ಥಿಯೇಟರ್ ಗೆ ಪ್ರೇಕ್ಷಕರಿಗೆ ಅವಕಾಶ ಕೊಡದೆ ಇರೋದರ ಹಿಂದೆ ಅಂಬಾನಿ ಕೈವಾಡ…?! ಗುಡುಗಿದ ದಚ್ಚು..!

ಕೊರೋನಾ ಎಫೆಕ್ಟ್ ನಡುವೆ ಎಲ್ಲವೂ ಸಹಜ ಜೀವನಕ್ಕೆ ಬರುತ್ತಿದ್ದರೂ ಥಿಯೇಟರ್ ಗಳಿಗೆ 100 ಕ್ಕೆ 100 ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಈ ನಿರ್ಧಾರದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಡಿದೆದ್ದಿದ್ದು, ಇದು ಅಂಬಾನಿ ಬೆಳೆಸುವ ತಂತ್ರ ಎಂದು ಕಿಡಿಕಾರಿದ್ದಾರೆ.

ಅಂಬಾನಿ 5 ಜಿ ನೆಟ್ವರ್ಕ್ ತರುತ್ತಿದ್ದಾರೆ. ಹೀಗಾಗಿ ಅಂಬಾನಿಯವರನ್ನು ಬೆಳೆಸುವ ಉದ್ದೇಶದಿಂದ ಥಿಯೇಟರ್ ಗಳಿಗೆ 100 ಕ್ಕೆ 100 ಜನರ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಇದು ದೊಡ್ಡ ಸ್ಕ್ಯಾಮ್. ಇದನ್ನು ನಾವು ವಿರೋಧಿಸುತ್ತೇವೆ. ಆದರೆ ಯಾವುದೇ ಕಾರಣಕ್ಕೂ ನಮ್ಮ ಚಿತ್ರಗಳನ್ನು ಓಓಟಿಯಲ್ಲಿ ರಿಲೀಸ್ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಅಂಬಾನಿಯವರಿಗೆ ಜನರು ಮೊಬೈಲ್ ನಲ್ಲಿ ಫಿಲ್ಮಂ ನೋಡಿದ್ರೆ ಮಾತ್ರ ಲಾಭ. ಹೀಗಾಗಿ ಥಿಯೇಟರ್ ಗಳನ್ನು ಹಾಳು ಮಾಡುವ ಯತ್ನ ನಡೆದಿದೆ.

ಆದರೆ ನಾವು ಶೇಕಡಾ 50 ಅಲ್ಲ 25 ರಷ್ಟು ಜನರಿಗೆ ಪ್ರವೇಶಾವಕಾಶ ಕೊಟ್ರೂ ನಾವು ಥೀಯೇಟರ್ ನಲ್ಲೇ ಫಿಲ್ಮಂ ಬಿಡುಗಡೆ ಮಾಡೋದು ಎಂದು ಗುಡುಗಿದ್ದಾರೆ.


 ಶಾಲಾ-ಕಾಲೇಜು,ಮಾರುಕಟ್ಟೆ ಎಲ್ಲ ತೆರೆಯಲಾಗಿದೆ. ಆದರೆ ಸಿನಿಮಾ ಮಂದಿರಕ್ಕೆ ಮಾತ್ರ ನಿರ್ಬಂಧ ಹೇರಲಾಗಿದೆ. ಇದರ ಹಿಂದೆ ಅಂಬಾನಿಯಂತ ದೊಡ್ಡವರ ಕೈವಾಡ ಇದೆ ಎನ್ನಿಸುತ್ತಿದೆ. ಓಓಟಿಯಲ್ಲಿ ಸಿನಿಮಾ ರಿಲೀಸ್ ಮಾಡಿದ್ರೇ ಅವರಿಗೆ ಲಾಭವಿದೆ. ಹೀಗಾಗಿ ಈ ರೀತಿ ವರ್ತಿಸುತ್ತಿದ್ದಾರೆ.

ಏನೇ ಆದ್ರೂ ನಾವು ಥಿಯೇಟರ್ ನಲ್ಲೇ ಸಿನಿಮಾ ರಿಲೀಸ್ ಮಾಡೋದು ಎಂದಿದ್ದಾರೆ.

Comments are closed.