ಲಾಕ್ ಡೌನ್ ಅವಧಿಯಲ್ಲಿ ಬಾಡಿಗೆಗೆ ಪೀಡಿಸುವಂತಿಲ್ಲ : ಕಾರ್ಮಿಕರು ಕಂಪೆನಿಗಳು ವೇತನ ಪಾವತಿಸಲೇ ಬೇಕು

0

ನವದೆಹಲಿ : ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿ ಮಾಡಲಾಗಿದೆ. ಲಾಕ್ ಡೌನ್ ನಿಂದಾಗಿ ಉದ್ಯೋಗವಿಲ್ಲದೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೀಗಾಗಿ ಕೇಂದ್ರ ಸರಕಾರ ಲಾಕ್ ಡೌನ್ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಬಾಡಿಗೆದಾರರಿಂದ ಮಾಲೀಕರು ಬಾಡಿಗೆಗೆ ಪೀಡಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಲಾಕ್ ಡೌನ್ ನಿಂದಾಗಿ ಮನೆಯಿಂದ ಹೊರಬರುವಂತಿಲ್ಲ. ಹೀಗಾಗಿ ಉದ್ಯೋಗವಿಲ್ಲದೇ ಜನರ ತತ್ತರಿಸಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಜನತೆ ಪರದಾಡುತ್ತಿದ್ದಾರೆ. ಹೀಗಾಗಿ ಜನರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಘೋಷಿಸಿರೋ ಕೇಂದ್ರ ಸರಕಾರ ಇದೀಗ ಬಾಡಿಗೆದಾರರಿಗೆ ಕೊಂಚ ರಿಲೀಫ್ ನೀಡಿದ್ದು, ಮಾಲೀಕರು ಲಾಕ್ ಡೌನ್ ಅವಧಿಯವರೆಗೆ ಯಾವುದೇ ಕಾರಣಕ್ಕೂ ಬಾಡಿಗೆ ನೀಡುವಂತೆ ಪೀಡಿಸುವಂತಿಲ್ಲ ಎಂದಿದೆ. ಮಾತ್ರವಲ್ಲ ಬಾಡಿಗೆಗಾಗಿ ಪೀಡಿಸಿದ್ರೆ ಅಂತವರ ವಿರುದ್ದವೂ ಕಠಿಣ ಕ್ರಮಕೈಗೊಳ್ಳುವುದಾಗಿಯೂ ಸೂಚನೆಯನ್ನು ನೀಡಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರು ಕಂಪೆನಿಗಳಿಗೆ ಕೆಲಸಕ್ಕೆ ಹೋಗೋದಕ್ಕೆ ಸಾಧ್ಯವಾಗದೆ ಸಮಸ್ಯೆಯಲ್ಲಿದ್ದಾರೆ. ಲಾಕ್ ಡೌನ್ ನೆಪದಲ್ಲಿ ಕಾರ್ಮಿಕರಿಗೆ ವೇತನ ಪಾವತಿ ಕಡಿತ ಮಾಡುವಂತಿಲ್ಲ. ಕೆಲಸದಿಂದ ಕಿತ್ತು ಹಾಕೋದಾಗಿಯೂ ಬೆದರಿಕೆ ಒಡ್ಡುವಂತಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ.

ಯಾವುದೇ ಕಾರಣಕ್ಕೂ ಜನರು ಮನೆಯಿಂದ ಹೊರ ಬರುವಂತಿಲ್ಲ. ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ವೇತನ ಪಾವತಿ ಮಾಡದ ಕಂಪೆನಿಗಳ ವಿರುದ್ದವೂ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ.

Leave A Reply

Your email address will not be published.