ವಾಟ್ಸಾಪ್, ಗೂಗಲ್, ಟ್ವೀಟರ್ ಅಶ್ಲೀಲ ಸೈಟ್ ! ನೋಟಿಸ್ ಜಾರಿ ಮಾಡಿದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ

0

ನವದೆಹಲಿ : ಲಾಕ್ ಡೌನ್ ಹಿನ್ನೆಲೆಯಲ್ಲಿ ಪೋರ್ನ್ ಸೈಟುಗಳ ವೀಕ್ಷಣೆ ಹೆಚ್ಚಳವಾಗಿದೆ. ಅದ್ರಲ್ಲೂ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸುವಂತೆ ಗೂಗಲ್, ಟ್ವೀಟರ್ ಮತ್ತು ವಾಟ್ಸಾಪ್‌ಗಳಿಗೆ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಕೊರೊನಾ ವೈರಸ್ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಜಗತ್ತೀನಾದ್ಯಂತ ಪೋರ್ನ್ ಸೈಟುಗಳ ವೀಕ್ಷಿಸುವವರ ಸಂಖ್ಯೆ ದುಪ್ಪಟ್ಟಾಗಿದೆ.

ಅದ್ರಲ್ಲೂ ಭಾರತದಲ್ಲಿ ಮಕ್ಕಳೇ ಹೆಚ್ಚಾಗಿ ವೀಕ್ಷಣೆ ಮಾಡುತ್ತಿದ್ದಾರೆ. ಈ ಬಗ್ಗೆ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಆತಂಕ ವ್ಯಕ್ತಪಡಿಸಿದೆ.

ಹಲವು ವರ್ಷಗಳಿಂದಲೂ ಮಕ್ಕಳು ಹೆಚ್ಚಾಗಿ ಪೋರ್ನ್ ಸೈಟ್ ಗಳತ್ತ ಆಕರ್ಷಿತರಾಗುತ್ತಿದ್ದು, ಇಂತಹ ಅಶ್ಲೀಲ ಸೈಟುಗಳನ್ನು ಬ್ಯಾನ್ ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಅಲ್ಲದೇ ಭಾರತದಲ್ಲಿ ಹಲವು ಸೈಟ್ ಗಳನ್ನು ಬ್ಯಾನ್ ಮಾಡಲಾಗಿದೆ.

ಇದೀಗ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ವಿಚಾರವಾಗಿ ನೀಡಿರುವ ನೋಟಿಸ್‌ಗೆ ಸಾಮಾಜಿಕ ಮಾಧ್ಯಮಗಳಾದ ಗೂಗಲ್, ಟ್ವಿಟರ್ ಮತ್ತು ವಾಟ್ಸಾಪ್ ಗಳು ಎಪ್ರಿಲ್ 30ರ ಒಳಗಾಗಿ ಉತ್ತರಿಸುವಂತೆ ನೋಟೀಸ್ ಜಾರಿ ಮಾಡಿದೆ.

Leave A Reply

Your email address will not be published.