ಮಂಗಳೂರು : ಮಗು ಮಾರಾಟ ಪ್ರಕರಣ, ಓರ್ವನ ಬಂಧನ

ಮಂಗಳೂರು : ಮಕ್ಕಳನ್ನು 3 ಲಕ್ಷಕ್ಕೆ ಖರೀದಿಸಿ ಆರು ಲಕ್ಷಕ್ಕೂ ಅಧಿಕ ಹಣಕ್ಕೆ ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಬೇಧಿಸುವಲ್ಲಿ ಮಂಗಳೂರು ಪೊಲೀಸರು ಸಕ್ಸಸ್ ಆಗಿದ್ದು, ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಮೂಲದ ರಿಯಾನ್ ( 30 ವರ್ಷ) ಎಂಬಾತನೇ ಬಂಧಿತ ಆರೋಪಿ. ಹಾಸನ ಮೂಲದ ಹೆಣ್ಣು ಮಗುವೊಂದನ್ನು ಕಾರ್ಕಳ ಮೂಲದ ಕವಿತಾ ಎಂಬವರಿಗೆ ರಿಯಾನ್ ಮಾರಾಟ ಮಾಡಿದ್ದ. ಈ ಕುರಿತು ಮೈಸೂರಿನ ಒಡನಾಡಿ ಸಂಸ್ಥೆ ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ರಿಯಾನ್ ಕೇವಲ ಒಂದು ಮಗುವನ್ನಷ್ಟೇ ಮಾರಾಟ ಮಾಡಿದ್ದಾನೆಯೇ ? ಅಥವಾ ಮಕ್ಕಳ ಮಾರಾಟದ ಹಿಂದೆ ವ್ಯವಸ್ಥಿತ ಜಾಲವಿದೆಯೇ ಅನ್ನೋ ಬಗ್ಗೆಯೂ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ. ತನಿಖೆಯ ನಂತರವಷ್ಟೇ ಮಕ್ಕಳ ಮಾರಾಟ ಜಾಲದ ಕುರಿತು ಮಾಹಿತಿ ಹೊರಬರಲಿದೆ.

Comments are closed.