ಕೊರೊನಾ ನಡುವಲ್ಲೇ ನಟಿಯ ಜಾಲಿರೈಡ್ : ಪಿಲ್ಲರ್ ಗೆ ಕಾರು ಢಿಕ್ಕಿ, ನಟಿ ಶರ್ಮಿಳಾ ಮಾಂಡ್ರೆ ಮುಖಕ್ಕೆ ಗಾಯ

0

ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಆದರೆ ಲಾಕ್ ಡೌನ್ ನಡುವಲ್ಲೇ ನಟಿ ಶರ್ಮಿಳಾ ಮಾಂಡ್ರೆ ತನ್ನ ಸ್ನೇಹಿತರ ಜೊತೆಗೆ ಕಾರಿನಲ್ಲಿ ಜಾಲಿರೈಡ್ ಹೋಗಿದ್ದಾರೆ.

ಈ ವೇಳೆಯಲ್ಲಿ ನಿಯಂತ್ರಣ ತಪ್ಪಿ ಕಾರು ಪಿಲ್ಲರ್ ಗೆ ಢಿಕ್ಕಿಯಾಗಿದ್ದು, ನಟಿ ಶರ್ಮಿಳಾ ಮಾಂಡ್ರೆ ಮುಖಕ್ಕೆ ಗಾಯವಾಗಿದೆ.

ಬೆಂಗಳೂರು ನಗರದ ವಸಂತನಗರದ ಅಂಡರ್ ಗ್ರೌಂಡ್ ಪಿಲ್ಲರ್ ಗೆ ಢಿಕ್ಕಿ ಹೊಡೆದಿದ್ದು, ಜಾಗ್ವಾರ್ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.

ಕಾರಿನಲ್ಲಿದ್ದ ಶರ್ಮಿಳಾ ಮಾಂಡ್ರೆಯ ಮುಖಕ್ಕೆ ಗಾಯವಾಗಿದ್ದು, ಕಾರಿನಲ್ಲಿದ್ದ ಆಕೆಯ ಸ್ನೇಹಿತ ಲೋಕೇಶ್ ಗೂ ಗಾಯವಾಗಿದೆ.

ಇಬ್ಬರನ್ನೂ ಕೂಡ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನಲ್ಲಿ ಸುಮಾರು 4 ಮಂದಿ ಇದ್ದರು ಎಂದು ಹೇಳಲಾಗುತ್ತಿದೆ. ಪಿಲ್ಲರ್ ಗೆ ಢಿಕ್ಕಿಯಾಗಿರುವ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.

ಅತೀ ವೇಗದಲ್ಲಿ ಕಾರು ಚಲಾಯಿಸಿದ್ದೇ ಘಟನೆಗೆ ಕಾರಣವೆನ್ನಲಾಗುತ್ತಿದೆ. ಕಾರಿನಲ್ಲಿದ್ದವರು ಮದ್ಯಪಾನ ಸೇವನೆ ಮಾಡಿದ್ದಾರು ಎನ್ನಲಾಗುತ್ತಿದ್ದು, ಸೀಟ್ ಬೆಲ್ಟ್ ಕೂಡ ಹಾಕಿರಲಿಲ್ಲ ಎಂದು ತಿಳಿದುಬಂದಿದೆ. ಘಟನೆಯ ಈ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.