ಚೀನಾದ ವುಹಾನ್ ನಲ್ಲಿ ಮತ್ತೆ ಕಿಲ್ಲರ್ ಕೊರೊನಾ ಆರ್ಭಟ !

0

ವುಹಾನ್ : ವಿಶ್ವವನ್ನೇ ಬೆಚ್ಚಿ ಬೀಳಿದ್ದ ಕೊರೊನಾ ವೈರಸ್ ಹುಟ್ಟಿಗೆ ಕಾರಣವಾಗಿರೋ ಚೀನಾದ ವುಹಾನ್ ಪ್ರಾಂತ್ಯದಲ್ಲೀಗ ಮತ್ತೆ ಕೊರೊನಾ ಅಟ್ಟಹಾಸ ಶುರುಮಾಡಿದೆ. ಕಳೆದ ಕೆಲ ದಿನಗಳಿಂದಲೂ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಚೀನಾ 1.1 ಕೋಟಿ ಜನರನ್ನು ತಪಾಸಣೆ ನಡೆಸಲು ಸಿದ್ದತೆ ಮಾಡಿಕೊಂಡಿದೆ.

ಕೊರೊನಾ ವೈರಸ್ ನಿಂದಾಗಿ ಇಂದು ವಿಶ್ವವೇ ತಲ್ಲಣಿಸಿ ಹೋಗಿದೆ. ಕೊರೊನಾ ಹೆಸರು ಕೇಳಿದ್ರೆ ಸಾಕು ತಟ್ಟನೆ ವುಹಾನ್ ನಗರದ ನೆನಪಾಗುತ್ತೆ. ಕಿಲ್ಲರ್ ಕೊರೊನಾ ವಿರುದ್ದದ ಹೋರಾಟಕ್ಕೆ ಗೆದ್ದು ಬೀಗಿದ್ದ ಚೀನಾಕ್ಕೆ ಇದೀಗ ಎರಡನೇ ಸುತ್ತಿನ ತಲೆನೋವು ಶುರುವಾಗಿದೆ.

ವೈರಸ್ ಹುಟ್ಟಿಗೆ ಕಾರಣವಾಗಿರುವ ವುಹಾನ್ ನಗರದಲ್ಲಿಯೇ ಇದೀಗ ಕೊರೊನಾ ಸೋಂಕು ಮತ್ತೆ ಆರ್ಭಟಿಸೋದಕ್ಕೆ ಶುರುಮಾಡಿದೆ. ತನ್ನ ದೇಶದಲ್ಲಿ ಕೊರೊನಾ ಸೋಂಕು ಇಲ್ಲವೇ ಇಲ್ಲಾ ಅಂತಿದ್ದ ಚೀನಾ ಕೊರೊನಾ ವಿರುದ್ದದ ಹೋರಾಟಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದೆ.

ವುಹಾನ್ ಪ್ರಾಂತ್ಯದಲ್ಲಿರುವ ಜನರನ್ನು ಅಂದರೆ ಸರಿ ಸುಮಾರು 1.1 ಕೋಟಿಗೂ ಅಧಿಕ ಜನರನ್ನು ಸಾಮೂಹಿಕವಾಗಿ ಕೊರೊನಾ ತಪಾಸಣೆಗೆ ಒಳಪಡಿಸಲು ಮುಂದಾಗಿದೆ. ಕಳೆದ 10 ದಿನಗಳಿಂದಲೂ ಕೊರೊನಾ ಸೋಂಕು ಹೊಸದಾಗಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಚೀನಾದ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಕೊರೊನಾ ಶಂಕಿತರನ್ನು ಈಗಾಗಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ಕಾರ್ಯವನ್ನು ನಡೆಸುತ್ತಿದೆ. ವುಹಾನ್ ಪ್ರಾಂತ್ಯದಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಚೀನಾದಲ್ಲಿ ಎರಡನೇ ಹಂತದಲ್ಲಿಯೂ ಸಾವಿರಾರು ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಆದರೆ ಚೀನಾ ಮಾತ್ರ ಈ ಮಾಹಿತಿಯನ್ನು ಬಿಟ್ಟುಕೊಡುತ್ತಿಲ್ಲ. ಕೇವಲ 10 ದಿನಗಳ ಒಳಗಾಗಿ ವುಹಾನ್ ಪ್ರಾಂತ್ಯದ ಜನರನ್ನು ಕಡ್ಡಾಯವಾಗಿ ಕೊರೊನಾ ತಪಾಸಣೆ ನಡೆಸಲೇ ಬೇಕು ಅಂತಾ ಚೀನಾ ಸರಕಾರವೀಗ ಆರೋಗ್ಯ ಇಲಾಖೆಗೆ ಆದೇಶಿಸಿದೆ. ಹೀಗಂತಾ ಚೀನಾದ ಮಾದ್ಯಮಗಳು ವರದಿ ಮಾಡಿವೆ.

ಎರಡನೇ ಸುತ್ತಿನ ಕೊರೊನಾ ಸೋಂಕು ಚೀನಾಕ್ಕೆ ಹೊಸ ತಲೆನೋವು ತರಿಸಿದೆ. ಸೋಂಕು ವ್ಯಾಪಿಸದಂತೆ ಚೀನಾ ಸರಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಕೊರೊನಾ ಕಾಣಿಸಿಕೊಂಡಿರುವುದು ವುಹಾನ್ ಪ್ರಾಂತ್ಯದ ಜನರನ್ನು ಆತಂಕಕ್ಕೆ ದೂಡಿದೆ.

Leave A Reply

Your email address will not be published.