ದೇಶದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದು : ಮೋದಿ ಮನ್ ಕೀ ಬಾತ್

0

ನವದೆಹಲಿ : ಕೊರೊನಾ ವಿರುದ್ದದ ಹೋರಾಟದಲ್ಲಿ ಪ್ರತೀ ಭಾರತೀಯರು ಕೂಡ ಸೈನಿಕರಾಗಿದ್ದಾರೆ. ಕೊರೊನಾ ವಿರುದ್ದದ ಮಹಾಯುದ್ದ ಹೊಸ ಪಾಠ ಕಲಿಸಿದೆ. ದೇಶದ ಯಾರೊಬ್ಬರೂ ಕೂಡ ಹಸಿವಿನಿಂದ ಬಳಲಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ನಮೋ, ಕೊರೊನಾ ವಿರುದ್ದದ ಹೋರಾಟದಲ್ಲಿ ಸಹಕರಿಸುತ್ತಿರುವ 130 ಕೋಟಿ ಭಾರತೀಯರಿಗೆ ನಮಿಸುತ್ತೇನೆ. ಎಲ್ಲರೂ ನಿಯಮಗಳನ್ನು ಪಾಲಿಸುತ್ತಿದ್ದಾರೆ. ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಕೊರೊನಾ ವಿರುದ್ದ ಹೋರಾಟ ನಿರಂತವಾಗಿರುತ್ತದೆ. ಕೊರೊನಾ ವಿರುದ್ದ ಹೋರಾಟ ನಡೆಸುತ್ತಿರುವ ವಾರಿಯರ್ಸ್ ಗೆ ಎಲ್ಲರೂ ಬೆಂಬಲ ನೀಡಬೇಕು. ಕೊರೊನಾ ವಾರಿಯರ್ಸ್ ಗೆ ಸುಗ್ರೀವಾಜ್ಞೆಯ ಮೂಲಕ ಸಂತ್ರಪ್ತಿ ಸಿಕ್ಕಿದ್ದು, ಪೀಡಿಸುವವರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದಿದ್ದಾರೆ.
ದೇಶದ ಜನರ ಅನುಕೂಲಕ್ಕಾಗಿ ಲೈಫ್ ಲೈನ್ ಉಡಾನ್ ಸೇವೆಯನ್ನು ಆರಂಭಿಸಲಾಗಿದೆ. ದೇಶದಲ್ಲಿ ಸುಮಾರು 500 ಟನ್ ಔಷಧವನ್ನು ಪೂರೈಕೆ ಮಾಡಲಾಗಿದೆ.

ಇದಕ್ಕಾಗಿ 3 ಲಕ್ಷ ಕಿ,ಮೀ. ವಾಯು ಪ್ರಯಾಣ, 50 ಕ್ಕೂ ಹೆಚ್ಚು ಮಾರ್ಗಗಳಲ್ಲಿ 100 ರೈಲುಗಳು ಪ್ರಯಾಣ ಬೆಳೆಸಿವೆ. ಇನ್ನು ಬಡವರಿಗಾಗಿ ಮೂರು ತಿಂಗಳ ಕಾಲ ಉಚಿತವಾಗಿ ಗ್ಯಾಸ್ ಸಿಲಿಂಡರ್ ವಿತರಿಸಲಾಗುತ್ತಿದೆ. ಕೊರೊನಾ ವಿರುದ್ದದ ಹೋರಾಟದಲ್ಲಿ ಪ್ರತೀ ವ್ಯಕ್ತಿಯ ಮಹತ್ವವೂ ಅರ್ಥವಾಗುತ್ತಿದೆ.

ಪೊಲೀಸರ ವಿರುದ್ದ ನಕರಾತ್ಮಕ ಭಾವನೆಯಿತ್ತು. ಇದೀಗ ಪೊಲೀಸರು ಬಡವರಿಗೆ ಮಿಡಿಯುತ್ತಿದ್ದು, ಅವರ ಮಾನವೀಯ ಮುಖ ಅನಾವರಣವಾಗುತ್ತಿದೆ. ತುರ್ತು ಸಂದರ್ಭದಲ್ಲಿ ಹಲವರು ಸೇವೆ ಮಾಡುತ್ತಿದ್ದಾರೆ. ಇವರೆಲ್ಲರ ಸೇವಾ ಕಾರ್ಯಗಳು ಮುಂದೆ ದಾಖಲಾಗುತ್ತದೆ ಎಂದಿದ್ದಾರೆ.

ದೇಶದ ಜನತೆಗೆ ಬಸವ ಜಯಂತಿ ಹಾಗೂ ಅಕ್ಷಯ ತೃತೀಯದ ಶುಭಾಶಯಗಳನ್ನು ಕೋರಿದ್ದಾರೆ. ಮನೆಯಲ್ಲಿಯೇ ಎಲ್ಲರೂ ಹಬ್ಬವನ್ನು ಆಚರಿಸಿ, ಯಾರೂ ಮನೆಯಿಂದ ಹೊರಗೆ ಬರಬೇಡಿ. ಎಲ್ಲರೂ ಎದುರಿಸುತ್ತಿರುವ ಸಮಸ್ಯೆ ಕೆಲವೇ ದಿನಗಳಲ್ಲಿ ಕೊನೆಯಾಗಲಿದೆ. ಈ ಸಮಸ್ಯೆ ಸಮಾಪ್ತಿಯಾಗುವ ಕಾಲ ಬಂದಿದೆ. ನಮ್ಮ ಆತ್ಮ ಭಾವ ಅಕ್ಷಯವಾಗಲಿ ಎಂದ ಮೋದಿ. ಕೋವಿಡ್ ಕುರಿತು www.covidwarriors.gov.in ನಿಂದ ಮಾಹಿತಿ ಪಡೆಯಬಹುದಾಗಿದೆ ಎಂದಿದ್ದಾರೆ.

Leave A Reply

Your email address will not be published.