ಕೊನೆಗೂ ಲಕ್ಷದ್ವೀಪಕ್ಕೆ ಕಾಲಿಟ್ಟ ಕೊರೋನಾ…! ನಿಯಮ ಸಡಿಲಿಕೆ ಬೆನ್ನಲ್ಲೇ ಮೊದಲ ಪಾಸಿಟಿವ್ ಕೇಸ್ ಪತ್ತೆ…!!

ಲಕ್ಷದ್ವೀಪ : ವಿಶ್ವವೇ ಕೊರೋನಾದಿಂದ ನಲುಗಿ ಹೋದರೂ ಅಲ್ಲಿ ಜನ ಮಾತ್ರ ಮುಖಕ್ಕೆ ಮಾಸ್ಕ್ ಇಲ್ಲದೇ ಸಂತೆ ಮಾರ್ಕೆಟ್ ನಲ್ಲಿ ಹಾಯಾಗಿ ಓಡಾಡಿಕೊಂಡಿದ್ದರು. ಆದರೆ ಎಲ್ಲೆಡೆ ಕೊರೋನಾ ಕಡಿಮೆಯಾಗುತ್ತಿರುವ ಹೊತ್ತಲ್ಲೇ ಇಲ್ಲೊಂದು ಪ್ರಕರಣ ಪತ್ತೆಯಾಗಿದೆ. ಎಲ್ಲಿ ಘಟನೆ ನಡೆದಿದ್ದು ಅಂದ್ರಾ ಈ ಸ್ಟೋರಿ ಓದಿ.

ಜಗತ್ತಿನ ಎಲ್ಲೆಡೆ ಕೊರೋನಾ ರುದ್ರ ತಾಂಡವ ನಡೆಸಿದಾಗಲೂ ಲಕ್ಷದ್ವೀಪ ಪ್ರದೇಶದಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ದಾಖಲಾಗಿರಲಿಲ್ಲ. ಜನರು ನೆಮ್ಮದಿಯಾಗಿ ಓಡಾಡಿಕೊಂಡು ಮಾಸ್ಕ್ ನ ಹಂಗಿಲ್ಲದೇ ಬದುಕಿದ್ದರು. ಆದರೆ ಈಗ ಎಲ್ಲೆಡೆ ಕೊರೋನಾ ಕುಗ್ಗಿದ್ದರೇ ಲಕ್ಷದ್ವೀಪ ಪ್ರದೇಶದಲ್ಲಿ ಮೊದಲ ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಜನವರಿ 3 ರಂದು ಕೇರಳದ ಕೊಚ್ಚಿ ಯಿಂದ ಹಡಗಿನ ಮೂಲಕ ಲಕ್ಷದ್ವೀಪದ ಕವರಟ್ಟಿಗೆ ತೆರಳಿದ್ದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಲಕ್ಷದ್ವೀಪದಲ್ಲಿ ಕಾಣಿಸಿಕೊಂಡ ಕೊರೋನಾದ ಮೊದಲ ಪ್ರಕರಣ ಇದಾಗಿದೆ.

ಕೊಚ್ಚಿ ಸೇರಿದಂತೆ ಯಾವುದೇ ಮಾರ್ಗದಲ್ಲಿ ಹಾಗೂ ಯಾವುದೇ ಸ್ಥಳದಿಂದ ಲಕ್ಷದ್ವೀಪಕ್ಕೆ ಬಂದರೂ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿತ್ತು. ಹೀಗಾಗಿ ಲಕ್ಷದ್ವೀಪದಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ದಾಖಲಾಗದಂತೆ ಸ್ಥಳೀಯ ಆಡಳಿತ ನೋಡಿಕೊಂಡಿತ್ತು.

ಆದರೆ ಈಗ ಎಲ್ಲೆಡೆ ಲಾಕ್ ಡೌನ್ ತೆರವಾಗುತ್ತಿದ್ದಂತೆ ಲಕ್ಷದ್ವೀಪದಲ್ಲಿ ಕಡ್ಡಾಯ ಕ್ವಾರಂಟೈನ್ ನಿಯಮವನ್ನು ರದ್ದು ಮಾಡಲಾಗಿತ್ತು. ಕಡ್ಡಾಯ ಕ್ವಾರಂಟೈನ್ ನಿಯಮ ರದ್ದು ಮಾಡಿದ ಬೆನ್ನಲ್ಲೇ ಕೊರೋನಾ ಕಾಣಿಸಿಕೊಂಡಿದ್ದು ಸ್ಥಳೀಯ ಆಡಳಿತ ಹಾಗೂ ಜನರು ಕಂಗಾಲಾಗಿದ್ದಾರೆ.

Comments are closed.