ಕೊರೊನಾ ಸೋಂಕಿಗೆ ದೊಡ್ಡಣ್ಣ ಅಮೇರಿಕಾ ತತ್ತರ : ಒಂದೇ ದಿನ 1970 ಸಾವು, 11 ಭಾರತೀಯರು ಬಲಿ !

0

ನ್ಯೂಯಾರ್ಕ್ : ಡೆಡ್ಲಿ ಕೊರೊನಾ ಮಹಾಮಾರಿಗೆ ದೊಡ್ಡಣ್ಣ ಅಮೇರಿಕಾ ತತ್ತರಿಸಿ ಹೋಗಿದೆ. ಅಮೇರಿಕಾದಲ್ಲಿ ಒಂದೇ ದಿನ ಬರೋಬ್ಬರಿ 1970 ಮಂದಿ ಸಾವನ್ನಪ್ಪಿದ್ದು, ಕೊರೊನಾ ಸೋಂಕಿತರ ಸಂಖ್ಯೆ 4 ಲಕ್ಷದ ಗಡಿದಾಟಿದೆ.

ದಿನೇ ದಿನೇ ಅಮೇರಿಕಾದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇಂದು ಒಂದೇ ದಿನ ಅಮೇರಿಕಾದ ನ್ಯೂಯಾರ್ಕ್ ನಲ್ಲಿ ಬರೋಬ್ಬರಿ 779 ಮಂದಿ ಬಲಿಯಾಗಿದ್ದು, ಅಮೇರಿಕಾದಲ್ಲಿ 1,970 ಮಂದಿಯನ್ನು ಡೆಡ್ಲಿ ಕೊರೊನಾ ಆಹುತಿ ಪಡೆದಿದೆ.

ಅಮೇರಿಕಾದಲ್ಲಿ ಇದುವರೆಗೂ 4,27,735 ಮಂದಿ ಕೊರೊನಾಗೆ ತುತ್ತಾಗಿದ್ದಾರೆ. ಸುಮಾರು 15,679 ಮಂದಿ ಸಾವನ್ನಪ್ಪಿದ್ದಾರೆ. ಅದ್ರಲ್ಲೂ ಅಮೇಕಾದ ನ್ಯೂಯಾರ್ಕ್ ನಗರದಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರನ್ನು ಕೊರೊನಾ ಬಲಿ ಪಡೆದಿದೆ, ಇದುವರೆಗೆ ನ್ಯೂಯಾರ್ಕ್ ನಗರವೊಂದರಲ್ಲಿಯೇ 7,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಮೇರಿಕಾದಲ್ಲಿ ವ್ಯಾಪಿಸುತ್ತಿರೋ ಸೋಂಕು ಭಾರತೀಯರನ್ನೂ ಕೂಡ ಬಲಿ ಪಡೆದಿದೆ, ಇದುವರೆಗೆ ಅಮೇರಿಕಾದಲ್ಲಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿ ಸಾವನ್ನಪ್ಪಿರುವ ಭಾರತೀಯರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಕೇವಲ ಅಮೇರಿಕಾ ಮಾತ್ರವಲ್ಲದೇ ಇಟಲಿಯಲ್ಲಿಯೂ ಕೊರೊನಾ ಅಬ್ಬರ ಜೋರಾಗಿದೆ. ಕೊರೊನಾ ಮಹಾಮಾರಿಗೆ ಇಟಲಿಯಲ್ಲಿ ಒಂದೇ ದಿನ 690 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ ಇಟಲಿಯಲ್ಲಿ 1,43, 279 ಮಂದಿ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದರೆ, ಇದುವರೆಗೂ 18,279 ಮಂದಿಯನ್ನು ಡೆಡ್ಲಿ ಕೊರೊನಾ ಬಲಿ ಪಡೆದಿದೆ.

ಇನ್ನು ಸ್ಪೈನ್ ನಲ್ಲಿಯೂ ಕೊರೊನಾ ಮಹಾಮಾರಿ ಅಟ್ಟಹಾಸವನ್ನು ಮರೆಯುತ್ತಿದ್ದು, ಸ್ಪೈನ್ ನಲ್ಲಿ ಇದುವರೆಗೂ 1,52,238 ಮಂದಿ ಸೋಂಕಿತರಾಗಿದ್ದು, 15,238 ಮಂದಿಯನ್ನು ಡೆಡ್ಲಿ ಕೊರೊನಾ ಆಹುತಿ ಪಡೆದಿದೆ. ಫ್ರಾನ್ಸ್ ನಲ್ಲಿಯೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರಿದ್ದಾರೆ.

ಫ್ರಾನ್ಸ್ ನಲ್ಲಿ ಇದುವರೆಗೂ 1,12,950 ಸೋಂಕಿತರಾಗಿದ್ದು, 10,869 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಕೊರೊನಾ ಮಹಾಮಾರಿ ತವರು ಅನಿಸಿಕೊಂಡಿರೋ ಚೀನಾದಲ್ಲಿ ಇದುವರೆಗೆ 81,665 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದುವರೆಗೆ 3,335 ಬಲಿಯಾಗಿದ್ದಾರೆ.

ಇರಾನ್ ದೇಶದಲ್ಲಿಯೂ ಕೊರೊನಾ ಪೀಡಿತರ ಸಂಖ್ಯೆಗೇನೂ ಕಡಿಮೆಯಿಲ್ಲ 66,220ಗೆ ಕೊರೊನಾ ಸೋಂಕು ಕಾಣಸಿಕೊಂಡಿದ್ದರೆ, 4,110 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಬೆಲ್ಜಿಯಂನಲ್ಲಿ 24,983 ಮಂದಿಗೆ ಕೊರೊನಾ ಸೋಂಕು ಕಾಣಸಿಕೊಂಡಿದ್ದರೆ, 2,523 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

ಸ್ವಿಟ್ಜರ್ ಲ್ಯಾಂಡ್ ನಲ್ಲಿಯೂ ಕೊರೊನಾ ಅಬ್ಬರ ಜೋರಾಗಿದೆ. ಇದುವರೆಗೂ 23,799 ಮಂದಿಗೆ ಕೊರೊನಾ ಸೋಂಕು ಕಾಣಸಿಕೊಂಡಿದ್ದರೆ, 937 ಮಂದಿಯನ್ನು ಬಲಿ ಪಡೆದಿದೆ. ನೆದರ್ ಲ್ಯಾಂಡ್ ನಲ್ಲಿ 21,762ಗೆ ಸೋಂಕು ಕಾಣಸಿಕೊಂಡ್ರೆ, 2396ಯನ್ನು ಡೆಡ್ಲಿ ಕೊರೊನಾ ಆಹುತಿ ಪಡೆದಿದೆ.

ಒಟ್ಟಿನಲ್ಲಿ ವಿಶ್ವದ 220ಕ್ಕೂ ಅಧಿಕ ದೇಶಗಗಳಲ್ಲಿ ಡೆಡ್ಲಿ ಮಹಾಮಾರಿ ಒಕ್ಕರಿಸಿಕೊಂಡಿದ್ದು, ಕೊರೊನಾ ಸೋಂಕಿನ ವಿರುದ್ದ ಜಗತ್ತೇ ಹೋರಾಟಕ್ಕೆ ಇಳಿದಿದೆ. ದೊಡ್ಡಣ್ಣ ಅಮೇರಿಕಾ, ಇಟಲಿ, ಫ್ರಾನ್ಸ್ ಕೊರೊನಾ ಹೆಸರು ಕೇಳಿದ್ರೆ ಸಾಕು ಬೆಚ್ಚಿ ಬೀಳುವ ಸ್ಥಿತಿಗೆ ಬಂದು ತಲುಪಿವೆ.

Leave A Reply

Your email address will not be published.