ಆರೋಗ್ಯ ಭಾಗ್ಯ ಯೋಜನೆ ಸ್ಥಗಿತ ! ಪೊಲೀಸ್ ಇಲಾಖೆಯ ಸಿಬ್ಬಂದಿಗಳಲ್ಲಿ ಹೆಚ್ಚಾಯ್ತು ಆತಂಕ

0

ಮಣಿಪಾಲ : ದೇಶದಾದ್ಯಂತ ಕೊರೊನಾ ಹೆಮ್ಮಾರಿ ಆರ್ಭಟಿಸುತ್ತಿದೆ. ಪೊಲೀಸ್ ಸಿಬ್ಬಂದಿ ಕರ್ತವ್ಯದ ಜೊತೆಗೆ ಕೊರೊನಾ ವಾರಿಯರ್ಸ್ ಆಗಿಯೂ ಜನಸೇವೆ ಮಾಡ್ತಿದ್ದಾರೆ. ಆದ್ರೀಗ ಪೊಲೀಸರಿಗೆ ಕೊರೊನಾ ಇಲ್ಲಾ ಬೇರಾವುದೇ ಆರೋಗ್ಯ ಸಮಸ್ಯೆ ಎದುರಾದ್ರು ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಭಾಗ್ಯ ಯೋಜನೆ ಸಿಗುತ್ತೆ ಅನ್ನೋ ಗ್ಯಾರಂಟಿಯಿಲ್ಲ.

ಯಾಕೆಂದ್ರೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ತಾತ್ಕಲಿಕವಾಗಿ ಮುಂದಿನ ಆದೇಶದವರೆಗೆ ಪೊಲೀಸರ ಚಿಕಿತ್ಸೆಗಾಗಿ ಲಭ್ಯವಿರುವ ಆರೋಗ್ಯ ಭಾಗ್ಯ ಯೋಜನೆಯನ್ನು ಸ್ಥಗಿತ ಮಾಡಿರುವುದಾಗಿ ಆದೇಶಿಸಿದ್ದು, ಪೊಲೀಸ್ ಇಲಾಖೆ ಆತಂಕ ಶುರುವಾಗಿದೆ.

ರಾಜ್ಯ ಸರಕಾರ ಸರಕಾರಿ ನೌಕರರಿಗಾಗಿ ಆರೋಗ್ಯ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಅದ್ರಲ್ಲೂ ಯೋಜನೆಯನ್ನು ಪೊಲೀಸ್ ಇಲಾಖೆಗೂ ವಿಸ್ತರಣೆಯನ್ನು ಮಾಡಿತ್ತು. ಯಾವುದೇ ಆರೋಗ್ಯ ಸಮಸ್ಯೆ ಎದುರಾದ್ರೂ ಕೂಡ ಪೊಲೀಸ್ ಸಿಬ್ಬಂದಿಗಳು ಹಾಗೂ ಕುಟುಂಬಸ್ಥರು ಆರೋಗ್ಯ ಭಾಗ್ಯ ಯೋಜನೆಯನ್ನೇ ನೆಚ್ಚಿಕೊಂಡು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ರು.

ಆದ್ರೀಗ ಆರೋಗ್ಯ ಭಾಗ್ಯ ಯೋಜನೆ ಪೊಲೀಸರಿಗೆ ಲಭ್ಯವಾಗುತ್ತಿಲ್ಲ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಮುಂದಿನ ಆದೇಶದವರೆಗೂ ಪೊಲೀಸರಿಗೆ ಚಿಕಿತ್ಸೆ ಲಭ್ಯವಿರುವುದಿಲ್ಲ ಎಂದು ಫಲಕ ಹಾಕಲಾಗಿದೆ. ಈ ಆದೇಶವನ್ನು ಖುದ್ದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರೇ ಹೊರಡಿಸಿದ್ದಾರೆ.

ಅಗಸ್ಟ್ 31ರಿಂದಲೇ ಯೋಜನೆಯಡಿಯಲ್ಲಿ ಸೇವೆಯನ್ನು ನೀಡಲಾಗುತ್ತಿಲ್ಲ. ಜನರ ಸೇವೆಗಾಗಿಯೇ ತಮ್ಮನ್ನು ಮುಡಿಪಾಗಿಟ್ಟಿರುವ ಪೊಲೀಸ್ ಸಿಬ್ಬಂದಿಗೆ ಇದೀಗ ಕರಾವಳಿಯಲ್ಲಿ ಆರೋಗ್ಯ ಸೇವೆ ಮರಿಚಿಕೆಯಾಗಿರೋದು ಸಹಜವಾಗಿಯೇ ಆತಂಕವನ್ನು ಮೂಡಿಸಿದೆ. ಇಷ್ಟು ದಿನ ಆರೋಗ್ಯ ಭಾಗ್ಯ ಯೋಜನೆಯನ್ನೇ ನೆಚ್ಚಿಕೊಂಡಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಇದೀಗ ಯೋಜನೆ ಸ್ಥಗಿತವಾಗಿರೋದ್ರಿಂದಾಗಿ ಧಿಕ್ಕೆ ತೋಚದಂತಾಗಿದೆ.

ಕೂಡಲ ರಾಜ್ಯ ಸರಕಾರ ಎಚ್ಚೆತ್ತು ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿಯೂ ಆರೋಗ್ಯ ಭಾಗ್ಯ ಯೋಜನೆಯಡಿ ಪೊಲೀಸ್ ಸಿಬ್ಬಂದಿಗಳಿಗೆ ಆರೋಗ್ಯ ಸೇವೆ ಸಿಗುವಂತಾಗಬೇಕೆಂದು ಪೊಲೀಸ್ ಸಿಬ್ಬಂದಿಗಳು ಆಗ್ರಹಿಸುತ್ತಿದ್ದಾರೆ.

Leave A Reply

Your email address will not be published.