Kotigobba-3: ತೆಲುಗಿಗೂ ಬರ್ತವ್ಳೇ ಪಟಾಕಿ ಪೋರಿ…! ಟಾಲಿವುಡ್ ನಲ್ಲಿ ಮೋಡಿ ಮಾಡಲಿದ್ದಾರೆ ಸುದೀಪ್…!!

ಈಗಾಗಲೇ ಹಲವು ಭಾಷೆಗಳಲ್ಲಿ ಮೋಡಿ ಮಾಡಿರೋ ನಟ ಸುದೀಪ್ ಮತ್ತೊಮ್ಮೆ ಟಾಲಿವುಡ್ ಗೆ ಭರ್ಜರಿ ಎಂಟ್ರಿಕೊಡಲು ಸಿದ್ಧವಾಗ್ತಿದ್ದಾರೆ. ಸುದೀಪ್ ಕೋಟಿಗೊಬ್ಬ3 ಹಿಟ್ ಸಾಂಗ್ ಪಟಾಕಿ ಪೋರಿ ಜೊತೆ ತೆಲುಗು ಪ್ರೇಕ್ಷರನ್ನು ರಂಜಿಸಲು ಸಜ್ಜಾಗಿದೆ.

ಕಿಚ್ಚ ಸುದೀಪ್ ಅಭಿನಯದ ಬಹುನೀರಿಕ್ಷಿತ ಸಿನಿಮಾ ಕೋಟಿಗೊಬ್ಬ-3 ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಈಗ ಕನ್ನಡದ ಜೊತೆ ತೆಲುಗಿನಲ್ಲೂ ಪ್ರದರ್ಶನ ಕಾಣಲು ಸಿದ್ಧವಾಗಿದೆ. ಕನ್ನಡದಲ್ಲಿ ಅದ್ದೂರಿ ಪೋಸ್ಟರ್, ಟೀಸರ್ ಮೂಲಕ ಮೋಡಿ ಮಾಡಿದ ಕೋಟಿಗೊಬ್ಬ-3 ತೆಲುಗಿನಲ್ಲಿ ತೆರೆಗೆ ಬರಲಿದೆ.

ಕೋಟಿಕೊಕ್ಕುಡು ಹೆಸರಿನಲ್ಲಿ ಕೋಟಿಗೊಬ್ಬ ತೆಲುಗಿನಲ್ಲಿ ಸಿನಿಮಾ ಪ್ರದರ್ಶನಕ್ಕೆ ಸಿದ್ಧವಾಗುತ್ತಿದೆ. ಮೊದಲ ಹಂತವಾಗಿ ಅಗಸ್ಟ್ 9 ರಂದು ಪಟಾಕಿ ಪೋರಿ ಸಿನಿಮಾ ತೆಲುಗು ವರ್ಸನ್ ರಿಲೀಸ್ ಆಗಲಿದೆ.

ಕನ್ನಡದಲ್ಲಿ ಶಿವಕಾರ್ತಿಕ್ ನಿರ್ಮಿಸುತ್ತಿರುವ ಈ ಸಿನಿಮಾಗೆ ಸೂರಪ್ಪಬಾಬು ಬಂಡವಾಳ ಹೂಡಿದ್ದಾರೆ. ಕೋಟಿಗೊಬ್ಬ-3 ಈಗಾಗಲೇ ತೆರೆ ಕಾಣಬೇಕಾಗಿದ್ದ ಸಿನಿಮಾ ಆಗಿದ್ದರೂ ಕರೋನಾ ಕರಿನೆರಳು ಸಿನಿಮಾ ರಿಲೀಸ್ ವಿಳಂಬಗೊಳಿಸಿದೆ. ಈ ವರ್ಷದ ಗೌರಿಗಣೇಶ ಹಬ್ಬದ ವೇಳೆ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

Comments are closed.