ಹುಡುಗೀರ ಕಾಟ ತಡೆಯೋಕಾಗಲ್ಲ 5 ದಿನ ರಜೆ ಕೊಡಿ : ವಿದ್ಯಾರ್ಥಿಯ ಪತ್ರಕ್ಕೆ ಪ್ರಾಂಶುಪಾಲರು ಶಾಕ್ ..!

ಕೊಳ್ಳೆಗಾಲ : ಕಾಲೇಜಿನಲ್ಲಿ ಹುಡುಗಿಯರ ಕಾಟ ತಡೆಯೋಕೆ ಆಗಲ್ಲ. ವ್ಯಾಲಟೈನ್ಸ್ ಡೇಗೆ 5 ದಿನಗಳ ಕಾಲ ನನಗೆ ರಜೆಯನ್ನು ಕೊಡಿ. ಹೀಗಂತ ವಿದ್ಯಾರ್ಥಿಯೋರ್ವ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾನೆ.

ಕೊಳ್ಳೆಗಾಲದ ಮಹದೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ಶಿವರಾಜು ಎಂಬಾತನೇ ಪತ್ರ ಬರೆದ ವಿದ್ಯಾರ್ಥಿ. ಫೆಬ್ರವರಿ 14ರಂದು ಪ್ರೇಮಿಗಳ ದಿನ ಹೀಗಾಗಿ ನನಗೆ 5 ದಿನಗಳ ಕಾಲ ರಜೆಯನ್ನು ನೀಡಬೇಕೆಂದು ಶಿವರಾಜ್ ಪ್ರಾಂಶುಪಾಲರಿಗೆ ಪತ್ರವನ್ನು ಬರೆದಿದ್ದಾನೆ.

ಪತ್ರದಲ್ಲಿ ನನಗೆ ಹುಡುಗಿಯರ ಕಾಟ ತಡೆಯೋದಕ್ಕೆ ಆಗುತ್ತಿಲ್ಲ ಅಂತಾ ಕಾರಣ ಕೊಟ್ಟಿದ್ದಾನೆ. ತನಗೆ ದಯಮಾಡಿ ರಜೆಯನ್ನು ಮಂಜೂರು ಮಾಡಬೇಕೆಂದು ಪ್ರಾಂಶುಪಾಲರಿಗೆ ಪತ್ರದ ಮೂಲಕ ವಿನಂತಿಸಿಕೊಂಡಿದ್ದಾನೆ. ಅಲ್ಲದೇ ಪ್ರಾಂಶುಪಾಲರು ಕೂಡ ಶಿವರಾಜ್ ಗೆ ರಜೆ ಮಂಜೂರು ಮಾಡಿದ್ದಾರೆ.

ವಿದ್ಯಾರ್ಥಿ ಬರೆದ ವಿಶಿಷ್ಟ ರಜೆ ಅರ್ಜಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಆದರೆ ಹುಡುಗನಿಗೆ ಹುಡುಗೀಯರು ಅದ್ಯಾವ ಪರಿ ಕಾಟ ಕೊಡ್ತಾರಪ್ಪಾ ಅಂತಾ ಜನ ಮಾತಾಡಿಕೊಳ್ತಿದ್ದಾರೆ. ಒಟ್ಟಿನಲ್ಲಿ ಪ್ರೇಮಿಗಳ ದಿನ ಸಮೀಪಿಸುತ್ತಿರೋ ಹೊತ್ತಲ್ಲೇ ವಿಶಿಷ್ಟ ರಜೆಯ ಪತ್ರ ಸಖತ್ ಸದ್ದು ಮಾಡ್ತಿದೆ.

Comments are closed.