ದೊಡ್ಡವರನ್ನೂ ಬಿಟ್ಟಿಲ್ಲ ಕೊರೋನಾ ಮಹಾಮಾರಿ : ರಾಜಸ್ಥಾನ ಮಾಜಿ ಸಿಎಂಗೆ ಕೊರೊನಾ ನೆಗೆಟಿವ್

0

ರಾಜಸ್ಥಾನ : ಕೊರೋನಾ ಭಾರತದಾದ್ಯಂತ ಅಟ್ಟಹಾಸ ಮೆರೆಯುತ್ತಿದೆ. ಈಗಾಗಲೇ ಕೋರೋನಾ ಸಂಖ್ಯೆ 3೦೦ ರ ಗಡಿಯತ್ತ ಸಾಗುತ್ತಿದೆ. ದಿನಕ್ಕೆ 3 ರಿಂದ 4 ಪ್ರಕರಣಗಳು ದಾಖಲಾಗುತ್ತಿರೋದು ಎಲ್ಲರ ನಿದ್ದೆ ಕೆಡಿಸಿದೆ. ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಸಾಕಷ್ಟು ಕ್ರಮಕೈಗೊಳ್ಳುತ್ತಿದೆ. ಮತ್ತೊಂದೆಡೆ ಕೊರೋನಾ ಬಿಸಿ ಜನ ಸಾಮಾನ್ಯರಿಗೆ ಮಾತ್ರವಲ್ಲ ಗಣ್ಯಾತಿಗಣ್ಯರಿಗೆ ತಟ್ಟಿದೆ.

ಈಗಾಗಲೇ ಸಾಕಷ್ಟು ಸೆಲಬ್ರೆಟಿ ಗಳು ಈಗಾಗಲೇ ಎಚ್ಚೆತ್ತುಕೊಂಡಿದ್ದಾರೆ. ಹಲವು ತಾರೆಯರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನೂ ಅಭಿಮಾನಿಗಳ ಜೊತೆ ಆಚರಿಸಿಕೊಂಡಿಲ್ಲ, ಬದಲಾಗಿ ಯಾರು ತಮ್ಮ ಹುಟ್ಟುಹಬ್ಬಕ್ಕೆ ಬರಬೇಡಿ ಅನ್ನೋ ಮೂಲಕ ಸ್ವಚ್ಚತೆ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸಿದ್ದಾರೆ. ಆದರೆ ರಾಜಸ್ಥಾನ ಮಾಜಿ ಸಿಎಂ ವಸುಂದರ ರಾಜೆಗೆ ಮಾತ್ರ ಕೊರೋನಾ ಭೀತಿ ಎದುರಾಗಿದೆ.

ಇದಕ್ಕೆಲ್ಲಾ ಕಾರಣ ವಸುಂದರ ರಾಜೆ ಭಾಗಿಗಾಗಿದ್ದ ಒಂದು ಪಾರ್ಟಿ. ವಸುಂದರಾ ರಾಜೆ ಹಾಗೂ ಆಕೆಯ ಪುತ್ರ ದುಶ್ಯಂತ್ ಸಿಂಗ್ ಲಕ್ನೋನಲ್ಲಿ ನಡೆದ ಬಾಲಿವುಡ್ ನ ಖ್ಯಾತ ಗಾಯಕಿ ಕನ್ನಿಕಾ ಕಪೂರ್ ಅವರ ಖಾಸಗಿ ಔತಣ ಕೂಟದಲ್ಲಿ ಭಾಗಿಯಾಗಿದ್ರು. ಇದಾದ ಬಳಿಕ ಕನ್ನಿಕಾ ಕಪೂರ್ ಕೊರೋನಾ ಇರೋದು ಪತ್ತೆಯಾಗಿದೆ. ಹೀಗಾಗಿ ರಾಜೆ ಹಾಗೂ ಆಕೆಯ ಪುತ್ರ ದುಶ್ಯಂತ್ ಸಿಂಗ್ ರನ್ನು ಕೂಡಾ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಆದರೆ ವಸುಂದರಾ ರಾಜೆ, ದುಶ್ಯಂತ್ ರಲ್ಲಿ ಕೊರೋನಾ ಇರೋದು ಪತ್ತೆಯಾಗಿಲ್ಲ.

ವಸುಂದರಾ ರಾಜೆ ಟ್ವೀಟ್
ರಿಪೋರ್ಟ್ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ವಸುಂದರಾ ಟ್ವೀಟ್ ಮಾಡಿದ್ದಾರೆ. “ನಮಗೆ ನಡೆಸಲಾದ ಕೊವಿಡ್ ೧೯ ಪರೀಕ್ಷೆಯ ಫಲಿತಾಂಶ ಬಂದಿದೆ. ಫಲಿತಾಂಶ ನೆಗೆಟಿವ್ ಬಂದಿದೆ ಅಂಲ ಹೇಳಲು ಸಂತೋಷವಾಗ್ತಿದೆ. ಆದರೂ ನಾವು ನನ್ನ ಪುತ್ರ 14 ದಿನ ಪ್ರತ್ಯೇಕವಾಗಿದ್ದು ಎಚ್ಚರಿಕೆ ವಹಿಸುತ್ತೇವೆ” ಎಂದಿದ್ದಾರೆ. ವಸುಂಧರ ರಾಜೆಯ ಜೊತೆಗೆ ಹಲವು ಗಣ್ಯರು ಕೂಡಾ ಔತಣ ಕೂಟದಲ್ಲಿ ಭಾಗಿಯಾಗಿದ್ರು ಎನ್ನಲಾಗ್ತಿದೆ. ಹೀಗಾಗಿ ಗಣ್ಯರ ಆರೋಗ್ಯ ಪರೀಕ್ಷೆಯನ್ನು ನಡೆಸಲಾಗಿದ್ದು, ಅವರಲ್ಲಿ ಕೊವಿಡ್-19 ಲಕ್ಷಣ ಕಂಡು ಬಂದಿಲ್ಲ ಎಂದು ತಿಳಿದುಬಂದಿದೆ.

Leave A Reply

Your email address will not be published.