ಉಡುಪಿ ಜಿಲ್ಲೆಗೆ ವಿನಾಯಿತಿ ಕೊಟ್ಟ ಸರಕಾರ: ಅನಗತ್ಯವಾಗಿ ಓಡಾಡಿದ್ರೆ ಕ್ರಮ : ಜಿಲ್ಲಾಧಿಕಾರಿ ಜಿ.ಜಗದೀಶ್

0

ಉಡುಪಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ಆದೇಶದಲ್ಲಿ ಗ್ರೀನ್ ಝೋನ್ ನಲ್ಲಿರುವ ಉಡುಪಿ ಜಿಲ್ಲೆಗೆ ಒಂದಿಷ್ಟು ವಿನಾಯಿತಿ ನೀಡಲಾಗಿದೆ. ಆದರೆ ಗ್ರೀನ್ ಝೋನ್ ವ್ಯಾಪ್ತಿಯಲ್ಲಿ ನೀಡಲಾಗುವ ಎಲ್ಲಾ ರೀತಿಯ ವಿನಾಯಿತಿಯನ್ನೂ ಉಡುಪಿ ಜಿಲ್ಲೆಯಲ್ಲಿ ನೀಡಲಾಗುತ್ತಿದೆ. ಆದರೆ ಲಾಕ್ ಡೌನ್ ಆದೇಶ ಮೇ 3ರ ವರೆಗೂ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಹೇಳಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಕೊನೆಯ ಪ್ರಕರಣ ದಾಖಲಾಗಿ 30 ದಿನಗಳು ಕಳೆದಿದ್ದು, ಸಹಜವಾಗಿಯೇ ಉಡುಪಿ ಜಿಲ್ಲೆ ಗ್ರೀನ್ ಝೋನ್ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ಗ್ರೀನ್ ಝೋನ್ ವ್ಯಾಪ್ತಿಯಲ್ಲಿ ಲಾಕ್ ಡೌನ್ ಆದೇಶವನ್ನು ಸರಕಾರ ಸಡಿಲಿಸಿದೆ ಅನ್ನೋ ಮಾತ್ರಕ್ಕೆ ತಮಗೆ ಬೇಕಾದಂತೆ ಇರಲು ಸಾಧ್ಯವಿಲ್ಲ. ಬೆಳಗ್ಗೆ 7 ಗಂಟೆಯಿಂದ 11 ಗಂಟೆಯ ವರೆಗೆ ಮಾತ್ರವೇ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.

ಕಟ್ಟಡ ನಿರ್ಮಾಣ, ಮನೆ ನಿರ್ಮಾಣ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಫ್ಯಾಕ್ಟರಿಗಳನ್ನು ಓಪನ್ ಮಾಡಲು ಸರಕಾರ ಅವಕಾಶ ಕಲ್ಪಿಸಿದೆ. ಆದರೆ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲನೆ ಮಾಡಲೇ ಬೇಕು. ಕಾರ್ಖಾನೆಗಳಲ್ಲಿ ಕೇವಲ ಶೇ.50ರಷ್ಟು ಸಿಬ್ಬಂಧಿಗಳನ್ನು ಮಾತ್ರವೇ ಬಳಕೆ ಮಾಡಬೇಕು. ಸಿಬ್ಬಂಧಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಲೇ ಬೇಕು.

ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರ್ಖಾನೆಗಳನ್ನು ಬಂದ್ ಮಾಡುವುದರ ಜೊತೆಗೆ ಮಾಲಕರ ವಿರುದ್ದವೂ ಕ್ರಮಕೈಗೊಳ್ಳಲಾಗುತ್ತದೆ. ಈ ಕುರಿತು ಈಗಾಗಲೇ ಎಸ್ಪಿ ಅವರ ಜೊತೆಗೆ ಚರ್ಚಿಸಲಾಗಿದೆ. ಎಸಿ ಹಾಗೂ ಪೊಲೀಸರಿಗೂ ಸೂಚನೆ ನೀಡಲಾಗಿದ್ದು, ನೋಡಲ್ ಆಫೀಸರ್ ಗಳನ್ನು ನೇಮಕ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ ಎಂದರು.

ಯಾವುದೇ ಕಾರಣಕ್ಕೂ ಬಂಗಾರ ಅಂಗಡಿ, ಮಲ್ಟಿ ಬ್ರ್ಯಾಂಡ್ ಶಾಪ್, ಸಿಂಗಲ್ ಬ್ರ್ಯಾಂಡ್ ಶಾಪ್, ಬ್ಯೂಟಿ ಪಾರ್ಲರ್, ಸೆಲೂನ್, ಸ್ಪಾಗಳನ್ನು ಓಪನ್ ಮಾಡೋದಕ್ಕೆ ಅವಕಾಶವಿಲ್ಲ. ಇನ್ನು ಹೋಟೆಲ್ ಗಳು ಓಪನ್ ಮಾಡಿದ್ರೂ ಕೂಡ ಪಾರ್ಸೆಲ್ ನೀಡಲು ಮಾತ್ರವೇ ಅವಕಾಶ ಕಲ್ಪಿಸಲಾಗಿದೆ. ಆಟೋಗಳು ರಸ್ತೆಗೆ ಇಳಿಯುವುದು ಕಂಡುಬರುತ್ತಿದೆ.

ಆದರೆ ಆಟೋ ಸೇರಿದಂತೆ ಸಾರ್ವಜನಿಕ ಸಾರಿಗೆಗೆ ಅವಕಾಶವಿಲ್ಲ. ಈಗಾಗಲೇ 750ಕ್ಕೂ ಅಧಿಕ ವಾಹನಗಳನ್ನು ಸೀಜ್ ಮಾಡಲಾಗಿದ್ದು, ಆಟೋಗಳು ರಸ್ತೆಗೆ ಇಳಿದ್ರೆ ಕ್ರಮಕೈಗೊಳ್ಳಲಾಗುತ್ತದೆ. ಇನ್ನು ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಪಾಸ್ ಹೊಂದಿರಲೇ ಬೇಕು. ಪಾಸ್ ತೊರಿಸಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲಬಹುದಾಗಿದೆ ಎಂದಿದ್ದಾರೆ.

Leave A Reply

Your email address will not be published.