ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಮಂಗಳೂರು : ಕೊರೊನಾ ಸೋಂಕು ಹೆಚ್ಚುತ್ತಿರೊ ಹಿನ್ನೆಲೆಯಲ್ಲಿ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೊನಾ ಪೀಡಿತರಿಗೆ ಹೆಚ್ಚಿನ ವೈದ್ಯಕೀಯ ಸೇವೆಗಳನ್ನು ಒದಗಿಸಲು ಅಗತ್ಯವಿರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಹುದ್ದೆಗಳ ಭರ್ತಿಗೆ ಎಪ್ರಿಲ್ 7 ರಂದು ನೇರ ನೇಮಕಾತಿ ನಡೆಯಲಿದೆ.

ಹುದ್ದೆಗಳ ವಿವರ :
ವೈದ್ಯರು / ತಜ್ಞ ವೈದ್ಯರು : 10 ಹುದ್ದೆ
ಶುಶ್ರೂಷಕರು : 20 ಹುದ್ದೆ
ಪ್ರಯೋಗ ಶಾಲಾ ತಜ್ಞರು : 5 ಹುದ್ದೆ
ಗ್ರೂಫ್ ಡಿ ನೌಕರರು : 10

ವೇತನ :
ವೈದ್ಯರು / ತಜ್ಞ ವೈದ್ಯರು : 60,000 ರೂಪಾಯಿ
ಶುಶ್ರೂಷಕರು : 20,000 ರೂಪಾಯಿ
ಪ್ರಯೋಗ ಶಾಲಾ ತಜ್ಞರು : 15,000 ರೂಪಾಯಿ
ಗ್ರೂಫ್ ಡಿ : 12,000 ರೂಪಾಯಿ

ವಿದ್ಯಾರ್ಹತೆ
ವೈದ್ಯರು / ತಜ್ಞ ವೈದ್ಯರು : ಎಂಬಿಬಿಎಸ್ ( ಸರಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಪದವಿ )
ಶುಶ್ರೂಷಕರು : ಜಿಎನ್ ಎಂ/ಬಿಎಸ್ಸಿ ನರ್ಸಿಂಗ್ ( ಕರ್ನಾಟಕ ಸರಕಾರದಿಂದ ನೋಂದಾಯಿತ ಸಂಸ್ಥೆಗಳಿಂದ ಪದವಿ ನರ್ಸಿಂಗ್ ಪದವಿ ಪಡೆದಿರಬೇಕು )
ಪ್ರಯೋಗ ಶಾಲಾ ತಜ್ಞರು : ಕರ್ನಾಟಕ ಅರೆ ವೈದ್ಯಕೀಯ ಮಂಡಳಿಯಿಂದ 2 ಅಥವಾ 3 ವರ್ಷಗಳ ಕಿ.ವೈ.ಪ್ರ.ಶಾ. ತಂತ್ರಜ್ಞರ ತರಬೇತಿ (ಡಿಎಲ್ಎಂಟಿ) ಪ್ರಮಾಣಪತ್ರ ಹೊಂದಿರಬೇಕು.
ಗ್ರೂಫ್ ಡಿ : ಎಸ್ಎಸ್ಎಲ್ ಸಿ ತೇರ್ಗಡೆಯಾಗಿರಬೇಕು.

ಆಯ್ಕೆ ವಿಧಾನ :

ಮೇಲ್ಕಂಡ ಹುದ್ದೆಗಳಿಗೆ ಎಪ್ರಿಲ್ 7 ರಂದು ಬೆಳಿಗ್ಗೆ 10 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ.

ಅರ್ಹ ಅಭ್ಯರ್ಥಿಗಳು ಅರ್ಜಿಯೊಂದಿಗೆ ನೇರಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ವಿದ್ಯಾರ್ಹತೆಗೆ ಸಂಬಂಧಿಸಿದದ ಎಲ್ಲಾ ಅಂಕಪಟ್ಟಿಗೆ ಮೂಲ ಪ್ರತಿಗಳನ್ನು ಅರ್ಜಿಯೊಂದಿಗೆ ಸಂದರ್ಶನಕ್ಕೆ ಬರುವಾಗ ತರಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಅಥವಾ 0824-2423672 ನ್ನು ಸಂಪರ್ಕಿಸಬಹುದಾಗಿದೆ.

Leave A Reply

Your email address will not be published.