ಮನೆಯಲ್ಲೇ ಪತ್ತೆಯಾಯ್ತು 10 ಗ್ರಾಂ ಗಾಂಜಾ….! ಪ್ರೊಡ್ಯೂಸರ್ ಪತ್ನಿ ಬಂಧನ…!!

ಮುಂಬೈ: ಬಾಲಿವುಡ್ ನಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಖರೀದಿ ಎಗ್ಗಿಲ್ಲದೇ ನಡೆಯುತ್ತಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಲಭ್ಯವಾಗಿದ್ದು, ಮನೆಯಲ್ಲೇ 10 ಗ್ರಾಂ ಗಾಂಜಾ ಸಂಗ್ರಹಿಸಿದ್ದ ಆರೋಪದ ಮೇರೆಗೆ ನಿರ್ಮಾಪಕರ ಪತ್ನಿಯನ್ನು ಎನ್ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬಾಲಿವುಡ್ ನ  ಖ್ಯಾತ ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲಾ ಪತ್ನಿ  ಶಬಾನಾ ಶಹೀದ್ ರನ್ನು ಎನ್ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ರವಿವಾರ ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲ್ ಮನೆ ಮೇಲೆ ದಾಳಿ ನಡೆಸಿದ ನಾರ್ಕೋಟಿಕ್ ಕಂಟ್ರೋಲ್ ಬ್ಯುರೋ ಅಧಿಕಾರಿಗಳಿಗೆ ಮನೆಯಲ್ಲೇ 10 ಗ್ರಾಂ  ಗಾಂಜಾ ಸಿಕ್ಕಿತ್ತು.

ಈ ಗಾಂಜಾವನ್ನು ನಿರ್ಮಾಪಕ ನಾಡಿಯಾಡ್ವಾಲಾ ಪತ್ನಿ ಶಬಾನಾ ಶಹೀದ್,  ಈಗಾಗಲೇ ಎನ್ಸಿಬಿ ವಶದಲ್ಲಿರುವ ಆರೋಪಿಗಳಾದ ವಾಹೀದ್ ಅಬ್ದುಲ್ ಖಾದೀರ್,ಶೇಕ್ ಅಲಿಯಾಸ್ ಸುಲ್ತಾನ್ ರಿಂದ ಖರೀದಿಸಿದ್ದರು ಎನ್ನಲಾಗಿದೆ. ಈ ಮಾಹಿತಿ ಆಧರಿಸಿ ನಿರ್ಮಾಪಕ ಫಿರೋಜ್ ಹಾಗೂ ಅವರ ಪತ್ನಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು.

ಆದರೆ ಫಿರೋಜ್ ಮತ್ತು ಅವರ ಪತ್ನಿ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಫಿರೋಜ್ ಪತ್ನಿ ಶಬಾನಾ ಸಯೀದ್ ಗೆ ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 67 ರ ಅಡಿ ನೋಟಿಸ್ ನೀಡಿ ಹೇಳಿಕೆ ದಾಖಲಿಸಿಕೊಂಡ ಬಳಿಕ ಅರೇಸ್ಟ್ ಮಾಡಿದ್ದೇವೆ ಎಂದು ಎನ್ಸಿಬಿ ಮುಂಬೈ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೇಡೆ ಹೇಳಿದ್ದಾರೆ.

ಒಟ್ಟಿನಲ್ಲಿ ಸುಂಶಾತ್ ಸಿಂಗ್ ರಜಪೂತ್ ಸಾವಿನೊಂದಿಗೆ ಆರಂಭವಾದ ಮಾದಕ ದ್ರವ್ಯ ಜಾಲದ  ತನಿಖೆ ಚುರುಕುಗೊಂಡಿದ್ದು, ಹಲವು ಖ್ಯಾತನಾಮರು ಈ ಜಾಲದಿಂದ ಜೈಲು ಸೇರಿದ್ದಾರೆ.

Comments are closed.