ಭಾನುವಾರ, ಏಪ್ರಿಲ್ 27, 2025
HomeBreakingOlive Oil Tips : ಚರ್ಮದ ಕ್ಯಾನ್ಸರ್ ನಿಂದ ರಕ್ಷಿಸುತ್ತೆ ಆಲಿವ್ ಆಯಿಲ್

Olive Oil Tips : ಚರ್ಮದ ಕ್ಯಾನ್ಸರ್ ನಿಂದ ರಕ್ಷಿಸುತ್ತೆ ಆಲಿವ್ ಆಯಿಲ್

- Advertisement -
  • ರಕ್ಷಾ ಬಡಾಮನೆ

ಆಲಿವ್ ಎಣ್ಣೆಯನ್ನು ಆಲೀವ್ ಮರದ ಹಣ್ಣುಗಳಿಂದ ತೆಗೆಯಲಾಗುತ್ತದೆ. ಇದು ಮೆಡಿಟರೇನಿಯನ್ ಪ್ರದೇಶದ ಸಾಂಪ್ರದಾಯಕ ತಳಿ. ಜನರು ಆಲಿವ್ ಎಣ್ಣೆಯನ್ನು ಅಡುಗೆ, ಸೌಂದರ್ಯವರ್ಧಕಗಳು, medicine, ಸಾಬೂನುಗಳಲ್ಲಿ ಮತ್ತು ಸಾಂಪ್ರದಾಯಿಕ ದೀಪಗಳಿಗೆ ಇಂಧನವಾಗಿ ಬಳಸುತ್ತಾರೆ.

ಆಲಿವ್ ಎಣ್ಣೆ ಮೂಲತಃ ಮೆಡಿಟರೇನಿಯನ್‌ನಿಂದ ಬಂದಿದೆ, ಆದ್ರಿಂದ ಆಲೀವ್ ಆಯಿಲ್ ಇದು ಪ್ರಪಂಚದಾದ್ಯಂತ ಜನಪ್ರಿಯವಾಗಿದೆ.

ಆಲಿವ್ ಎಣ್ಣೆ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ಇದು ಆಕ್ಸಿಡೀಕರಣವನ್ನು ತಡೆಯುವ ವಸ್ತುವಾಗಿದೆ. ಆಲಿವ್ ಆಯಿಲ್ ನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಸಹ ಹೊಂದಿದೆ. ಚರ್ಮ, ಕೂದಲು, ಆರೋಗ್ಯಕ್ಕೆ ಆಲಿವ್ ಎಣ್ಣೆಯ ಉಪಯೋಗಗಳು.

ಆಲಿವ್ ಎಣ್ಣೆ ಜನಪ್ರಿಯ ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು ಇದನ್ನು ಚರ್ಮ ಮತ್ತು ಕೂದಲು ಎರಡನ್ನೂ ಮೃದುಗೊಳಿಸಲು ಬಳಸಲಾಗುತ್ತದೆ.
ಫೇಸ್ ವಾಶ್, ಬಾಡಿ ವಾಶ್, ಸೋಪ್ ಮತ್ತು ಲೋಷನ್ ಸೇರಿದಂತೆ ಅನೇಕ ವೈಯಕ್ತಿಕ ಆರೈಕೆ ಉತ್ಪನ್ನಗಳಲ್ಲಿ ಆಲಿವ್ ಎಣ್ಣೆ ಒಂದು ಘಟಕಾಂಶವಾಗಿದೆ.

ಆಲಿವ್ ಎಣ್ಣೆಯಲ್ಲಿ ವಿಟಮಿನ್ ಇ ಅಂಶವಿದ್ದು, ಉರಿಯೂತ, ಮೊಡವೆಗಳಿಗೆ ಚಿಕಿತ್ಸೆ ನೀಡುವ ಮೂಲಕ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಸೋರಿಯಾಸಿಸ್ ಮತ್ತು ಚರ್ಮದ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಂದ ಚರ್ಮವನ್ನು ರಕ್ಷಿಸುತ್ತದೆ.

ಬಿಸಿನಿಂಬೆ ಮತ್ತು ನೀರನ್ನು ಬಳಸಿ ಪಾದವನ್ನು ಶುಚಿಗೊಳಿಸಿ ಮತ್ತು ಬಿರುಕುಗೊಂಡ ಗುಣವಾಗಲು ತೇವಾಂಶ ಮತ್ತು ಮೃದುತ್ವಕ್ಕಾಗಿ ಆಲೀವ್ ಎಣ್ಣೆಯನ್ನು ಉದಾರವಾಗಿ ನಿಮ್ಮ ಒಡೆದ ಪಾದಗಳಿಗೆ ಉಜ್ಜಿಕೊಳ್ಳಿ. ಇದರಿಂದ ಒಡೆದ ಪಾದಗಳು ಗುಣವಾಗುತ್ತದೆ.

ಶಾಂಪೂ ಮೊದಲು ಆಲಿವ್ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನಿಮ್ಮ ಕೂದಲಿಗೆ ವಿಶಿಷ್ಟವಾದ ಹೊಳಪು ಮತ್ತು ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ.

ಆಲಿವ್ ಆಯಿಲ್ ನಲ್ಲಿ ವಿಟಮಿನ್ ಇ ಅಂಶವಿರುವುದರಿಂದ ನಿಮ್ಮ ಉಗುರಿನ ಆರೋಗ್ಯವನ್ನು ಸುಧಾರಿಸುತ್ತದೆ. ಹೀಗಾಗಿ ಉರುಗು ಹೊಳಪು ಪಡೆದುಕೊಂಡು, ಉಗುರಿನ ಸೌಂದರ್ಯ ವೃದ್ದಿಸುವಲ್ಲಿಯೂ ಸಹಕಾರಿಯಾಗಿದೆ.

ಕೇವಲ ಸೌಂದರ್ಯಕ್ಕಷ್ಟೇ ಅಲ್ಲಾ ಆಲಿವ್ ಆಯಿಲ್ ನ್ನು ಅಡುಗೆಯಲ್ಲಿಯೂ ಬಳಕೆ ಮಾಡಬಹುದಾಗಿದೆ. ಪ್ರಮುಖವಾಗಿ ಮಹಿಳೆಯರನ್ನು ಕಾಡುವ ಸ್ತನ ಕ್ಯಾನ್ಸರ್ ತಡೆಗಟ್ಟಲು ಆಲಿವ್ ಆಯಿಲ್ ರಾಮಬಾಣ. ನಿತ್ಯದ ಅಡುಗೆಯಲ್ಲಿ ಆಲಿವ್ ಎಣ್ಣೆ ಬಳಕೆ ಮಾಡುವುದರಿಂದ ಸ್ತನ ಕ್ಯಾನ್ಸರಿಂದ ದೂರವಿರಬಹುದು.

ಆಲಿವ್ ಎಣ್ಣೆಯನ್ನು ಅಡುಗೆಯಲ್ಲಿ ಬಳಕೆ ಮಾಡುವುದರಿಂದ ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಡಲು ಕೂಡ ಸಹಕಾರಿಯಾಗಿದೆ. ಮಧುಮೇಹಿಗಳ ಅಡುಗೆಗೆ ಆಲಿವ್ ಆಯಿಲ್ ಹೆಚ್ಚು ಪೂರಕವಾಗಿದೆ.

ಆಲಿವ್ ಎಣ್ಣೆಯೊಂದಿಗಿನ ಆಹಾರವು ಬಲವಾದ ಮೂಳೆಗಳಿಗೆ ಕಾರಣವಾಗಬಹುದು. ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಆಸ್ಟಿಯೋಕಾಲ್ಸಿನ್ ಇರುವುದು ಕಂಡುಬಂದಿದೆ, ಇದು ಆರೋಗ್ಯಕರ ಮೂಳೆ ರಚನೆಯ ಸೂಚನೆಯಾಗಿದೆ.

ಖಿನ್ನತೆಯಿಂದ ಬಳಲುವವರಿಗೆ ಆಲಿವ್ ಆಯಿಲ್ ಅದ್ಬುತ ಪ್ರಯೋಜನಗಳನ್ನು ನೀಡುತ್ತದೆ. ಆಲಿವ್ ಎಣ್ಣೆಯು ಮೆದುಳಿನ ರಾಸಾಯನಿಕವಾದ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಕೆಲವು ಖಿನ್ನತೆ-ಶಮನಕಾರಿಗಳ ಪರಿಣಾಮವನ್ನು ಹೋಲುತ್ತದೆ ಎಂದು ಕಂಡುಬಂದಿದೆ.

ಆಲಿವ್ ಎಣ್ಣೆಯನ್ನು ಬಳಸುವ ಮೂಲಕ ನಿಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನೀವು ಕಡಿಮೆ ಮಾಡಬಹುದು.

ತೈಲದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಗಳು ಮುಖ್ಯವಾಗಿ ಒಲಿಕ್ ಆಮ್ಲ, ಮತ್ತು ಅದರ ಫೀನಾಲಿಕ್ ಸಂಯುಕ್ತಗಳು ಉರಿಯೂತ, ಆಕ್ಸಿಡೇಟಿವ್ ಒತ್ತಡ, ಇನ್ಸುಲಿನ್ ಪ್ರತಿರೋಧ ಮತ್ತು ಯಕೃತ್ತಿನ ಹಾನಿಗೆ ಕಾರಣವಾಗುವ ಇತರ ಬದಲಾವಣೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular