ಪೊಲೀಸ್ ಶ್ವಾನಗಳಿಗೂ ತಟ್ಟಿತು ಕೊರೊನಾ ಎಫೆಕ್ಟ್..!

0

ಬೆಂಗಳೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಜನ ಸಂಕಷ್ಟಕ್ಕೆ ಒಳಗಾಗಿರುವುದು ಮಾತ್ರವಲ್ಲ ಇದೀಗ ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಪೊಲೀಸ್ ಶ್ವಾನಗಳಿಗೂ ತಟ್ಟಿದೆ. ಅಪರಾಧಗಳ ಸಂಖ್ಯೆ ಕಡಿಮೆಯಾಗಿದ್ರಿಂದಾಗಿ ಶ್ವಾನಗಳಿಗೆ ಅಪರಾಧದ ವಾಸನೆ ಮನೆಯುವ ಸಾಧ್ಯತೆಯಿದೆ. ಹೀಗಾಗಿ ಪೊಲೀಸ್ ಇಲಾಖೆ ಶ್ವಾನಗಳಿಗೆ ಅಣಕು ತರಬೇತಿ ನೀಡ್ತಿದ್ದಾರೆ.

ಪೊಲೀಸ್ ಶ್ವಾನಗಳು ಯಾವುದೇ ದೊಡ್ಡಮಟ್ಟದ ಅಪರಾಧ ಪ್ರಕರಣಗಳು, ಬಾಂಬ್ ಬ್ಲಾಸ್ಟ್, ಉಗ್ರರಕರಿನೆರಳು ಹೀಗೆ ನಾನ ಅಪರಾಧ ಪ್ರಕರಣಗಳನ್ನ ಪತ್ತೆ ಹಚ್ಚುವ ಕೆಲಸ ಮಾಡುತ್ತೆ ಸದ್ಯಕ್ಕೆ ಚಟುವಟಿಕೆ ಕಡಿಮೆ ಇದ್ದು ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗದ ಕಾರಣ ಪೊಲೀಸ್ ಶ್ವಾನ ಸದ್ಯ ಮಂಕಾಗಿದೆ.ಸದ್ಯ ಲಾಕೌಡೌನ್ ಹೇರಲಾಗಿದ್ದು ಗಣ್ಯರ ಕಾರ್ಯಕ್ರಮ ಹಾಗೆ ಅಪರಾಧ ಚಟುವಟಿಕೆಗಳು ಬಹುತೇಕವಾಗಿ ಕಡಿಮೆಯಾಗಿದೆ. ಹೀಗಾಗಿ ಪೊಲೀಸ್ ಶ್ವಾನಗಳು ಕೆಲಸ ಇಲ್ಲದೇ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕ್ರೈಂ ಚಟುವಟಿಕೆಗಳನ್ನು ಪತ್ತೆ ಮಾಡೋದನ್ನ ಮರೆಯಬಾರದೆಂದು ದಿನ ನಿತ್ಯ ಟ್ರೈನಿಂಗ್ ಕೊಡ್ತಿದ್ದಾರೆ.

ಪೊಲೀಸ್ ಇಲಾಖೆಯ ಪೊಲೀಸರು ಯಾವ ರೀತಿ ಕಳ್ಳರನ್ನ ಭಯೋತ್ಪಾದಕರನ್ನ ಅಥವಾ ಸೂಕ್ಷ ಪರಿಸ್ಥಿತಿ ತುರ್ತು ಸಂಧರ್ಭದಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸಬೇಕೆಂಬ ಅರಿವು ಇರುತ್ತದೆ. ಇವರ ಜೊತೆ ಶ್ವಾನಗಳು ಪೊಲೀಸರ ಜೊತೆನೆ ಎಂತಹ ಕಠಿಣ ಸಂಧರ್ಭದಲ್ಲಿ ದಿನದ 24ಗಂಟೆ ಚುರುಕಾಗಿರಬೇಕು ಸದ್ಯ ಕೊರೊನಾ ಸೋಂಕು ಪತ್ತೆಯಾದ ನಂತ್ರ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಪೊಲೀಸ್ ಶ್ವಾನ ಗಳು ಭಾಗಿಯಾಗಿಲ್ಲ.

ಆಡುಗೋಡಿ ಬಳಿ ಇರುವ ಪೊಲೀಸರ ಶ್ವಾನ ಕೇಂದ್ರದಲ್ಲಿ ಡಾಬರ್ ಮನ್, ಜರ್ಮನ್ ಶೆಪರ್ಡ್, ಲೆಬೋಡರ್ ಸೇರಿ ಒಟ್ಟು ಸುಮಾರು 62 ಪೊಲಿಸ್ ಡ್ಯಾಗ್ ಸ್ಕಾಡ್ ಇದ್ದು ಇವು ಸಿಲಿಕಾನ್ ಸಿಟಿಯಲ್ಲಿ ಬಹುತೇಕ ಅಪರಾಧ ಪ್ರಕರಣಗಳನ್ನ ಪತ್ತೆ ಹಚ್ಚುವಲ್ಲಿ ಎಕ್ಸ್ ಪರ್ಟ್ ಗಳಾಗಿವೆ, ಸದ್ಯ ಇವುಗಳನ್ನ ಮಂಕ್ ಆಗದ ರೀತಿ ನೋಡಿಕೊಳ್ಳಲು ಎಸಿಪಿ ನಿಂಗರೆಡ್ಡಿ ಅವರ ನೇತೃತ್ವದಲ್ಲಿ ತಂಡ ದಿನಲು ಕ್ರೈಂ ಚಟುವಟಿಕೆ ಹೇಗೆ ತಡೆಗಟ್ಟೋದು ಅಪರಾಧಿಗಳನ್ನು ಹೇಗೆ ಹಿಡಿಯೋದು ಎಂಬ ಟ್ರೈನಿಂಗನ್ನ ಪ್ರತಿ ದಿನ ನೀಡ್ತಿದ್ದಾರೆ. ಒಟ್ಟು 62 ಪೊಲೀಸ್ ಶ್ವಾನಗಳನ್ನ ನೋಡಿಕೊಳ್ಳಲು ಒಬ್ಬೊಬ್ಬ ಕಾನ್ಸ್ಟೇಬಲ್ ಗಳು ಇದ್ದು ಅವರು ಪ್ರತಿದಿನ ಪಳಗಿಸಿ ಟ್ರೈನಿಂಗ್ ನಡೆಸ್ತಾರೆ.

ಕೇವಲ ವಾಸನೆ ಗಳ ಮೂಲಕ ಅಪರಾಧಿಗಳನ್ನ ಪತ್ತೆ ಹಚ್ಚುವ ತಾಕತ್ತು ಶ್ವಾನಗಳಿಗೆ ಇದೆ, ಹೀಗಾಗಿ ಸಿಲಿಕಾನ್ ಸಿಟಿಯ ಅಪರಾಧಗಳನ್ನು ಮಟ್ಟ ಹಾಕಲೂ ಶ್ವಾನಗಳು ಯಾವುದೇ ಮರೆವು ಉಂಟಾಗಬಾರದು ಎಂದು ಪೊಲೀಸರು ಲಾಕ್‌ಡೌನ್ ಸಂಧರ್ಭದಲ್ಲಿ ಕೂಡ ಟ್ರೈನಿಂಗ್ ನೀಡ್ತಿದ್ದಾರೆ.

Leave A Reply

Your email address will not be published.