ಕರಾವಳಿಯಲ್ಲಿ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ : ನಾಲ್ವರ ಬಂಧನ

ಮಂಗಳೂರು : ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ ಯುವಕನೋರ್ವನಿಗೆ ಹನಿಟ್ರ್ಯಾಪ್ ಮಾಡಿ 5 ಲಕ್ಷ್ಕೆ ಬೇಡಿಕೆಯಿಟ್ಟಿರುವ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರ ಸಹಿತ ನಾಲ್ವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕುಂಬಳೆ ಮೂಲದ ಯುವಕನಿಗೆ ಕಳೆದ ಕೆಲ ದಿನಗಳ ಹಿಂದೆ ಸುರತ್ಕಲ್ ಸಮೀಪದ ಕೃಷ್ಣಾಪುರದ ಇಬ್ಬರು ಮಹಿಳೆಯರ ಪರಿಚಯ ವಾಗಿತ್ತು. ಫೇಸ್ ಬುಕ್ ಮೆಸೆಂಜರ್ ಮೂಲಕ ಯುವಕನೊಂದಿಗೆ ಮಹಿಳೆಯರು ನಿತ್ಯವೂ ಮೆಸೇಜ್ ಮಾಡುತ್ತಿದ್ದರು. ಅಲ್ದಲೇ ಯುವಕನನ್ನು ಕೃಷ್ಣಾಪುರಕ್ಕೆ ಕರೆಯಿಸಿಕೊಂಡಿದ್ದಾರೆ. ಈ ವೇಳೆಯಲ್ಲಿ ಮಹಿಳೆಯರ ಜೊತೆಗೆ ಮತ್ತಿಬ್ಬರು ಸೇರಿ, ಯುವಕನನ್ನು ವಿವಸ್ತ್ರಗೊಳಿಸಿದ್ದಾರೆ. ಯುವಕನ ನಗ್ನ ಪೋಟೋಗಳನ್ನು ತೆಗೆದು 5 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಯಿಟ್ಟಿದ್ದಾರೆ. ಒಂದೊಮ್ಮೆ ಹಣ ಕೊಡದೇ ಹೋದ್ರೆ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿಯೂ ಬೆದರಿಸಿದ್ದಾರೆ.

ಆದರೆ ಯುವಕನ ಬಳಿಯಲ್ಲಿ ಅಷ್ಟೊಂದು ಹಣ ಇರಲಿಲ್ಲ. ಹೀಗಾಗಿ ಆತನ ಕಾರವನ್ನು ಪಡೆದುಕೊಂಡು, ಯುವಕನ್ನು ಕಳುಹಿಸಿ ಕೊಟ್ಟಿದ್ದರು. ಅಲ್ಲದೇ ತದನಂತರದಲ್ಲಿ ನಿರಂತರವಾಗಿ ಕಿರುಕುಳ ಕೊಡುವುದಕ್ಕೆ ಆರಂಭಿಸಿದ್ದಾರೆ. ಇದರಿಂದ ಮನನೊಂದ ಯುವಕ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರದಲ್ಲಿ 30 ಸಾವಿರ ರೂಪಾಯಿ ಕೊಡುವುದಾಗಿ ಹೇಳಿದ ಯುವಕ ಆರೋಪಿಗಳನ್ನು ಪಂಪ್ ವೆಲ್ ಸರ್ಕಲ್ ಬಳಿಗೆ ಕರೆಯಿಸಿಕೊಂಡಿದ್ದ. ಹಣ ಪಡೆಯಲು ಬಂದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಪ್ರಕರಣವನ್ನು ಸಿಸಿಬಿ ಪೊಲೀಸರು ಸುರತ್ಕಲ್ ಠಾಣೆಗೆ ಹಸ್ತಾಂತರಿಸಿದ್ದಾರೆ.

Comments are closed.