Raja-Rani: ರೀಲ್ ನಲ್ಲಿ ರಿಯಲ್ ಕಪಲ್ಸ್….! ನಾಳೆಯಿಂದ ಮನೆ-ಮನೆಗೆ ರಾಜಾ ರಾಣಿ…!!

ವಿಭಿನ್ನ ರಿಯಾಲಿಟಿ ಶೋಗಳಿಗೆ ಹೆಸರಾದ ಕನ್ನಡದ ಕಲರ್ಸ್ ಕನ್ನಡ ಟಿವಿ ವಾಹಿನಿ ನಾಳೆಯಿಂದ ರೀಲ್ ನಟ-ನಟಿಯರ ರಿಯಲ್ ಜೋಡಿಯನ್ನು ತೆರೆ ಮೇಲೆ ತರಲಿದೆ. ಸಾಕಷ್ಟು ಕುತೂಹಲ ಮೂಡಿಸಿರುವ ಶೋ ಬಗ್ಗೆ ಬಿಗ್ ಬಾಸ್ ನಲ್ಲೂ ಸ್ಪೆಶಲ್ ಟಾಸ್ಕ್ ನೀಡಲಾಗಿದೆ.

ಕನ್ನಡ ಕಿರುತೆರೆಯ ನೂರಾರು ನಟ-ನಟಿಯರು, ಹಿರಿತೆರೆಯ ನಟ-ನಟಿಯರು ಪರಸ್ಪರ ಮೆಚ್ಚಿ ಕೈ ಹಿಡಿದ್ದಾರೆ. ಆ ಮೂಲಕ ನಿಜಜೀವನದಲ್ಲೂ ಒಂದಾಗಿದ್ದಾರೆ. ಇಂಥ ಜೋಡಿಗಳಿಗಾಗಿ ರಿಯಾಲಿಟಿ ಶೋ ರಾಜ ರಾಣಿ ನಾಳೆಯಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿದೆ.

ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಹಲವು ಪ್ರೋಮೋಗಳನ್ನು ಟೆಲಿಕಾಸ್ಟ್ ಮಾಡಿದ್ದು, ಈ ಪ್ರೋಮೋಗಳು ಪ್ರೇಕ್ಷಕರ ಮನಗೆದ್ದಿದ್ದು, ರಿಯಲ್ ಜೋಡಿಗಳ ಆಟ ನೋಡೋಕೆ ಕಿರುತೆರೆ ಪ್ರೇಕ್ಷಕರು ಕಾತುರರಾಗಿದ್ದಾರೆ.

https://www.instagram.com/reel/CRGvZtRhR5j/?utm_medium=copy_link

ಪ್ರೋಮೋದಲ್ಲಿ ಕನ್ನಡ ರ್ಯಾಪರ್ ಹಾಗೂ ಬಿಗ್ ಬಾಸ್ ಸ್ಪರ್ಧಿಗಳಾದ ನಿವೇದಿತಾ ಹಾಗೂ ಚಂದನ್ ಶೆಟ್ಟಿ, ಲಕ್ಷ್ಮೀ ಬಾರಮ್ಮ ಖ್ಯಾತಿಯ ನೇಹಾ ಗೌಡ,ಕವಿತಾ,ಚಂದನ್ ಸೇರಿ ಹಲವು ಜೋಡಿಗಳು ಗಮನಸೆಳೆದಿವೆ.

ಮ್ಯೂಸಿಕ್ ಹಾಗೂ ಡ್ಯಾನ್ಸ್ ಸೇರಿದ  ಈ ಕಾನ್ಸೆಪ್ಟ್ ಪ್ರೇಕ್ಷಕರ ಮನಗೆಲ್ಲುವ ವಿಶ್ವಾಸದಲ್ಲಿದೆ ವಾಹಿನಿ.

ಶೋವನ್ನು ಇನ್ನಷ್ಟು ಪ್ಯಾಪುಲರ್ ಮಾಡೋ ದೃಷ್ಟಿಯಿಂದ ಕಲರ್ಸ್ ವಾಹಿನಿ ಬಿಗ್ ಬಾಸ್ ನಲ್ಲೂ ಇದಕ್ಕೆ ಸಂಬಂಧಿಸಿದ ಟಾಸ್ಕ್ ನೀಡಿದೆ.

Comments are closed.