ಲಾಕ್ ಡೌನ್ ನಲ್ಲಿ ಸಿಲುಕಿರುವವರಿಗೆ ಬಿಗ್ ರಿಲೀಫ್ ! ಕಾರ್ಮಿಕರಿಗೆ, ಯಾತ್ರಿಕರಿಗೆ ಮನೆಗೆ ತೆರಳಲು ಅವಕಾಶ

0

ನವದೆಹಲಿ : ಲಾಕ್ ಡೌನ್ ಹಿನ್ನೆಲೆಯಲ್ಲಿ ಹೊರ ರಾಜ್ಯ, ಜಿಲ್ಲೆಗಳಲ್ಲಿ ಬಂಧಿಯಾಗಿರುವ ಕಾರ್ಮಿಕರು, ಯಾತ್ರಿಕರಿಗೆ ಕೇಂದ್ರ ಸರಕಾರ ಬಿಗ್ ರಿಲೀಫ್ ನೀಡಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹೊಸ ಮಾರ್ಗ ಸೂಚಿಯನ್ನು ಹೊರಡಿಸಿದ್ದು, ಪ್ರವಾಸಿಗರು, ವಿದ್ಯಾರ್ಥಿಗಳು ಕಾರ್ಮಿಕರು ಹಾಗೂ ಯಾತ್ರಿಯಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಷರತ್ತು ಬದ್ದ ಅವಕಾಶವನ್ನು ಕಲ್ಪಿಸಲಾಗಿದೆ.

ಜನರಿಗೆ ಲಾಕ್ ಡೌನ್ ಸಮಸ್ಯೆಯಿಂದ ಮುಕ್ತಿ ದೊರಕಿಸುವಂತೆ ಕೇಂದ್ರ ಸರಕಾರ ಎಲ್ಲಾ ರಾಜ್ಯಗಳಿಗೆ ಸೂಚನೆಯನ್ನು ನೀಡಿದೆ. ಆದರೆ ತಮ್ಮ ಊರುಗಳಿಗೆ ತೆರಳುವ ಮುನ್ನ ಕಡ್ಡಾಯವಾಗಿ ತಪಾಸಣೆಗೆ ಒಳಪಡಲೇ ಬೇಕು.

ಅಲ್ಲದೇ ಕಾರ್ಮಿಕರು, ಯಾತ್ರಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ತಮ್ಮ ಊರುಗಳಿಗೆ ತೆರಳಲು ರಾಜ್ಯ ಸರಕಾರಗಳು ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಬೇಕು.

ಬಸ್ಸನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕು. ತಮ್ಮ ಊರುಗಳಿಗೆ ತೆರಳುವವರಿಗೆ ಸ್ಥಳೀಯ ಆರೋಗ್ಯಾಧಿಕಾರಿಗಳು ಹೋಮ್ ಕ್ವಾರಂಟೈನ್ ಸೂಚನೆಯನ್ನು ನೀಡಿದ್ರೆ ಕಡ್ಡಾಯವಾಗಿ ಪಾಲನೆ ಮಾಡಲೇ ಬೇಕು. ಎಲ್ಲರನ್ನೂ ಆರೋಗ್ಯ ಸೇತು ಆ್ಯಪ್ ಮೂಲಕ ಟ್ರ್ಯಾಕ್ ಮಾಡಲು ಕೇಂದ್ರ ಸರಕಾರ ಹೊಸ ಮಾರ್ಗಸೂಚಿಯಲ್ಲಿ ಸೂಚನೆಯನ್ನು ನೀಡಿದೆ.

ಕೇವಲ ರಾಜ್ಯದೊಳಗಿನ ಪ್ರಯಾಣ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ ಬಂಧಿಯಾಗಿರುವವರಿಗೂ ತಮ್ಮೂರಿಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರಯಾಣ ಬೆಳೆಸಲು ಎರಡೂ ರಾಜ್ಯಗಳು ಕಡ್ಡಾಯವಾಗಿ ಒಪ್ಪಿಗೆಯನ್ನು ನೀಡಲೇ ಬೇಕು.

Leave A Reply

Your email address will not be published.