ಕೆಜಿಎಫ್ ದಾಖಲೆ ಮುರಿತಾ ರಾಬರ್ಟ್…?! ಜೋಡೆತ್ತುಗಳ ನಡುವೆ ಫೈಟ್ ತಂದಿಡುತ್ತಾ ಈ ಲೆಕ್ಕಾಚಾರ…!?

ಹಿರಿಯ ನಟ ಅಂಬರೀಶ್ ಪತ್ನಿ ಹಾಗೂ ನಟಿ ಸುಮಲತಾ ಗೆಲುವಿಗಾಗಿ ದರ್ಶನ್ ಹಾಗೂ ಯಶ್ ಜೋಡೆತ್ತಿನಂತೆ ಜೊತೆ ನಿಂತು ಕೆಲಸ ಮಾಡಿದ್ದನ್ನು ಕರ್ನಾಟಕ ಇನ್ನೂ ಮರೆತಿಲ್ಲ. ಆದರೆ ಈ ಜೋಡೆತ್ತುಗಳ ಮಧ್ಯೆ ಬಿರುಕು ಮೂಡಿಸೋ ಕೆಲಸವನ್ನು ಸೋಷಿಯಲ್ ಮೀಡಿಯಾಗಳು ಮಾಡ್ತಿವೆ ಎನ್ನಲಾಗ್ತಿದೆ.

ಸಧ್ಯ ದರ್ಶನ್ ಅಭಿನಯದ ರಾಬರ್ಟ್ ರಿಲೀಸ್ ಗೆ ಸಿದ್ಧವಾಗಿದ್ದರೇ, ಅತ್ತ ಯಶ್ ನಟನೆಯ ಬಹುನೀರಿಕ್ಷಿತ ಚಿತ್ರ ಕೆಜಿಎಫ್-2 ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಎರಡು ಚಿತ್ರಗಳಿಗೂ ತಮ್ಮದೇ ಆದ ಮಹತ್ವ ಹಾಗೂ ಪ್ರೇಕ್ಷಕ ವರ್ಗವಿದೆ. ರಾಬರ್ಟ್ ಮೂರು ಭಾಷೆಯಲ್ಲಿ ತೆರೆಗೆ ಬರ್ತಿದ್ದರೇ, ಕೆಜಿಎಫ್-2 ಇಂಗ್ಲೀಷ್ ಸೇರಿ ಬಹುಭಾಷೆಯಲ್ಲಿ ತೆರೆಗೆ ಬರ್ತಿದೆ.

ಆದರೆ ಈಗ ರಾಬರ್ಟ್ ವಿತರಣೆ ಹಕ್ಕಿನ ಮಾರಾಟದ ಬೆಲೆ ಇಟ್ಕೊಂಡು ಕೆಜಿಎಫ್ ತಂಡವನ್ನು ಹೀಗೆಳೆಯುವ ಪ್ರಯತ್ನ ಆರಂಭವಾಗಿದೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿಬರ್ತಿದೆ. ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಸೇರಿ 78 ಕೋಟಿ ರೂಪಾಯಿಗೆ ರಾಬರ್ಟ್ ವಿತರಣೆಯ ಹಕ್ಕು ಮಾರಾಟವಾಗಿದೆ ಎನ್ನಲಾಗ್ತಿದೆ.

ಈ ವಿಚಾರವನ್ನು ಪ್ರಚಾರ ಪಡಿಸುವ ಅಬ್ಬರದಲ್ಲಿ ಇದುವರೆಗೂ ಯಾವುದೇ ಕನ್ನಡ ಚಿತ್ರವೂ ಇಷ್ಟು ಬೆಲೆ ಪಡೆದಿರಲಿಲ್ಲ. ಕೆಜಿಎಫ್ ಕೂಡ ಇಷ್ಟು ಬೆಲೆ ಪಡೆದಿರಲಿಲ್ಲ ಎಂದು ಹೇಳಲಾಗುತ್ತಿದ್ದು, ಇದು ಯಶ್ ಅಭಿಮಾನಿಗಳನ್ನು ಕೆರಳಿಸುತ್ತಿದೆ. ಆಂಧ್ರಪ್ರದೇಶದಲ್ಲೂ ದಾಖಲೆಯ ಹಣಕ್ಕೆ ರಾಬರ್ಟ್ ಸೇಲ್ ಆಗಿದ್ದು, ವಿತರಕರ ಮಾಹಿತಿಯಂತೆ 400 ಥಿಯೇಟರ್ ನಲ್ಲಿ ತೆಲುಗು ರಾಬರ್ಟ್ ತೆರೆಗೆ ಬರಲಿದೆ.

ಕರ್ನಾಟಕದಲ್ಲೂ ರಾಬರ್ಟ್ ಅದ್ದೂರಿ ಹವಾ ಮೂಡಿಸಿದ್ದು, ಫ್ರೀರಿಲೀಸ್ ಇವೆಂಟ್ ಹಾಗೂ ಹಾಡುಗಳ ಮೂಲಕ ವೀಕ್ಷಕರ ಕಾತುರ ಹೆಚ್ಚಿಸಿದೆ. ಹೀಗಾಗಿ ಸಹಜವಾಗಿಯೇ ದರ್ಶನ್ ಅಭಿಮಾನಿಗಳು ಸಿನಿಮಾ ರಿಲೀಸ್ ಗೆ ಕಾತುರದಿಂದ ಕಾಯ್ತಿದ್ದಾರೆ. ಆದರೆ ಈ ವಿತರಣೆಯ ಹಣದ ಕಾರಣ ಇಟ್ಕೊಂಡು ಸ್ಟಾರ್ ಗಳ ನಡುವೆ ವಾರ್ ತಂದಿಡೋ ಪ್ರಯತ್ನ ಆರಂಭವಾಗಿರೋದು ಅನಾರೋಗ್ಯಕರ ಬೆಳವಣಿಗೆ ಅಂತಾರೆ ಚಿತ್ರರಂಗದ ಹಿರಿಯರು.

ಚಿತ್ರಗಳು ಆಯಾ ಕಾಲದ ಬೇಡಿಕೆಗಳು ಹಾಗೂ ಸ್ಥಿತಿಗತಿಗೆ ಅನುಗುಣವಾಗಿ ದರ ಪಡೆಯುತ್ತವೇ. ಅದನ್ನೇ ಮುಂದಿಟ್ಟುಕೊಂಡು ಬೇರೆ ಚಿತ್ರದ ಗುಣಮಟ್ಟದ ಬಗ್ಗೆ ಅಥವಾ ಮೇಲು-ಕೀಳು ಅನ್ನೋ ಅರ್ಥದಲ್ಲಿ ಪೋಸ್ಟ್ ಗಳನ್ನು ಹಾಕೋ ಮೂಲಕ ಒಂದಾಗಿರೋ ಸ್ಯಾಂಡಲ್ ವುಡ್ ಸ್ಟಾರ್ ಗಳ ನಡುವೆ ಬೆಂಕಿ ಹೊತ್ತಿಸಬೇಡಿ ಅಂತಿದ್ದಾರೆ ಚಿತ್ರರಂಗದ ಮುತ್ಸದ್ಧಿಗಳು.

Comments are closed.