ಬಡಮಕ್ಕಳ ಕಲ್ಯಾಣಕ್ಕೆ ಕ್ರಿಕೆಟ್ ಕಿಟ್ ಹರಾಜಿಟ್ಟ ಕನ್ನಡಿಗ ಕೆ.ಎಲ್.ರಾಹುಲ್ !

0

ಟೀಂ ಇಂಡಿಯಾದ ಪಾಲಿಗೆ ಕನ್ನಡಿಗ ಕೆ.ಎಲ್.ರಾಹುಲ್ ಭರವಸೆಯ ಆಟಗಾರ. ಸದ್ದಿಲ್ಲದೇ ಸಮಾಜ ಸೇವಾ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರೋ ರಾಹುಲ್ ಇದೀಗ ಬಡಮಕ್ಕಳ ಕಲ್ಯಾಣಕ್ಕಾಗಿ ತನ್ನ ಕ್ರಿಕೆಟ್ ಕಿಟ್ ಹರಾಜು ಹಾಕಿದ್ದಾರೆ. ಅದರಿಂದ ಬಂದ 8 ಲಕ್ಷ ರೂಪಾಯಿ ಹಣವನ್ನು ಬಡಮಕ್ಕಳ ಕಲ್ಯಾಣ ಕಾರ್ಯಕ್ಕೆ ನೀಡಿದ್ದಾರೆ.

ಅವೇರ್ ಫೌಂಡೇಶನ್ ಬಡ ಮಕ್ಕಳಿಗಾಗಿ ಸಹಾಯ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೆ.ಎಲ್.ರಾಹುಲ್ ಬ್ಯಾಟ್, ಟೆಸ್ಟ್ ಜೆರ್ಸಿ, ಏಕದಿನ ಜೆರ್ಸಿ, ಹೆಲ್ಮೆಟ್, ಟಿ20 ಜೆರ್ಸಿ ಸೇರಿದ ಕ್ರಿಕೆಟ್ ಕಿಟ್ ಹರಾಜು ಮಾಡಿದ್ದಾರೆ.

ಈ ಪೈಕಿ ಬ್ಯಾಟ್ ಬರೋಬ್ಬರಿ 2,64,228 ರೂ.ಗಳಿಗೆ ಹರಾಜಾಗಿದ್ರೆ, ಟೆಸ್ಟ್ ಜರ್ಸಿ 1,32,774 ರೂ. ಗಳಿಗೆ ಮಾರಾಟವಾಗಿದೆ.

ಏಕದಿನ ಪಂದ್ಯದ ಜರ್ಸಿ 1,13,240 ರೂ. ಬಿಕರಿಯಾದ್ರೆ ಹೆಲ್ಮೆಟ್ 1,22,677 ರೂಪಾಯಿಗೆ ಹಾಗೂ ಪ್ಯಾಡ್‍ಗಳು 33,028 ರೂ. ಹರಾಜಾಗಿದೆ.

ಇನ್ನು ಟಿ20 ಜರ್ಸಿ 1,04,824 ರೂ.ಗೆ ಹರಾಜು ಮಾಡಲಾಗಿದೆ. ಕ್ರಿಕೆಟ್ ಕಿಟ್ ಹರಾಜಿನಿಂದ ರಾಹುಲ್ ಗೆ ಒಟ್ಟು 7,99,553 ರೂ. ಸಿಕ್ಕಿದೆ. ಈ ಹಣವನ್ನು ಬಡ ಮಕ್ಕಳ ಕಲ್ಯಾಣ ಕಾರ್ಯಕ್ಕೆ ದೇಣಿಗೆಯಾಗಿ ನೀಡಿದ್ದಾರೆ.

28ನೇ ವಯಸ್ಸಿಗೆ ಕಾಲಿಟ್ಟಿರೋ ಕೆ.ಎಲ್.ರಾಹುಲ್ ತನ್ನ ಬರ್ತಡೇ ದಿನ ತನ್ನ ಕ್ರಿಕೆಟ್ ಪ್ಯಾಡ್, ಗ್ಲೌಸ್, ಹೆಲ್ಮೇಟ್ ಹಾಗೂ ಜೆರ್ಸಿಗಳನ್ನು ಸಹಯೋಗ ಪಾಲುದಾ ಭಾರತ್ ಆರ್ಮಿಗೆ ಕೊಡುಗೆಯಾಗಿ ನೀಡುವುದಾಗಿ ಹೇಳಿದ್ದರು.

ಮಂಗಳೂರಿನ ಕೆ.ಎಲ್.ರಾಹುಲ್ ಇದೀಗ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಟೆಸ್ಟ್, ಏಕದಿನ ಹಾಗೂ ಟಿ20 ಸರಣಿಗಳಲ್ಲಿಯೂ ಭರವಸೆಯನ್ನು ಮೂಡಿಸಿದ್ದಾರೆ.

ಇದೀಗ ಬಡ ಮಕ್ಕಳ ಕಲ್ಯಾಣಕ್ಕಾಗಿ ಕನ್ನಡಿಗ ಕೆ.ಎಲ್. ರಾಹುಲ್ ಮನ ಮಿಡಿದಿರೋದು ಅಭಿಮಾನಿಗಳಿಗೆ ಖುಷಿಯನ್ನು ತಂದಿದೆ.

Leave A Reply

Your email address will not be published.