರಕಾರಗಳು ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ಅಲ್ಲದೇ ಸ್ಥಳೀಯರಿಗೆ ಶಾಶ್ವತವಾಗಿ ಟೋಲ್ ವಿನಾಯಿತಿ ನೀಡಬೇಕೆಂದು ಹೆದ್ದಾರಿ ಜಾಗೃತಿ ಸಮಿತಿ ಆಗ್ರಹಿಸಿದೆ.

Comments are closed.