ಉಡುಪಿ ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಶಂಕಿತ ಕೊರೊನಾ ! ಇಂದು ಕೈಸೇರುತ್ತೆ 12 ಮಂದಿ ಶಂಕಿತರ ವರದಿ

0

ಡುಪಿ : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ಜಿಲ್ಲೆಯಲ್ಲಿ ಶಂಕಿತ ಕೊರೊನಾ ಪ್ರಕಟಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಹೊಸದಾಗಿ 4 ಮಂದಿಗೆ ಶಂಕಿತ ಕೊರೊನಾ ಪತ್ತೆಯಾಗಿದ್ದು, 12 ಮಂದಿ ಶಂಕಿತರ ವರದಿ ಇಂದು ಜಿಲ್ಲಾಡಳಿತದ ಕೈ ಸೇರಲಿದೆ.

ಉಡುಪಿ ಜಿಲ್ಲೆಯಲ್ಲಿ ಹಲವು ಶಂಕಿತ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದರೂ ಕೂಡ ಯಾವುದೂ ಇದುವರೆಗೂ ದೃಢಪಟ್ಟಿಲ್ಲ. ಆದ್ರೀಗ ಕೊರೊನಾ ವೈರಸ್‍ಗೆ ಸಂಬಂಧಪಟ್ಟಂತೆ ಇವತ್ತು ನಾಲ್ಕು ಹೊಸ ಶಂಕಿತ ಪ್ರಕರಣಗಳು ದಾಖಲಾಗಿದೆ.

ಓರ್ವರನ್ನು ಕುಂದಾಪುರ ತಾಲೂಕು ಆಸ್ಪತ್ರೆ, ಇನ್ನೊರ್ವರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಹಾಗೂ ಇಬ್ಬರು ಶಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ನಾಲ್ವರು ಶಂಕಿತ ಕೊರೊನಾ ಪೀಡಿತರಿಗೆ ಶೀತ, ಕೆಮ್ಮು, ಕಫದ ಲಕ್ಷಣಗಳು ಕಂಡುಬಂದಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಇದುವರೆಗೂ 364 ಮಂದಿಯ ವಿದೇಶದಿಂದ ಆಗಮಿಸಿದ್ದು ಅವರ ಮೇಲೆ ನಿಗಾ ಇರಿಸಲಾಗುತ್ತಿದೆ. ಮಾತ್ರವಲ್ಲ ವಿದೇಶದಿಂದ ಬಂದವರು ನಿರ್ಲಕ್ಷ್ಯ ಮಾಡಿದ್ರೆ ಅಂತವರ ವಿರುದ್ದ ಕಠಿಣ ಕ್ರಮಕೈಗೊಳ್ಳುವುದಾಗಿ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚರಿಕೆಯನ್ನು ನೀಡಿದೆ.

Leave A Reply

Your email address will not be published.