ಲಾಕ್ ಡೌನ್ ನಿರ್ಲಕ್ಷ್ಯಕ್ಕೆ ಮೋದಿ ಬೇಸರ : ಕಟ್ಟಿನಿಟ್ಟಾಗಿ ನಿಯಮ ಪಾಲಿಸುವಂತೆ ಪ್ರಧಾನಿ ಕರೆ

0

ನವದೆಹಲಿ: ಕೊರೊನಾ ಮಹಾಮಾರಿಯ ವಿರುದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಪ್ಯೂ ಯಶಸ್ವಿಯಾಗಿದೆ. ದೇಶದಾದ್ಯಂತ ಮೋದಿ ಅವರ ಕರೆಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿತ್ತು. ಆದರೆ ಕರ್ಪ್ಯೂ ನಂತರದಲ್ಲಿ ಹೇರಲಾಗಿರೊ ಲಾಕ್ ಡೌನ್ ವಿಚಾರದಲ್ಲಿ ಜನತೆ ಹಾಗೂ ಸರಕಾರ ನಿರ್ಲಕ್ಷ್ಯವಹಿಸಿರೋದಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.

ದೇಶದಾದ್ಯಂತ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದೆ. ದೇಶದಲ್ಲಿ ಇದುವರೆಗೆ 8 ಮಂದಿ ಡೆಡ್ಲಿ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾ ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಪ್ಯೂ ಯಶಸ್ವಿಯಾಗಿತ್ತು. ದೇಶದಲ್ಲಿ ಇದುವರೆಗೂ ಕಂಡರಿಯದಂತಹ ರೀತಿಯಲ್ಲಿ ಜನ ಬೆಂಬಲ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ, ರಾಜಸ್ತಾನ್ ಸೇರಿದಂತೆ ಹಲವು ರಾಜ್ಯಗಳು ಲಾಕ್ ಡೌನ್ ಹೇರಿವೆ. ಅಲ್ಲದೇ ಕರ್ನಾಟಕ 9 ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶ ಹೊರಡಿಸಲಾಗಿದೆ. ಆದರೆ ರಾಜ್ಯದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಕರೆ ನೀಡಿರೋ ಲಾಕ್ ಡೌನ್ ಪರಿಣಾಮಕಾರಿಯಾಗಿಲ್ಲ. ಜನರು ಕೂಡ ಕೊರೊನಾ ವೈರಸ್ ಸೋಂಕನ್ನು ಲಘುವಾಗಿ ಪರಿಗಣಿಸಿರುವುದು ಸರಿಯಲ್ಲ ಎಂದಿದ್ದಾರೆ. ಅಲ್ಲದೇ ರಾಜ್ಯ ಸರಕಾರಗಳು ಕೊರೊನಾ ಸೋಂಕನ್ನು ಗಂಭೀರವಾಗಿ ಪರಿಗಣಿಸುವಂತೆ ಟ್ವೀಟರ್ ಮೂಲಕ ಸೂಚಿಸಿದ್ದಾರೆ.

Leave A Reply

Your email address will not be published.