ಆರ್ಸಿಬಿ ಅಭಿಮಾನಿಯ ಹೊಸವರಸೆ…! ತಂಡ ಬೆಂಬಲಿಸೋರಿಗೆ ಚಿಕನ್ ಬಿರಿಯಾನಿ, ಚಿಕನ್ ಚಾಪ್ಸ್ ಮೇಲೆ ಸಖತ್ ಡಿಸ್ಕೌಂಟ್….!!

ಕ್ರಿಕೆಟ್ ಅನ್ನೋದು ಅಬಾಲವೃದ್ಧರಾಗಿ ಎಲ್ಲರನ್ನೂ ಸೆಳೆಯೋ ಕ್ರೀಡೆ. ಅದರಲ್ಲೂ ಐಪಿಎಲ್  ಯುವಜನತೆಯಿಂದ ಆರಂಭಿಸಿ ಮುದುಕರವರೆಗೆ ಎಲ್ಲರನ್ನೂ ಸೆಳೆಯುತ್ತಿದೆ.  ಆರ್ಸಿಬಿ ಅಭಿಮಾನಿಗಳದ್ದಂತೂ ವಿಚಿತ್ರ ಅಭಿಮಾನ. ಮೈಸೂರಿನಲ್ಲೊಬ್ಬ ಕಟ್ಟಾ ಆರ್ಸಿಬಿ ಫ್ಯಾನ್ ಹೊಟೇಲ್ ಮಾಲೀಕ ತಂಡದ ಅಭಿಮಾನಿಗಳಿಗೆ ಸಖತ್ ಡಿಸ್ಕೌಂಟ್ ಘೋಷಿಸಿ ಗಮನ ಸೆಳೆದಿದ್ದಾರೆ.

ಆರ್.ಸಿ.ಬಿ ಫ್ಯಾನ್ಸ್ ಗಳೇ ಹಾಗೆ ತಂಡ ಸೋಲಲಿ ಗೆಲ್ಲಲಿ ಅಭಿಮಾನ ಕಿಂಚಿತ್ತೂ ಕುಂದುವುದಿಲ್ಲ. ಮೈಸೂರಿನ ಗೋಕುಲಂ ಆದಿತ್ಯ ಹಾಸ್ಪಿಟಲ್ ಬಳಿ ಇರೋ ನಾಟಿ ಹಟ್ ಹೊಟೇಲ್ ನಲ್ಲಿ  ಆರ್ಸಿಬಿ ಸಪೋರ್ಟರ್ಸ್  ಮತ್ತು ಫ್ಯಾನ್ಸ್ ಗೆ ಸಖತ್ ಆಫರ್ ನೀಡ್ತಿದ್ದಾರೆ ಮಾಲೀಕ ಸ್ವರೂಪ್.

ವರ್ಷದ ಹಿಂದೆ ಸ್ವರೂಪ್ ನಾಟಿ ಹಟ್ ಹೆಸರಿನಲ್ಲಿ ನಾನ್ ವೆಜ್ ಹೊಟೇಲ್ ಆರಂಭಿಸಿದ್ದಾರೆ.  ಆರ್ಸಿಬಿ ಫ್ಯಾನ್ ಆಗಿರೋ ಸ್ವರೂಪ್ ಹೊಟೇಲ್ ನಲ್ಲಿ ಅಭಿಮಾನಿಗಳಿಗಾಗಿ ಚಿಕನ್ ಬಿರಿಯಾನಿ ಹಾಗೂ ಚಿಕನ್ ಚಾಪ್ಸ್ ಮೇಲೆ 50% ಡಿಸ್ಕೌಂಟ್ ಘೋಷಿಸಿದ್ದಾರೆ. ಹೀಗಾಗಿ ಇಲ್ಲಿ ಆರ್ಸಿಬಿ ಅಭಿಮಾನಿಗಳು ಕೇವಲ 100 ರೂಪಾಯಿ ಹೊಟ್ಟೆ ತುಂಬ ಚಿಕನ್ ಬಿರಿಯಾನಿ ಹಾಗೂ ಚಿಕನ್ ಚಾಪ್ಸ್ ಸವಿಯಬಹುದು.

49 ರೂಪಾಯಿಗೆ ಒಂದು ಪ್ಲೇಟ್ ಚಿಕನ್ ಬಿರಿಯಾನಿ, 49 ರೂಪಾಯಿಗೆ ಒಂದು ಪ್ಲೇಟ್ ಚಿಕನ್ ಚಾಪ್ಸ್ ನೀಡಿದ್ದಾರೆ ಸ್ವರೂಪ್. ಐಪಿಎಲ್ ಪಂದ್ಯಾವಳಿಗಳು ನಡೆಯುವಷ್ಟು ಕಾಲ ಹೊಟೇಲ್ ನಲ್ಲಿ ಈ ಆಫರ್ ಲಭ್ಯವಾಗಲಿದೆಯಂತೆ.

ಕೇವಲ ಊಟ-ತಿಂಡಿಯಲ್ಲಿ ಮಾತ್ರವಲ್ಲ ಹೊಟೇಲ್ ನ ವಿನ್ಯಾಸದಲ್ಲೂ ಸ್ವರೂಪ್ ತಮ್ಮ ಆರ್.ಸಿ.ಬಿ ಮೇಲಿನ ಅಭಿಮಾನ ಪ್ರದರ್ಶಿಸಿದ್ದು, ಹೊಟೇಲ್ ನ  ನೀರುಬಾಟಲ್, ಟೇಬಲ್,ಕುರ್ಚಿ,ಟೇಬಲ್ ಮ್ಯಾಟ್ ಮೇಲೂ ಕೂಡ ಆರ್ಸಿಬಿ ಜರ್ಸಿ ಸಿದ್ಧಪಡಿಸಿದ್ದಾರೆ.

ನೀವು ಮೈಸೂರಿನವರಾಗಿದ್ದರೇ ಐಪಿಎಲ್ ಮ್ಯಾಚ್ ನೋಡ್ತಾ ಈ ಗ್ರೀನ್ ಬಿರಿಯಾನಿ ಹಾಗೂ ಚಿಕನ್ ಚಾಪ್ಸ್ ನ್ನು ಕೇವಲ 99 ರೂಪಾಯಿಗೆ ಸವಿದು ಎಂಜಾಯ್ ಮಾಡಬಹುದು.

Comments are closed.