Minister Portfolio : ಕೊನೆಗೂ ಸಚಿವರಿಗೆ ಖಾತೆ ಹಂಚಿಕೆ : ಯಾವ ಸಚಿವರಿಗೆ ಯಾವ ಖಾತೆ ..?

ಬೆಂಗಳೂರು : ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ನೂತನ ಸಂಪುಟ ಜಾರಿಗೆ ಬಂದಿದೆ. ಇದರ ಬೆನ್ನಲ್ಲೇ ಇದೀಗ ನೂತನ ಸಚಿವರಿಗೆ ಖಾತೆಯನ್ನು ಹಂಚಿಕೆ ಮಾಡಲಾಗಿದ್ದು, ಹೊಸ ಸಚಿವರಿಗೆ ಜಾಕ್‌ಪಾಟ್‌ ಹೊಡೆದಿದೆ.

ರಾಜ್ಯದ 29 ಮಂದಿ ಸಚಿವರ ಪೈಕಿ ಹಲವು ಸಚಿವರಿಗೆ ಈ ಹಿಂದಿನ ಖಾತೆಯನ್ನೇ ಮುಂದುವರಿಸಲಾಗಿದೆ. ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಹಣಕಾಸು, ಸಂಸದೀಯ ವ್ಯವಹಾರ, ಬೆಂಗಳೂರು ಅಭಿವೃದ್ದಿ ಖಾತೆಯನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಕೆ.ಎಸ್.ಈಶ್ವರಪ್ಪ ( ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್), ಆರ್. ಅಶೋಕ್ (ಕಂದಾಯ),  ಬಿ.ಶ್ರೀರಾಮುಲು ( ಸಾರಿಗೆ), ವಿ.ಸೋಮಣ್ಣ ( ವಸತಿ), ಬಿ.ಸಿ.ಪಾಟೀಲ್ (ಕೃಷಿ), ಎಸ್.ಟಿ.ಸೋಮಶೇಖರ್ (ಸಹಕಾರ), ಡಾ.ಕೆ.ಸುಧಾಕರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ), ಡಾ.ಸಿ.ಎನ್.ಅಶ್ವತ್‌ ನಾರಾಯಣ ( ಉನ್ನತ ಶಿಕ್ಷಣ ಮತ್ತು ಐಟಿಬಿಟಿ), ಕೆ. ಗೋಪಾಲಯ್ಯ (ಅಬಕಾರಿ), ಉಮೇಶ್ ಕತ್ತಿ (ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ), ಎಸ್. ಅಂಗಾರ (ಮೀನುಗಾರಿಕೆ), ಸುನಿಲ್ ಕುಮಾರ್ ( ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ), ಮರುಗೇಶ್ ನಿರಾಣಿ (ಬೃಹತ್ ಮತ್ತು ಮಧ್ಯಮ ಕೈಗಾರಿಕೆ ), ಶಿವರಾಮ್ ಹೆಬ್ಬಾರ್ (ಕಾರ್ಮಿಕ ಇಲಾಖೆ), ಗೋವಿಂದ ಕಾರಜೋಳ (ಜಲಸಂಪನ್ಮೂಲ ಖಾತೆ), ಕೋಟ ಶ್ರೀನಿವಾಸ ಪೂಜಾರಿ ( ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ, ಕೆ.ಸಿ. ನಾರಾಯಣಗೌಡ ( ಕ್ರೀಡೆ), ಎಂಟಿಬಿ ನಾಗರಾಜ್ ( ಪೌರಡಾಡಳಿ ಮತ್ತು ಸಣ್ಣ ಕೈಗಾರಿಗೆ), ಅರಗ ಜ್ಞಾನೇಂದ್ರ (ಗೃಹ ಇಲಾಖೆ), ಪ್ರಭು ಚೌಹಾಣ್ ( ಪಶುಸಂಗೋಪನೆ) ಹಂಚಿಕೆ ಮಾಡಲಾಗಿದೆ.

ಎಸ್‌.ಟಿ.ಸೋಮಶೇಖರ್‌ ( ಸಹಕಾರ), ಶಶಿಕಲಾ ಜೊಲ್ಲೆ ( ಮುಜರಾಯಿ ಹಾಗೂ ಹಜ್‌ ಮತ್ತು ವಕ್ಫ್‌ ಖಾತೆ), ಬಿ.ಸಿ.ನಾಗೇಶ್‌ ( ಶಿಕ್ಷಣ), ಶಿವರಾಮ್ ಹೆಬ್ಬಾರ್ (ಕಾರ್ಮಿಕ), ಮುನಿರತ್ನ (ತೋಟಗಾರಿಕೆ), ಭೈರತಿ ಬಸವರಾಜ್ ( ನಗರಾಭಿವೃದ್ದಿ), ಹಾಲಪ್ಪ ಆಚಾರ್ (ಗಣಿ  ಮತ್ತು ಭೂ ವಿಜ್ಞಾನ), ಸಿಸಿ. ಪಾಟೀಲ್ (ಲೋಕಪಯೋಗಿ), ಜೆ.ಸಿ.ಮಾಧುಸ್ವಾಮಿ ( ಸಣ್ಣ ನೀರಾವರಿ), ಶಂಕರ ಪಾಟೀಲ್‌ ಮುನೇನಕೊಪ್ಪ (ಜವಳಿ ಖಾತೆ), ಆನಂದ್ ಸಿಂಗ್ ( ಪರಿಸರ) ಖಾತೆಯನ್ನು ನೀಡಲಾಗಿದೆ.

ಇದನ್ನೂ ಓದಿ : ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾದ ಖಡಕ್ ಖಾಕಿ…! ಅಣ್ಣಾಮಲೈ ಹಾದಿ ಹಿಡಿದ್ರಾ ಐಪಿಎಸ್ ರವಿ.ಡಿ.ಚನ್ನಣ್ಣನವರ್…!!

ರಾಜಕೀಯಕ್ಕೆ ಗುಡ್‌ಬೈ ಹೇಳಿದ ಬಿಜೆಪಿ ಸಂಸದ : ಹುಟ್ಟುಹಬ್ಬಕ್ಕೆ ನಿವೃತ್ತಿ ಘೋಷಿಸಿದ ಶ್ರೀನಿವಾಸ ಪ್ರಸಾದ್‌

(Karnataka Minister Portfolio new ministers like Araga Jnanendra, Sunil Kumar, halappa achar mister post )

Comments are closed.