ಉಡುಪಿ ವಿಹಾರ್ ಹೋಟೆಲ್ ನಲ್ಲಿ ಬಾಯ್ಲರ್ ಸ್ಪೋಟ : ಓರ್ವ ಸಾವು, ಮತ್ತೋರ್ವನ ಸ್ಥಿತಿ ಗಂಭೀರ

ಬೆಂಗಳೂರು : ಉಡುಪಿ ವಿಹಾರ್ ಹೋಟೆಲ್ ನಲ್ಲಿ ಬಾಯ್ಲರ್ ಸ್ಪೋಟ ಸಂಭವಿಸಿದ್ದು ಓರ್ವ ಕಾರ್ಮಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ರೆ, ಇನ್ನೋರ್ವ ಕಾರ್ಮಿಕ ಸ್ಥಿತಿ ಗಂಭೀರವಾಗಿದೆ.

ಬೆಂಗಳೂರಿನ ರಿಚ್ ಮಂಡ್ ಟೌನ್ ನಲ್ಲಿರುವ ಉಡುಪಿ ವಿಹಾರ್ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ. ಅಸ್ಸಾಂ ಮೂಲದ ಮನೋಜ್ ಎಂಬಾತ ಸ್ಪೋಟದ ತೀವ್ರತೆಗೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ರೆ, ಇನ್ನೋರ್ವ ಕಾರ್ಮಿಕ ಪ್ರದೀಪ್ ಗಂಭೀರವಾಗಿ ಗಾಯಗೊಂಡಿದ್ದಾನೆ.

ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Comments are closed.