ಸಪ್ಟೆಂಬರ್ ವರೆಗೂ ಶಾಲೆ, ಕಾಲೇಜುಗಳಿಗೆ ರಜೆ ! ಯುಜಿಸಿ ಸಮಿತಿಯ ಶಿಫಾರಸ್ಸುಗಳೇನು ಗೊತ್ತಾ ?

0

ನವದೆಹಲಿ : ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಕೊರೊನಾ ತಡೆಗೆ ಲಾಕ್ ಡೌನ್ ಆದೇಶ ಜಾರಿಯಲ್ಲಿರೋ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ. ಅದ್ರಲ್ಲೂ ಇನ್ನೂ ಮೂರು ತಿಂಗಳ ಕಾಲ ಶೈಕ್ಷಣಿಕ ಚುಟವಟಿಕೆ ಆರಂಭವಾಗೋದು ಅನುಮಾನ. ಹೀಗಾಗಿಯೇ ಸಪ್ಟೆಂಬರ್ ವರೆಗೂ ಕಾಲೇಜುಗಳನ್ನು ತೆರೆಯದಂತೆ ಯುಜಿಸಿ (ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ) ಶಿಫಾರಸ್ಸು ಮಾಡಿದೆ.

ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿ ( ಇಂಗ್ಲಿಷ್), ಎಸ್ಎಸ್ಎಲ್ ಸಿ, ಪದವಿ ಪರೀಕ್ಷೆ ಹಾಗೂ ವೃತ್ತಿಪರ ಕೋರ್ಸುಗಳ ಪ್ರವೇಶ ಪರೀಕ್ಷೆಗಳು ನಡೆದಿಲ್ಲ. ಶೈಕ್ಷಣಿಕ ಸಂಸ್ಥೆಗಳು ಸಂಪೂರ್ಣವಾಗಿ ಬಂದ್ ಆಗಿವೆ. ಶಾಲಾ, ಕಾಲೇಜುಗಳಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕೂಡ ಕಷ್ಟದ ಕೆಲಸ. ಈ ನಡುವಲ್ಲೇ ಪರೀಕ್ಷೆಗಳು ಯಾವಾಗ ನಡೆಯುತ್ತೇ ಅನ್ನೋ ಚಿಂತೆ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಕಾಡುತ್ತಿದೆ.

ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ತರಗತಿಗಳು ಅರ್ಧಕ್ಕೆ ನಿಂತಿವೆ. ಅಲ್ಲದೇ ಪರೀಕ್ಷೆಗಳ ಬಗ್ಗೆ ದಿನಕ್ಕೊಂದು ಗೊಂದಲದ ಹೇಳಿಕೆಗಳು ಹೊರ ಬೀಳುತ್ತಿವೆ.

ಸಾಲದಕ್ಕೆ ಜುಲೈನಿಂದಲೇ ಪದವಿ ತರಗತಿಗಳನ್ನು ಆರಂಭಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಈ ನಡುವಲ್ಲೇ ಪ್ರಸಕ್ತ ಸಾಲಿನ ಪರೀಕ್ಷೆಗಳನ್ನು ಯಾವಾಗ ನಡೆಸಬೇಕೆನ್ನುವ ಕುರಿತು ಯುಜಿಸಿ ಸಮಿತಿ ಹಲವು ಶಿಫಾರಸ್ಸುಗಳನ್ನು ಮಾಡಿದೆ.

ವಿಶ್ವವಿದ್ಯಾಲಯಗಳ ಪದವಿ ಪರೀಕ್ಷೆ ಹಾಗೂ ಉನ್ನತ ಶಿಕ್ಷಣ ಕೇಂದ್ರಗಳ ತರಗತಿಗಳನ್ನು ಸಪ್ಟೆಂಬರ್ ತಿಂಗಳಿನಿಂದ ಆರಂಭಿಸಬಹುದೆಂದು ಹೇಳಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಬಂದ್ರೆ ಎಸ್ಎಸ್ಎಲ್ ಸಿ, ಪಿಯುಸಿ ಹಾಗೂ ವೃತ್ತಿಪರ ಕೋರ್ಸುಗಳ ಪರೀಕ್ಷೆಗಳನ್ನು ಜುಲೈ ಅಥವಾ ಅಗಸ್ಟ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆಯಿದೆ, ಕೊರೊನಾ ಸಮಸ್ಯೆ ಬಗೆ ಹರಿದ ನಂತರವೇ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವುದು ಸೂಕ್ತವೆನ್ನುವ ಸಲಹೆಯನ್ನು ನೀಡಿದೆ.

ಕೊರೊನಾ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷದ ಮೇಲೆ ಬೀರಬಹುದಾದ ಪರಿಣಾಮ, ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ವರದಿ ನೀಡುವ ಸಲುವಾಗಿ ಸಮಿತಿಯೊಂದನ್ನು ರಚಿಸಿತ್ತು. ಇದೀಗ ಸಮಿತಿ ತನ್ನ ವರದಿಯನ್ನು ನೀಡಿದ್ದು, ಆನ್ಲೈನ್ ತರಗತಿಗಳನ್ನು ನಡೆಸುವ ಕುರಿತು ಹಾಗೂ ಅದಕ್ಕೆ ಬೇಕಾದ ಅಗತ್ಯ ಮೂಲ ಸೌಕರ್ಯಗಳನ್ನು ಕೈಗೊಳ್ಳುವಂತೆಯೂ ಸಮಿತಿ ಸಲಹೆ ನೀಡಿದೆ.

Leave A Reply

Your email address will not be published.