ಕೆಂಪುಕೋಟೆ : ರೈತರಿಂದ ಜೀವ ಉಳಿಸಿಕೊಳ್ಳಲು 15 ಅಡಿ ಆಳಕ್ಕೆ ಜಿಗಿದ ಪೊಲೀಸರು, ಸೈನಿಕರು ..! ವಿಡಿಯೋ

ನವದೆಹಲಿ : ಕೇಂದ್ರ ಸರಕಾರ ಜಾರಿಗೆ ಹೊರಟಿರುವ ಕೃಷಿ ಕಾನೂನಿನ ವಿರುದ್ದ ಸಮರ ಸಾರಿರುವ ರೈತರ ಹೋರಾಟ ಕಿಚ್ಚು ಹಚ್ಚಿಸಿದೆ. ಕಂಪೆಕೋಟೆಯಲ್ಲಿ ರೈತರಿಂದ ತಪ್ಪಿಸಿಕೊಳ್ಳಲು ಪೊಲೀಸರು 15 ಅಡಿ ಕಂದಕಕ್ಕೆ ಜಿಗಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

72 ನೇ ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿ ರೈತರ ಪ್ರತಿಭಟನೆಗೆ ಆಕ್ರೋಶಕ್ಕೆ ಕಾರಣವಾಗಿತ್ತು. ನಗರದ ಗಡಿಗಳಲ್ಲಿ ಶಾಂತಿಯುತ ಟ್ರಾಕ್ಟರ್ ರ್ಯಾಲಿ ನಡೆಸುತ್ತಿದ್ದ ಗುಂಪು ಒಮ್ಮಿಂದೊಮ್ಮೆಲೆ ಪೊಲೀಸರತ್ತ ನುಗ್ಗಿ ಬಂದಿತ್ತು. ಈ ಸಮಯದಲ್ಲಿ ಪೊಲೀಸ್ ಮತ್ತು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆದಿದೆ.

ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ ಐ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಪೊಲೀಸರು ಹಾಗೂ ಅರೆಸೇನಾ ಪಡೆಯ ಸೈನಿಕರು ಕೆಂಪುಕೋಟೆ ಸಂಕೀರ್ಣದಲ್ಲಿ 15 ಅಡಿ ಎತ್ತರದ ಗೋಡೆಯಿಂದ ಜಿಗಿಯುತ್ತಿರವುದು ಮನಕಲಕುವಂತಿದೆ.

Comments are closed.