ನಟನೆಯ ಜೊತೆಗೆ ಗಾಯನಕ್ಕೂ ಸೈ…! ಪತಿಗಾಗಿ ಮೇಘನಾ ರಾಜ್ ಹಾಡಿದ ಹಾಡು ಯಾವುದು ಗೊತ್ತಾ..?!

ಚಿರು ಹಾಗೂ ಸಿಂಪಲ್ ಸುಂದರಿ ಮೇಘನಾ ರಾಜ್ ಅವರದ್ದು ಪ್ರೇಮ ವಿವಾಹ. ಶಾಲಾ ದಿನಗಳಲ್ಲೇ ಪ್ರೀತಿಸಿದ್ದ  ಜೋಡಿ ಹೆತ್ತವರ ಒಪ್ಪಿಗೆ ಪಡೆದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಪತಿಯನ್ನು ತುಂಬ ಪ್ರೀತಿಸುತ್ತಿದ್ದ ಮೇಘನಾರಾಜ್ ಚಿರುಗಾಗಿ ಮತ್ತೆ ಹಿನ್ನೆಲೆ ಗಾಯನವನ್ನು ಆರಂಭಿಸಿದ್ದರು.

ನಟಿ ಮೇಘನಾ ರಾಜ್  ಕೇವಲ ನಟಿ ಮಾತ್ರವಲ್ಲ ಗಾಯಕಿ ಕೂಡ ಹೌದು. 2014 ರಲ್ಲಿ  ಮಲೆಯಾಳಂನ 100 ಡಿಗ್ರಿ ಸೆಲ್ಸಿಯಸ್ ಸಿನಿಮಾದಲ್ಲಿ ಮೊದಲ ಬಾರಿಗೆ ಹಿನ್ನೆಲೆಗಾಯಕಿಯಾಗಿದ್ದ ಮೇಘನಾ ರಾಜ್ ಆ ಬಳಿಕ ಪೂರ್ಣ ಪ್ರಮಾಣದಲ್ಲಿ ನಟಿಯಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಬಳಿಕ ಸ್ಯಾಂಡಲ್ ವುಡ್ ನಲ್ಲಿ ಶ್ರೀಗರ ಕಿಟ್ಟಿ ಅಭಿನಯದ ಬಹುಪರಾಕ್ ಚಿತ್ರದಲ್ಲೂ ಒಂದು ಹಾಡು ಹಾಡಿದ್ದರು. ಆದರೆ ಬಹುತೇಕ ಮರೆತೇ ಬಿಟ್ಟಿದ್ದ ಪತ್ನಿಯ ಗಾಯನ ಕಲೆಯನ್ನು ಮತ್ತೆ ಬೆಳಕಿಗೆ ತಂದಿದ್ದು ಚಿರು ಸರ್ಜಾ. ಹೌದು ಚಿರಂಜೀವಿ ಸರ್ಜಾ ಹಿಟ್ ಚಿತ್ರ ಸಿಂಗಾದಲ್ಲಿ ಮೇಘನಾ ರಾಜ್ ಪತಿಯ ಟಪ್ಪಾಂಗುಚ್ಚಿ ಹಾಡಿಗೆ ಧ್ವನಿಯಾಗಿದ್ದರು.

ಸಿಂಗಾ ಚಿತ್ರದಲ್ಲಿ ಚಿರು ಹಾಗೂ ಅದಿತಿ ನಟನೆಯ ವಾಟ್ ಎ ಬ್ಯೂಟಿಫುಲ್ ಹೌದಾ ಶಿವ ಶಿವ ಎಂಬ ಹಾಡಿಗೆ ಮೇಘನಾ ರಾಜ್ ಗಾಯಕ ನವೀನ್ ಸಜ್ಜು ಜೊತೆ ಧ್ವನಿಗೂಡಿಸಿದ್ದರು. ಪತಿಯ ಚಿತ್ರಕ್ಕೆ ಹಾಡೋದೆ ಒಂದು ವಿಶಿಷ್ಟ ಅನುಭವ ಅಂತಾನೂ ಹೇಳಿಕೊಂಡಿದ್ದರು. ಇಷ್ಟೇ ಅಲ್ಲ ಚಿರು ಅಭಿನಯದ ಶಿವಾರ್ಜುನ್ ದಲ್ಲೂ ಮೇಘನಾ ಹಾಡೋ ಮೂಲಕ ಪತಿಯ ಬಹುನೀರಿಕ್ಷಿತ ಚಿತ್ರದ ಬೆಂಬಲಕ್ಕೆ ನಿಂತಿದ್ದರು.

ಶಿವಾರ್ಜುನ್ ಚಿತ್ರದ ಅಲ್ಲೊಂದು ನೀಲಿ ಬಾನು… ಎಂಬ ರೋಮ್ಯಾಂಟಿಕ್ ಹಾಡಿಗೆ ಮೇಘನಾ ರಾಜ್ ಅವರಿಗೆ ಸಂಚಿತ್ ಹೆಗಡೆ ಜೊತೆ ಧ್ವನಿಯಾಗಿದ್ದರು. ಈ ಹಾಡು ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಆದರೆ ಚಿತ್ರ ರಿಲೀಸ್ ಆದ ಕೆಲವೇ ದಿನದಲ್ಲಿ ಲಾಕ್ ಡೌನ್ ಜಾರಿಯಾಗಿದ್ದರಿಂದ ಚಿತ್ರದ ಪ್ರದರ್ಶನ ಸಾಧ್ಯವಾಗಿರಲಿಲ್ಲ.

ಮತ್ತೊಮ್ಮೆ ಪ್ರದರ್ಶನ ಆರಂಭವಾಗೋವಾಗ  ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿದ್ದಾರೆ. ಚಿರುಗೆ ತಮ್ಮ ಚಿತ್ರದಲ್ಲಿ ಪತ್ನಿ ಹಿನ್ನೆಲೆ ಗಾಯಕಿಯಾಗಬೇಕು ಅನ್ನೋ ಆಸೆ ಇತ್ತಂತೆ. ಹೀಗಾಗಿ ಮೇಘನಾರನ್ನು ಕನ್ವಿನ್ಸ್ ಮಾಡಿ ಎರಡು ಚಿತ್ರಕ್ಕೂ ಒಂದೊಂದು ಹಾಡು ಹೇಳಿಸಿದ್ದರು.

ಆದರೆ ಇಬ್ಬರೂ ಸೇರಿ ಒಂದು ಚಿತ್ರ ಮಾಡಬೇಕು ಅನ್ನೋ ಕನಸು ಮಾತ್ರ ಕನಸಾಗಿಯೇ ಉಳಿದಿದ್ದು ಆ ಬೇಸರ ಎಂದೂ ಕಾಡುತ್ತೆ ಅಂತಾರೆ ಮೇಘನಾ ಸರ್ಜಾ…!

Comments are closed.