ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರವೂ ಬಂದ್ : ಮಂಗಳವಾರ ದಿನಸಿಕೊಳ್ಳಲು ಅವಕಾಶ

0

ಮಂಗಳೂರು : ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರವೂ ಬಂದ್ ಆಚರಿಸಲಾಗುತ್ತದೆ. ಆದರೆ ಜನರ ಅನುಕೂಲಕ್ಕಾಗಿ ಮಂಗಳವಾದ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ದಿನಸಿ ಸಾಮಗ್ರಿಗಳನ್ನು ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದೆರಡು ದಿನಗಳಿಂದಲೂ ನಡೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಬಂದ್ ಗೆ ಜನತೆ ಉತ್ತಮವಾಗಿ ಬೆಂಬಲವನ್ನು ನೀಡಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಲಾಗಿದೆ. ಸೋಮವಾರವೂ ಬಂದ್ ಮುಂದುವರಿಯಲಿದೆ. ಮಂಗಳವಾರ ದಿನ ಸಾಮಗ್ರಿಗಳನ್ನು ಕೊಳ್ಳಲು ಅವಕಾಶ ನೀಡಲಾಗುತ್ತಿದ್ದು, ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ದಿನಸಿ ಅಂಗಡಿಗಳಿಂದ ಸಾಮಗ್ರಿಗಳನ್ನುಕೊಳ್ಳಬಹುದಾಗಿದೆ. ದಿನಸಿ ಅಂಗಡಿಗೆ ಬರಲು ಕುಟುಂಬದ ಓರ್ವರಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ.

ಸಾಮಾಜಿಕ ಅಂತರವನ್ನು ಕೈಗೊಂಡು ದಿನ ಸಾಮಾನುಗಳನ್ನು ಖರೀದಿ ಮಾಡಬೇಕು. ಆದರೆ ನಿಗದಿತ ದರದಲ್ಲಿಯೇ ಆಹಾರ ಸಾಮಗ್ರಿಗಳನ್ನು ಮಾರಾಟ ಮಾಡಬೇಕು. ವ್ಯಾಪಾರಿಗಳು ಹೆಚ್ಚು ಹಣ ತೆಗೆದುಕೊಂಡ್ರೆ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ನಿರಾಶ್ರಿತರಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, 1,500 ಮಂದಿ ನಿರಾಶ್ರಿತರು ಆಶ್ರಯ ಪಡೆಯಲಿದ್ದಾರೆ. ಮಾತ್ರವಲ್ಲ ಇಂದಿರಾ ಕ್ಯಾಟಿಂನ್ ಮೂಲಕ ಆಹಾರ ಸರಬರಾಜಿಗೆ ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ.

Leave A Reply

Your email address will not be published.