ಸ್ಯಾಂಡಲ್ ವುಡ್ ಕಿಚ್ಚನಿಗೆ ಜ್ವರ….! ವೀಕೆಂಡ್ ಬಿಗ್ ಬಾಸ್ ಶೋಗೆ ಬರಲ್ಲ ಸುದೀಪ್….!!

ಕಳೆದ ಕೆಲ ತಿಂಗಳುಗಳಿಂದ ಸಿನಿಮಾ ಶೂಟಿಂಗ್, ಪ್ರಮೋಶನ್ ಬಿಗ್ ಬಾಸ್ ಹೀಗೆ ಸಾಲು ಸಾಲು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ನಟ ಸುದೀಪ್ ಅನಾರೋಗ್ಯಕ್ಕಿಡಾಗಿದ್ದಾರೆ. ಜ್ವರದಿಂದ ಬಳಲುತ್ತಿರುವ ಸುದೀಪ್ ಗೆ ವೈದ್ಯರು ಕೆಲದಿನಗಳ ವಿಶ್ರಾಂತಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವೀಕೆಂಡ್ ಬಿಗ್ ಬಾಸ್ ಮನೆಗೂ ವಾರದ ಕತೆಗೂ ಸುದೀಪ್ ಗೈರಾಗಲಿದ್ದಾರೆ.

ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಕಳೆದ ಕೆಲ ತಿಂಗಳಿನಿಂದ ಸಖತ್ ಬ್ಯುಸಿಯಾಗಿದ್ದರು. ಅದರ ಪರಿಣಾಮವೆಂಬಂತೆ ಸುದೀಪ್ ಮೈಕೈನೋವು,ಜ್ವರದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಸುದೀಪ್ ಜ್ವರವಿದೆ.

ಈ ಬಗ್ಗೆ ಸ್ವತಃ ನಟ ಸುದೀಪ್ ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದು, ಆರೋಗ್ಯ ಸರಿಇಲ್ಲ. ವಾರಾಂತ್ಯದ ವೇಳೆಗೆ ಚೇತರಿಸಿಕೊಳ್ಳುವ ವಿಶ್ವಾಸವಿತ್ತು. ಆದರೆ ವೈದ್ಯರು ಇನ್ನೊಂದಿಷ್ಟುಗಳ ವಿಶ್ರಾಂತಿ ಅಗತ್ಯವೆಂದು ಸೂಚಿಸಿದ್ದಾರೆ. ಹೀಗಾಗಿ ಈ ವಾರದ ಬಿಗ್ ಬಾಸ್ ಮನೆಯನ್ನು ನಾನು ಮಿಸ್ ಮಾಡಿಕೊಳ್ಳಲಿದ್ದೇನೆ ಎಂದಿದ್ದಾರೆ.

ಅಲ್ಲಿಗೆ ಈ ವಾರದ ಬಿಗ್ ಬಾಸ್ ವಿಕೇಂಡ್ ಶೋನಿಂದ ಸುದೀಪ್ ದೂರ ಉಳಿಯೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ  ಈವಾರದ ಬಿಗ್ ಬಾಸ್ ವಿಕೆಂಡ್ ಶೋಗೆ ಕ್ರಿಯೇಟಿವ್ ಟೀಂ ಏನು ಪ್ಲ್ಯಾನ್ ಮಾಡಲಿದೆ ಎಂಬುದನ್ನು ತಿಳಿದುಕೊಳ್ಳಲು ನನಗೆ ಕುತೂಹಲವಾಗುತ್ತಿದೆ ಎಂದು ಸುದೀಪ್ ಹೇಳಿದ್ದಾರೆ.

ಸುದೀಪ್ ಗೆ ಕೊರೋನಾ ಪಾಸಿಟಿವ್ ಎಂಬ ಸುದ್ದಿಯೂ ಹರಿದಾಡುತ್ತಿದೆ. ಆದರೆ ಇದಕ್ಕೆ ಸುದೀಪ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಒಟ್ಟಿನಲ್ಲಿ ಬಿಗ್ ಬಾಸ್ ಶೋದಿಂದ ಸುದೀಪ್ ಒಂದು ವಾರದ ಮಟ್ಟಿಗೆ  ದೂರ ಉಳಿದಿದ್ದು, ಬೇಗ ಜ್ವರದಿಂದ ಚೇತರಿಸಿಕೊಳ್ಳಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

Comments are closed.