ಭಾರತ ಸೇರಿ 20 ದೇಶಗಳ ಪ್ರಯಾಣಕ್ಕೆ ನಿಷೇಧ ಹೇರಿದ ಸೌದಿ ಅರೇಬಿಯಾ

  • ಅನಿತಾ ಬ್ರಹ್ಮಾವರ (ಯುಎಇ ಪ್ರತಿನಿಧಿ)

ರಿಯಾದ್ : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಭಾರತ ಸೇರಿದಂತೆ ಒಟ್ಟು 20ಕ್ಕೂ ಅಧಿಕ ದೇಶಗಳ ನಡುವಿನ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದ್ದು, ಈ ದೇಶಗಳ ಜನರಿಗೆ ಸೌದಿ ಅರೇಬಿಯಾ ಪ್ರವೇಶಕ್ಕೆ ನಿಷೇಧ ಹೇರಿದೆ.

ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಕುರಿತು ಅಧಿಕೃತ ಮಾಹಿತಿಯನ್ನು ತನ್ನ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಭಾರತ, ಅರ್ಜೆಂಟೀನಾ, ಯುನೈಟೆಡ್ ಅರಬ್ ಎಮಿರೇಟ್ಸ್, ಜರ್ಮನಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಇಂಡೋನೇಷ್ಯಾ, ಐರ್ಲೆಂಡ್, ಇಟಲಿ, ಪಾಕಿಸ್ತಾನ, ಬ್ರೆಜಿಲ್, ಪೋರ್ಚುಗಲ್, ಯುನೈಟೆಡ್ ಕಿಂಗ್‌ಡಮ್, ಟರ್ಕಿ, ದಕ್ಷಿಣ ಆಫ್ರಿಕಾ, ಸ್ವೀಡನ್, ಸ್ವಿಟ್ಜರ್ಲೆಂಡ್, ಫ್ರಾನ್ಸ್, ಲೆಬನಾನ್ ದೇಶಗಳ ಪ್ರಯಾಣವನ್ನು ಸೌದಿ ಅರೇಬಿಯಾ ನಿರ್ಬಂಧಿಸಿದೆ. , ಈಜಿಪ್ಟ್ ಮತ್ತು ಜಪಾನ್ ದೇಶಗಳ ಪ್ರಯಾಣಿಕರಿಗೆ ನಿರ್ಬಂಧ ಹೇರಲಾಗಿದೆ.

ಸೌದಿ ಅರೇಬಿಯಾದಲ್ಲಿ ಕರೋನಾ ವೈರಸ್ ಸೋಂಕಿತರ ಸಂಖ್ಯೆ 371,356 ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 6,415 ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಹೇಳಿದೆ.
ಸೌದಿ ಅರೇಬಿಯಾ ಇದೀಗ ತಾತ್ಕಾಲಿಕವಾಗಿ ನಿಷೇಧವನ್ನು ಹೇರಿದ್ದು, ಕೊರೋನಾ ಸೋಂಕು ಏರಿಕೆಯಾದ್ರೆ ನಿರ್ಬಂಧವನ್ನು ಇನ್ನಷ್ಟು ಅವಧಿಯವರೆಗೆ ವಿಸ್ತರಣೆ ಮಾಡುವ ಸಾಧ್ಯತೆಯಿದೆ.

Comments are closed.