ಲಾಂಡ್ರಿ ಮಾಲೀಕನಿಗೆ ಕೊರೊನಾ : 54,000 ಮಂದಿಗೆ ಕ್ವಾರಂಟೈನ್

0

ಸೂರತ್ : ಲಾಂಡ್ರಿ ಮಾಲೀಕನೋರ್ವನಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದ್ದು, 54,000 ಜನರನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಿರೋ ಘಟನೆ ಗುಜರಾತ್ ರಾಜ್ಯದ ಸೂರತ್ ನಲ್ಲಿ ನಡೆದಿದೆ.

ಕೊರೊನಾ ಸೋಂಕಿಗೆ ಒಳಗಾಗಿರುವ 67 ವರ್ಷದ ವ್ಯಕ್ತಿಯ ಜೊತೆಗೆ ಅವರ ಪತ್ನಿ, ಸೋದರಳಿಯ, ಅವರ ಸೋದರ ಮಾವ ಮತ್ತು ಲಾಂಡ್ರಿ ಸಿಬ್ಬಂದಿ ಸದಸ್ಯರನ್ನು ಸಹ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಸೂರತ್ ನಗರದಲ್ಲಿ ಲಾಂಡ್ರಿ ಅಂಗಡಿಯನ್ನು ಹೊಂದಿದ್ದು, ಅತೀ ಹೆಚ್ಚು ಸಂಖ್ಯೆಯಲ್ಲಿ ಗ್ರಾಹಕರನ್ನು ಹೊಂದಿದ್ದಾನೆ.

ಈತನ ಅಂಗಡಿ ಇರೋ ಏರಿಯಾದಲ್ಲಿ ಸುಮಾರು 16,785 ಮನೆಗಳಿವೆ. ಮಾತ್ರವಲ್ಲ 12 ಆಸ್ಪತ್ರೆ, 23 ಮಸೀದಿ, 22 ಮುಖ್ಯ ರಸ್ತೆ, 82 ಆಂತರಿಕ ರಸ್ತೆಗಳಿದ್ದು, ಹೆಚ್ಚು ಜನರಿಗೆ ಸೋಂಕು ಹರಡುವ ಭೀತಿಯಿಂದ ಗುಜರಾತ್ ಆರೋಗ್ಯ ಇಲಾಖೆ ಈ ಕ್ರಮವನ್ನು ಕೈಗೊಂಡಿದೆ.

ಸುಮಾರು 55 ತಂಡಗಳು ಏರಿಯಾದಲ್ಲಿ ಸಮೀಕ್ಷೆಯನ್ನು ನಡೆಸಿದ್ದು, ಇಲ್ಲಿನ ಮನೆಗಳಲ್ಲಿ ವಾಸಿಸುವ 54,000 ಜನರನ್ನು ಕ್ವಾರಂಟೈನ್ ಗೆ ಒಳಪಡಿಸಿದೆ. ಮಾತ್ರವಲ್ಲ ಏರಿಯಾದ ಎಲ್ಲಾ ಮನೆಗಳನ್ನೂ ಪುರಸಭೆ ಸ್ವಚ್ಚಗೊಳಿಸಿದ್ದು, ಸಂಪೂರ್ಣವಾಗಿ ಪ್ರದೇಶವನ್ನು ನಿರ್ಬಂಧಿಸಲಾಗಿದೆ.

ಪೊಲೀಸರು ನಗರದ ನಾಲ್ಕೂ ದಿಕ್ಕುಗಳಲ್ಲಿಯೂ ಬ್ಯಾರಿಕೇಟ್ ಅಳವಡಿಸಿ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಮಾತ್ರವಲ್ಲ ಲಾಂಡ್ರಿ ಕಂಪೆನಿಯ ಎಲ್ಲಾ ಗ್ರಾಹಕರ ಮಾಹಿತಿಯನ್ನೂ ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.

ಅಲ್ಲದೇ ಲಾಂಡ್ರಿ ಕಂಪೆನಿಯ ಮಾಲೀಕನೊಂದಿಗೆ ವ್ಯವಹಾರ ನಡೆಸಿರುವ ಇತರ ಏರಿಯಾದ ಗ್ರಾಹಕರ ಬಗ್ಗೆಯೂ ಮಾಹಿತಿಯನ್ನು ಕಲೆಹಾಕಲಾಗುತ್ತಿದ್ದು, ಅವರನ್ನೂ ಕೂಡ ಕ್ವಾರಂಟೈನ್ ಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.