ಕ್ಲಿನಿಕ್, ಖಾಸಗಿ ಆಸ್ಪತ್ರೆ ಮುಚ್ಚಿದ್ರೆ ಲೈಸೆನ್ಸ್ ರದ್ದು : ಉಡುಪಿ ಡಿಸಿ ವಾರ್ನಿಂಗ್

0

ಉಡುಪಿ : ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವೈದ್ಯರು ಬಂದ್ ಮಾಡಿರುವ ತಮ್ಮ ಕ್ಲಿನಿಕ್ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಕೂಡಲೇ ಓಪನ್ ಮಾಡಬೇಕು. ಕಾನೂನು ಪಾಲನೆ ಮಾಡದೇ ಇದ್ರೆ ಅಂತವರ ಲೈಸೆನ್ಸ್ ಗಳನ್ನು ರದ್ದು ಮಾಡುವುದಾಗಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಕೆಯನ್ನು ನೀಡಿದ್ದಾರೆ.

ಕೊರೊನಾ ಸೋಂಕು ವ್ಯಾಪಕವಾಗಿ ಹಡುತ್ತಿದೆ. ಜನರ ತುರ್ತು ಸೇವೆಯನ್ನು ಒದಗಿಸಬೇಕಾಗಿದ್ದ ಉಡುಪಿ ಜಿಲ್ಲೆಯ ಹಲವು ವೈದ್ಯರು ತಮ್ಮ ಕ್ಲಿನಿಕ್ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಿದ್ದಾರೆ. ಇದರಿಂದಾಗಿ ಜನಸಾಮಾನ್ಯರು ಆರೋಗ್ಯ ಸೇವೆಗೆ ಪರದಾಡುವ ಸ್ಥಿತಿ ಬಂದೊದಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಬಾಗಿಲು ಮುಚ್ಚಿರುವ ಕ್ಲಿನಿಕ್ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಕೂಡಲೇ ಓಪನ್ ಮಾಡಬೇಕೆಂದು ತಾಕೀತು ಮಾಡಿದ್ದಾರೆ.

ಬೇರೆ ಸಮಯಗಳಲ್ಲಿ ಆರೋಗ್ಯ ಸೇವೆಯನ್ನು ಒದಗಿಸಿ, ಇಂತಹ ಸಮಯದಲ್ಲಿ ಬಾಗಿಲು ಮುಚ್ಚುವುದು ಸರಿಯಲ್ಲ. ಹೀಗೆ ಮಾಡಿದ್ರೆ ಅಂತವರ ವಿರುದ್ದ ಕ್ರಮ ಜರುಗಿಸುವುದಾಗಿಯೂ ವಾರ್ನಿಂಗ್ ನೀಡಿದ್ದಾರೆ.

Leave A Reply

Your email address will not be published.