ಇನ್ ಸ್ಟಾಗ್ರಾಂನಲ್ಲಿ ಮೇಘನಾ ರಾಜ್ ಹೊಸ ಸಾಧನೆ….! ಅಭಿಮಾನಿಗಳು ಹಾಗೂ ಸ್ನೇಹಿತರಿಂದ ಶುಭಹಾರೈಕೆ…!!

ಸದಾಕಾಲ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ನಟಿ ಹಾಗೂ ನ್ಯೂ ಮಮ್ಮಿ ಮೇಘನಾ ರಾಜ್ ಇನ್ ಸ್ಟಾಗ್ರಾಂನಲ್ಲಿ ಹೊಸ ಮೈಲಿಗಲ್ಲು ತಲುಪಿದ್ದು, ಅದಕ್ಕಾಗಿ ಮೇಘನಾಗೆ ಸ್ನೇಹಿತರು, ಫ್ಯಾನ್ಸ್ ಗಳು ವಿಡಿಯೋ ಹಾಗೂ ಪೋಸ್ಟರ್ ಗಳ ಮೂಲಕ ಶುಭಹಾರೈಸಿದ್ದಾರೆ.

ತಮ್ಮೆಲ್ಲ ಕಷ್ಟ-ಸುಖವನ್ನು ಹಂಚಿಕೊಳ್ಳೋಕೆ ಸದಾ ಇನ್ ಸ್ಟಾಗ್ರಾಂ ಬಳಸಿಕೊಳ್ಳೋ ಮೇಘನಾ ರಾಜ್,  ಇನ್ ಸ್ಟಾಗ್ರಾಂನಲ್ಲಿ 1 ಮಿಲಿಯನ್ ಫಾಲೋವರ್ಸ್ ಪಡೆದುಕೊಂಡಿದ್ದಾರೆ. 

ತಮ್ಮ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ ತಲುಪುತ್ತಿದ್ದಂತೆ  ಮೇಘನಾ ರಾಜ್, ಅಭಿಮಾನಿಗಳಿಗೆ,ಸ್ನೇಹಿತರಿಗೆ ತನ್ನನ್ನು ಬೆಂಬಲಿಸಿದ್ದಕ್ಕೆ  ಧನ್ಯವಾದ ಹೇಳಿದ್ದಾರೆ.

ಮೇಘನಾ ರಾಜ್ ಅಭಿಮಾನಿ ಪೇಜ್ ಗಳು ಹಾಗೂ ಹಲವು ಅಭಿಮಾನಿಗಳು ಮೇಘನಾ ಈ ಸಾಧನೆಗೆ ಕೊಲಾಜ್ ಹಾಗೂ ವಿಡಿಯೋ ಮೂಲಕ ಶುಭಹಾರೈಸಿದ್ದಾರೆ. ಅಭಿಮಾನಿಗಳು ಸಿದ್ಧಪಡಿಸಿದ ವಿಡಿಯೋ-ಪೋಟೋಗಳನ್ನು  ಶೇರ್ ಮಾಡಿಕೊಂಡು ಧನ್ಯವಾದ ಅರ್ಪಿಸಿದ್ದಾರೆ.

ಬದುಕಿನ ಅಂತ್ಯಂತ್ಯ ದುಃಖದ ಕ್ಷಣಗಳನ್ನು ದಿನಗಳನ್ನು 2020 ರಲ್ಲಿ ಕಂಡ ಮೇಘನಾ ರಾಜ್ ಈಗ ನಿಧಾನಕ್ಕೆ ಎಲ್ಲ ದುಃಖದಿಂದ ಚೇತರಿಸಿಕೊಳ್ಳುತ್ತಿದ್ದು,  ಮಗನ ಆರೈಕೆಯಲ್ಲಿ ದಿನಕಳೆಯುತ್ತಿದ್ದಾರೆ.

ಸಧ್ಯದಲ್ಲೇ  ಸಿನಿಮಾ ಇಂಡಸ್ಟ್ರಿಗೆ ಮರಳುವ ಮುನ್ಸೂಚನೆಯನ್ನು ನೀಡಿದ್ದಾರೆ.

ಜ್ಯೂನಿಯರ್ ಚಿರುಗೆ ಮೂರು ತಿಂಗಳಾಗಿದ್ದು, ಮೊನ್ನೆಯಷ್ಟೆ ಮಗುಗೆ ಪೊಲೀಯೋ ಹನಿ ಹಾಕಿದ ಪೋಟೋವನ್ನು ಮೇಘನಾ ರಾಜ್ ಹಂಚಿಕೊಂಡಿದ್ದರು.

ಕೆಲದಿನಗಳಲ್ಲೇ ಜ್ಯೂನಿಯರ್ ಚಿರುಗೆ ನಾಮಕರಣ ನಡೆಯಲಿದ್ದು, ದಿನಾಂಕವನ್ನು ಘೋಷಿಸಲು ಮೇಘನಾ ಸಿದ್ಧತೆ ನಡೆಸಿದ್ದಾರೆ. ಈ ಮಧ್ಯೆ ಮೇಘನಾ ರಾಜ್ ಇನ್ಸ್ಟಾಗ್ರಾಂ  1 ಮಿಲಿಯನ್ ಪಾಲೋವರ್ಸ್ ಪಡೆದುಕೊಂಡಿರೋದು ಖುಷಿಗೆ ಕಾರಣವಾಗಿದೆ.

Comments are closed.