ದೊಡ್ಮನೆಯಲ್ಲೇ ನಡೆದುಹೋಯ್ತು ರಿಂಗ್ ಎಕ್ಸೆಂಜ್….! ದಿವ್ಯಾ-ಅರವಿಂದ್ ಪ್ರೇಮಕಹಾನಿಗೆ ಸಾಕ್ಷಿಯಾಯ್ತು ಬಿಗ್ ಬಾಸ್…!!

ಪ್ರತಿನಿತ್ಯ ಹೊಸ ಹೊಸ ಆಯಾಮಗಳನ್ನು ತೆರೆದಿಡುತ್ತಿರುವ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ ಸಿಹಿಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ದೊಡ್ಮನೆಯಲ್ಲಿ ಪ್ರೇಮಪಕ್ಷಿಗಳಿಬ್ಬರ ನಿಶ್ಚಿತಾರ್ಥವೇ ನಡೆದು ಹೋದಂತಿದ್ದು, ಹೆತ್ತವರು ಹಾಗೂ ಪ್ರೇಕ್ಷಕರು ಅಚ್ಚರಿಯಿಂದ ಹುಬ್ಬೇರಿಸುವಂತಾಗಿದೆ.

ಅರವಿಂದ ಮತ್ತು ದಿವ್ಯಾ ಉರುಡುಗ ನಡುವೆ ಪ್ರೀತಿಯೋ-ಪ್ರೇಮವೋ ಏನೋ ನಡೆಯುತ್ತಿದೆ ಎಂಬ ಮಾತೊಂದು ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿತ್ತು. ಈ ಮಧ್ಯೆ ಬಿಗ್ ಬಾಸ್ ನೀಡಿದ ಟಾಸ್ಕ್ ವೊಂದು ಇದು ನಿಜಕ್ಕೂ ಪ್ರೀತಿಯೇ ಎಂಬ ಸಾಕ್ಷಿ ಒದಗಿಸಿದ್ದು, ತಂದೆ ನೀಡಿದ್ದ ಉಂಗುರವೊಂದನ್ನು ಅರವಿಂದ್ ಗೆ ಗಿಫ್ಟ್ ಎಂದು ನೀಡಿದ ದಿವ್ಯಾ  ಅಚ್ಚರಿ ಮೂಡಿಸಿದ್ದಾರೆ.

ಅರವಿಂದ್ –ದಿವ್ಯಾ ಪ್ರೀತಿಸುತ್ತಿದ್ದಾರೆ ಎಂಬ ಗುಮಾನಿಗಳ ನಡುವೆ ಬಿಗ್ ಬಾಸ್ ಹುಡುಗರು ತಮ್ಮ ಮನಸ್ಸು ಕದ್ದ ಹುಡುಗಿಗೆ ಹೃದಯಾಕಾರದ ಬಲೂನು ನೀಡಬೇಕು. ಹುಡುಗಿಯರು ತಮ್ಮ ಮನಸ್ಸು ಕದ್ದ ಹುಡುಗನಿಗೆ ತಮಗಿಷ್ಟವಾದ ವಸ್ತುವೊಂದನ್ನು ನೀಡಬೇಕೆಂಬ ಟಾಸ್ಕ್ ನೀಡಿದ್ದರು.

ಈ ಟಾಸ್ಕ್ ವೇಳೆ ಅರವಿಂದ್ ನನ್ನ ಮನಸ್ಸನ್ನು ಅರ್ಥಮಾಡಿಕೊಂಡಿದ್ದಾರೆ.ಅವರು ಜೀವನಪೂರ್ತಿ ನನ್ನ ಜೊತೆಗಿರಬೇಕು ಎಂದ ದಿವ್ಯಾ, ಅದಕ್ಕಾಗಿ ತಂದೆ ನನಗೆ ಪ್ರೀತಿಯಿಂದ ನೀಡಿದ್ದ ಉಂಗುರವನ್ನು ಅವನಿಗೆ ನೀಡುತ್ತಿದ್ದೇನೆ ಎಂದು ರಿಂಗ್ ತೊಡಿಸಿದರು. ಇನ್ನು ನಾನು ಏನು ಹೇಳದೇ ದಿವ್ಯಾ ನನ್ನನ್ನು ಅರ್ಥೈಸಿಕೊಂಡಿದ್ದಾಳೆ ಎಂದು ಅರವಿಂದ್ ಆಕೆಗೆ ಹೃದಯಾಕಾರಾದ ಬಲೂನು ನೀಡಿದ್ದಾನೆ. ‘

ಇಬ್ಬರೂ ಪರಸ್ಪರ ಕೊಡುಗೆಗಳನ್ನು ವಿನಿಮಯ ಮಾಡಿಕೊಳ್ಳುವ ಹೊತ್ತಿನಲ್ಲಿ ಪರಸ್ಪರ ಕಣ್ಣೀರು ಸುರಿಸುತ್ತಿದ್ದರು ಅನ್ನೋದು ಗಮನಿಸಬೇಕಾದ ಅಂಶ. ಒಟ್ಟಿನಲ್ಲಿ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಪ್ರತಿವರ್ಷವೂ ಒಂದಿಲ್ಲೊಂದು ಲವ್ ಸ್ಟೋರಿ ಪಕ್ಕಾ ಎಂಬ ಮಾತಿಗೆ ಸಾಕ್ಷಿ ಎಂಬಂತೆ ಈ ಸೀಸನ್ ನಲ್ಲೂ ಲವ್ ಸ್ಟೋರಿ ಆರಂಭವಾಗಿದ್ದು, ರಿಂಗ್ ಎಕ್ಸೆಂಜ್ ಕೂಡ ನಡೆದಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

Comments are closed.