ಸ್ಯಾಂಡಲ್ವುಡ್ ಗೆ ಸಹಜ ಸುಂದರಿ: ಸಾಯಿಪಲ್ಲವಿ ನಟಿಸೋ ಕನ್ನಡ ಚಿತ್ರ ಯಾವುದು ಗೊತ್ತಾ?!

ಸಹಜ ಸೌಂದರ್ಯದ ಮೂಲಕ ಟಾಲಿವುಡ್ ಮಂದಿಯ ಮನಗೆದ್ದ ನಟಿ ಸಾಯಿಪಲ್ಲವಿ ಸದ್ಯದಲ್ಲೇ ಸ್ಯಾಂಡಲ್ ವುಡ್ ಸಿನಿರಸಿಕರ ಮನಗೆಲ್ಲಲಿದ್ದಾರೆ. ಹೌದು ಚಂದನವನಕ್ಕೆ ಸಾಯಿಪಲ್ಲವಿ ಎಂಟ್ರಿನೀಡಲಿದ್ದು, ಮಂಸೋರೆ ಆಕ್ಷ್ಯನ್ ಕಟ್ ಹೇಳಲು ಸಿದ್ಧವಾಗಿದ್ದಾರೆ.

ಟಾಲಿವುಡ್ ನ ಫೇಮಸ್ ನಟಿ ಸಾಯಿಪಲ್ಲವಿ ತೆಲುಗಿನಲ್ಲಿ ಒಂದಾದ ಮೇಲೊಂದು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ನಾಗಚೈತನ್ಯ ಜೊತೆ ನಟಿಸಿದ ಲವ್ ಸ್ಟೋರಿ ಸಿನಿಮಾ ಸಪ್ಟೆಂಬರ್ 10 ರಂದು ತೆರೆಗೆ ಬರಲಿದ್ದು, ಇದರ ಮಧ್ಯೆ ಹಲವು ತೆಲುಗು ಸಿನಿಮಾದಲ್ಲಿ ನಟಿಸಲು ಸಾಯಿಪಲ್ಲವಿ ಒಪ್ಪಿಕೊಂಡಿದ್ದಾರೆ.

ಈ ಮಧ್ಯೆ ಸ್ಯಾಂಡಲ್ ವುಡ್ ಸಾಯಿಪಲ್ಲವಿ ಕರೆತರಲು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಸಿದ್ಧವಾಗಿದ್ದು, ಈಗಾಗಲೇ ಒಂದು ರೌಂಡ್ ಸಾಯಿಪಲ್ಲವಿಯವರ ಜೊತೆ ಮಾತನಾಡಿದ್ದಾರಂತೆ. ಸಾಯಿಪಲ್ಲವಿ ಚಿತ್ರಕ್ಕೆ ಯೆಸ್ ಎಂದಿದ್ದು, ಅಂತಿಕ ಸ್ಕ್ರಿಪ್ಟ್ ಕಳುಹಿಸಲು ಕೊಡಲು ಹೇಳಿದ್ದಾರಂತೆ.

ಪೊಲಿಟಿಕಲ್ ಥ್ರಿಲ್ಲರ್ ಕತೆ ಹೊಂದಿರುವ  ಈ ಸಿನಿಮಾದ ಮೂಲಕ ಸಹಜ ಸುಂದರಿ ಸಾಯಿಪಲ್ಲವಿ ಸ್ಯಾಂಡಲ್ ವುಡ್ ಎಂಟ್ರಿ ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದಕ್ಕಾಗಿ ಮಂಸೋರೆ ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ.

1978 ಸಿನಿಮಾದ ಮೂಲಕ ಹೆಚ್ಚು ಪ್ರಸಿದ್ಧಿಗೆ ಬಂದ ನಿರ್ದೇಶಕ ಮಂಸೋರೆ, ನಾತಿಚರಾಮಿ, ಹರಿವು ಸೇರಿದಂತೆ ಹಲವು ವಿಭಿನ್ನ ಸಿನಿಮಾ ನೀಡಿದ್ದಾರೆ.

ತಮ್ಮ ಮದುವೆಗಾಗಿ ಸಿನಿಮಾ ಕೆಲಸಗಳಿಂದ ಪುಟ್ಟ ಬ್ರೇಕ್ ಪಡೆದುಕೊಂಡಿದ್ದ ಮಂಸೋರೆ ಈಗ ಮತ್ತೆ ಸಾಯಿಪಲ್ಲವಿ ಜೊತೆ ಸ್ಯಾಂಡಲ್ ವುಡ್ ಗೆ ಮರಳುತ್ತಿದ್ದಾರೆ.

Comments are closed.