ಮತ್ತೆ ‌ಬರ್ತಿದ್ದಾರೆ‌ ಮಗಳು ಜಾನಕಿ….! ಮಾರ್ಚ್ ೫ ಕ್ಕೆ ಸಿಕ್ತಾರೆ ಥಿಯೇಟರ್ ನಲ್ಲಿ…!!

ಮಗಳು ಜಾನಕಿ ಮತ್ತೆ ಬರ್ತಿದ್ದಾರೆ. ಹೀಗಂದ್ರೆ ಕನ್ನಡ ಕಿರುತೆರೆ ಲೋಕದ ಲಕ್ಷಾಂತರ ಅಭಿಮಾನಿಗಳಿಗೆ ಖುಷಿಯೋ ಖುಷಿ. ಆದರೆ ಬರ್ತಿರೋದು ಮಗಳು ಜಾನಕಿ ಖ್ಯಾತಿಯ ನಟಿ ಗಾನವಿ ಲಕ್ಷಣ್ ಮಾತ್ರ ಸೀರಿಯಲ್ ಅಲ್ಲ. ಕಿರುತೆರೆಯಲ್ಲಿ ಹೆಸರು ಗಳಿಸಿದವರೂ ಹಿರಿತೆರೆಗೂ ಬರಬೇಕು ಎಂಬ ಅಲಿಖಿತ ನಿಯಮದಂತೆ ಮಗಳು ಜಾನಕಿ ಸೀರಿಯಲ್ ನ ಮಗಳು ಜಾನಕಿ ಪಾತ್ರಧಾರಿ ಗಾನವಿ ಲಕ್ಷಣ್ ಹೀರೋ ಸಿನಿಮಾದ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದ ಹೀರೋ ಸಿನಿಮಾದಲ್ಲಿ ವಿಭಿನ್ನ ಪಾತ್ರ ಹಾಗೂ ಲುಕ್ ನಲ್ಲಿ ಗಾನವಿ ಲಕ್ಷಣ್ ಹಿರಿತೆರೆಗೆ ಎಂಟ್ರಿ ಕೊಡಲಿದ್ದು, ಈ ಸಿನಿಮಾ ಮಾರ್ಚ್ 5 ರಂದು ರಿಲೀಸ್ ಆಗಲಿದೆ.

ವಿಭಿನ್ನ ನಿರ್ದೇಶನಕ್ಕೆ ಹೆಸರಾದ ರಿಷಭ್ ಶೆಟ್ಟಿಯ  ಈ ಸಿನಿಮಾ ಮಾರ್ಚ್ 5 ರಂದು ತೆರೆಗೆ ಬರಲಿದ್ದು, ನಟ ಹಾಗೂ ನಿರ್ದೇಶಕ್ ರಿಷಭ್ ಶೆಟ್ಟಿ ಟ್ವೀಟ್ ಮೂಲಕ  ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಸದ್ದಿಲ್ಲದೇ ಸೆಟ್ಟೇರಿದ್ದ  ಈ ಸಿನಿಮಾ ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ಶೂಟಿಂಗ್ ಆರಂಭಿಸಿತ್ತು.

ಕೊರೋನಾದ ಲಾಕ್ ಡೌನ್ ವೇಳೆ ಸ್ವಂತ ಊರಿಗೆ ತೆರಳಿದ್ದ ರಿಷಭ್ ಶೆಟ್ಟಿ ಆ ಬಿಡುವಿನ ವೇಳೆಯಲ್ಲೇ ಸಿನಿಮಾಗಾಗಿ ಎಲ್ಲ ಸಿದ್ಧತೆ ಮಾಡಿಕೊಂಡು ಶೂಟಿಂಗ್ ಗೂ ಸಜ್ಜಾಗಿ ಕೂತಿದ್ದರಂತೆ. ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ, ಸಿನಿಮಾ ಶೂಟಿಂಗ ಆರಂಭಿಸಿದ್ದರು. ಈಗ ರಿಲೀಸ್ ಗೂ ಕೂಡ ಮುಹೂರ್ತ ಫಿಕ್ಸ್ ಆಗಿದೆ.

ಹೀರೋ ಅಶೋಕ್ ವನ ಎಸ್ಟೇಟ್ ಗೆ ಸ್ವಾಗತ ಎಂಬ ಸಬ್ ಟೈಟಲ್ ನ  ಈ ಸಿನಿಮಾದಲ್ಲಿ ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದು  ರೈಫಲ್ಸ್  ಹಿಡಿದು ಸಖತ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಮೇಲ್ನೋಟಕ್ಕೆ ನಕ್ಸಲ್ ಕತೆ ಎಂಬಂಥೆ ಭಾಸವಾಗುವ  ಸಿನಿಮಾದ ಬಗ್ಗೆ ಹೆಚ್ಚಿನ ಡಿಟೇಲ್ಸ್  ಬಹಿರಂಗವಾಗಿಲ್ಲ.

Comments are closed.